* ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇಂಪ್ಯಾಕ್ಟ್ ಪರಿಚಯ* ಅಕ್ಟೋಬರ್ 11ರಿಂದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ* ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ

ನವದೆಹಲಿ(ಸೆ.17): ಮುಂಬರುವ ಅಕ್ಟೋಬರ್ 11ರಿಂದ ಆರಂಭವಾಗಲಿರುವ ಸಯ್ಯರ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಬಿಸಿಸಿಐ ಇಂಪ್ಯಾಕ್ಟ್‌ ಪ್ಲೇಯರ್ ರೂಲ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಚುಟುಕು ಕ್ರಿಕೆಟ್‌ಗೆ ಮತ್ತಷ್ಟು ರೋಚಕತೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಭಾವಿಸಲಾಗುತ್ತಿದೆ. 2022-23ರ ದೇಸಿ ಕ್ರಿಕೆಟ್‌ ಋುತುವಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಅಕ್ಟೋಬರ್ 11ರಂದು ತನ್ನ ಮೊದಲ ಪಂದ್ಯವನ್ನು ಮಹಾರಾಷ್ಟ್ರ ವಿರುದ್ಧ ಆಡಲಿದೆ. ರಾಜ್ಯ ತಂಡವು ಮೊಹಾಲಿಯಲ್ಲಿ ಗುಂಪು ಹಂತದ ಪಂದ್ಯಗಳನ್ನು ಆಡಲಿದೆ. 

ಇದೀಗ ದೇಶಿ ಚುಟುಕು ಕ್ರಿಕೆಟ್‌ನ ರೋಚಕತೆ ಹೆಚ್ಚಿಸಲು ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್‌ ಪರಿಚಯಿಸಲು ಮುಂದಾಗಿದೆ. ಅಷ್ಟಕ್ಕೂ ಏನಿದು ಇಂಪ್ಯಾಕ್ಟ್‌ ಪ್ಲೇಯರ್ಸ್‌ ರೂಲ್ಸ್‌ ಎನ್ನುವುದನ್ನು ನೋಡುವುದಾದರೇ, 

* ಪ್ರತಿ ತಂಡವು ಟಾಸ್ ಸಂದರ್ಭದಲ್ಲಿ ನಾಲ್ವರು ಆಟಗಾರರನ್ನು ಸಬ್‌ಸ್ಟಿಟ್ಯೂಟ್‌ ಆಗಿ ಟೀಂ ಶೀಟ್‌ನಲ್ಲಿ ಮೊದಲೇ ಹೆಸರಿಸಬೇಕು. ಈ ನಾಲ್ವರು ಆಟಗಾರರ ಪೈಕಿ ಓರ್ವ ಆಟಗಾರನನ್ನು ಮಾತ್ರ ತಂಡವು ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬಳಸಿಕೊಳ್ಳಬಹುದಾಗಿದೆ. ಎರಡೂ ತಂಡಗಳು ತಲಾ ಒಬ್ಬೊಬ್ಬ ಇಂಪ್ಯಾಕ್ಟ್‌ ಆಟಗಾರನನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಇದು ಖಡ್ಡಾಯವೇನಲ್ಲ.

* ಈ ಇಂಪ್ಯಾಕ್ಟ್‌ ಪ್ಲೇಯರ್‌ ಅನ್ನು ತಂಡವು ಇನಿಂಗ್ಸ್‌ನ 14ನೇ ಓವರ್‌ಗೂ ಮುಂಚೆ ಆಡುವ ಹನ್ನೊಂದರ ಬಳಗದೊಳಗೆ ಸೇರಿಸಿಕೊಳ್ಳಬಹುದು. ತಂಡದ ನಾಯಕ, ಕೋಚ್ ಅಥವಾ ಟೀಂ ಮ್ಯಾನೇಜರ್ 14ನೇ ಓವರ್‌ಗೂ ಮುನ್ನ ಇಂಪ್ಯಾಕ್ಟ್‌ ಆಟಗಾರನ ಸೇರ್ಪಡೆ ಬಗ್ಗೆ ಪೋರ್ಥ್ ಅಂಪೈರ್‌ಗೆ ತಿಳಿಸಬೇಕು. 

Syed Mushtaq Ali Trophy ಟೂರ್ನಿಗೆ ಕೋಲ್ಕತಾ ಅಹಮದಾಬಾದ್ ಆತಿಥ್ಯ; ಕರ್ನಾಟಕ್ಕೆ ಮಹಾರಾಷ್ಟ್ರ ಮೊದಲ ಎದುರಾಳಿ

* ಯಾವ ಆಟಗಾರನ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ತಂಡ ಕೂಡಿಕೊಳ್ಳುತ್ತಾರೋ, ಆ ಆಟಗಾರ ಪಂದ್ಯದಲ್ಲಿ ಮುಂದುವರೆಯುವುದಿಲ್ಲ. 14ನೇ ಓವರ್‌ ಬಳಿಕ ತಂಡ ಕೂಡಿಕೊಳ್ಳುವ ಇಂಪ್ಯಾಕ್ಟ್ ಪ್ಲೇಯರ್ ಇನಿಂಗ್ಸ್‌ನಲ್ಲಿ ಮುಂದುವರೆಯಲಿದ್ದಾರೆ.

ಮುಂಬರುವ ಐಪಿಎಲ್‌ನಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ ರೂಲ್ಸ್ ಪರಿಚಯಿಸಲಾಗುತ್ತದೆಯೇ?

ಹೊಸ ಹೊಸ ಪ್ರಯೋಗಗಳಿಗೆ ಸದಾ ಹೆಸರುವಾಸಿಯಾಗಿರುವ ಬಿಸಿಸಿಐ, ಐಪಿಎಲ್‌ನಲ್ಲಿ ಈಗಾಗಲೇ ಹಲವು ರೂಲ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಐಪಿಎಲ್‌ನ ರೋಚಕತೆ ಹೆಚ್ಚಿಸುವ ಸಲುವಾಗಿ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ ರೂಲ್ಸ್ ನಿಯಮ ಪರಿಚಯಿಸಿದರೂ ಅಚ್ಚರಿಯಿಲ್ಲ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.