ಐಪಿಎಲ್‌ನಿಂದ ಇಂಪಾಕ್ ಆಟಗಾರ ನಿಯಮ ಕೈಬಿಡುವ ಬಗ್ಗೆ ಜಯ್ ಶಾ ಸುಳಿವು!
ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಈ ನಿಯಮದಿಂದ ಆಗುತ್ತಿರುವ ಆಗುತ್ತಿರುವ ಲಾಭವನ್ನು ಗಮನಿಸಿದಾಗ, ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರಿಗೆ ಆಡಲು ಅವಕಾಶ ಸಿಗುತ್ತಿದೆ.
ಮುಂಬೈ: ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಆಟಗಾರ ನಿಯಮ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಆ ನಿಯಮವನ್ನು ಮುಂದೆ ಬಳಸುವ ಬಗ್ಗೆ ಮರುಪರಿಶೀಲನೆ ಮಾಡಬಹುದಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಈ ನಿಯಮದಿಂದ ಆಗುತ್ತಿರುವ ಆಗುತ್ತಿರುವ ಲಾಭವನ್ನು ಗಮನಿಸಿದಾಗ, ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರಿಗೆ ಆಡಲು ಅವಕಾಶ ಸಿಗುತ್ತಿದೆ. ಇದು ಮಹತ್ವದ ವಿಚಾರ ಅಲ್ಲವೇ' ಎಂದು ಶಾ ಹೇಳಿದ್ದಾರೆ. ಇಂಪಾಕ್ಟ್ ಆಟಗಾರ ನಿಯಮದಿಂದಾಗಿ ತಂಡಗಳಿಗೆ ಹೆಚ್ಚುವರಿ ನೆರವು ಸಿಗುತ್ತಿದ್ದು, ಈ ಐಪಿಎಲ್‌ನ ಹಲವು ಪಂದ್ಯಗಳಲ್ಲಿ 250ಕ್ಕೂ ಹೆಚ್ಚಿನ ಮೊತ್ತ ದಾಖಲಾಗಿದೆ.
ಆಲ್‌ರೌಂಡರ್‌ಗಳಿಗೆ ಬೆಲೆಯೇ ಇಲ್ಲದಂತಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ತಾರಾ ಆಲ್ರೌಂಡರ್ ಆರ್.ಅಶ್ವಿನ್ ಸೇರಿ ಇನ್ನೂ ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಈ ನಿಯಮವನ್ನು ರದ್ದುಗೊಳಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಶಾ, “ಆಟಗಾರರಿಗೆ ಈ ನಿಯಮದಿಂದ ಸಮಸ್ಯೆಯಾಗುತ್ತಿದೆ ಎಂದಾದರೆ, ಈ ಬಗ್ಗೆ ನಾವು ಚರ್ಚಿಸಲಿದ್ದೇವೆ. ಟಿ20 ವಿಶ್ವಕಪ್ ಮುಗಿದ ಬಳಿಕ ಆಟಗಾರರು, ತಂಡಗಳ ಮಾಲಿಕರು, ಪ್ರಸಾರಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದು, ಮುಂದಿನ ಆವೃತ್ತಿಗಳಲ್ಲಿ ಈ ನಿಯಮವನ್ನು ಉಳಿಸಿಕೊಳ್ಳಬೇಕೇ ಎನ್ನುವುದನ್ನು ನಿರ್ಧರಿಸಲಿದ್ದೇವೆ' ಎಂದು ಜಯ್ ಶಾ ಅವರು ಹೇಳಿದ್ದಾರೆ.
ಹಾಲಿ ಚಾಂಪಿಯನ್ ಚೆನ್ನೈ ಚೆಂಡಾಡಿ ಗೆದ್ದ ಗುಜರಾತ್ ಟೈಟಾನ್ಸ್..!
ಅಜಿತ್ ಹೇಳಿದ್ದಕ್ಕೆ ಕಿಶನ್, ಶ್ರೇಯಸ್ಸಿಗೆ ಗುತ್ತಿಗೆ ಇಲ್ಲ
ಮುಂಬೈ: ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್‌ರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ನಿರ್ಧಾರ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರದ್ದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ರಣಜಿ ಟ್ರೋಫಿ ಸೇರಿ ದೇಸಿ ಟೂರ್ನಿಗಳಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿದರೂ, ಕಿವಿಗೊಡದ್ದಕ್ಕೆ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು.
ಇಶಾನ್ ಕಿಶನ್, ಕಳೆದ ವರ್ಷ ಏಕದಿನ ವಿಶ್ವಕಪ್ ಬಳಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಗೆ ಲಭ್ಯರಿರದೆ ಕೇವಲ ಐಪಿಎಲ್ ಸಿದ್ಧತೆ ಕಡೆಗೆ ಹೆಚ್ಚಿನ ಗಮನ ಹರಿಸಿದರೆ, ಶ್ರೇಯಸ್ ಮುಂಬೈ ರಣಜಿ ತಂಡದ ಸಿದ್ಧತೆ ನಡುವೆಯೇ ಕೆಕೆಆರ್ ತಂಡದ ಅಭ್ಯಾಸ ಶಿಬಿರಕ್ಕೆ ತೆರಳಿದ್ದು ಬಿಸಿಸಿಐ ಸಿಟ್ಟಿಗೆ ಕಾರಣವಾಗಿತ್ತು.
RCB ಪ್ಲೇ ಆಫ್ ಮಾತ್ರವಲ್ಲ 3ನೇ ಸ್ಥಾನಕ್ಕೂ ಲಗ್ಗೆಯಿಡಬಹುದು..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್
ಹೊಸ ಕೋಚ್‌ಗೆ ಹುಡುಕಾಟ ಮರು ಆಯ್ಕೆಗೆ ದ್ರಾವಿಡ್ ಅರ್ಜಿ ಹಾಕಬೇಕು: ಶಾ
ಮುಂಬೈ: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯಗೊಳ್ಳಲಿದ್ದು, ಹೊಸ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ಆರಂಭಿಸಿದೆ. ಈ ಬಗ್ಗೆ ಶುಕ್ರವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದು, ಕೆಲ ದಿನಗಳಲ್ಲೇ ಹೊಸ ಕೋಚ್‌ಗಾಗಿ ಅರ್ಜಿ ಆಹ್ವಾನಿಸುತ್ತೇವೆ ಎಂದಿದ್ದಾರೆ.
“ಟಿ20 ವಿಶ್ವಕಪ್ ಮುಗಿಯುವ ತನಕ ದ್ರಾವಿಡ್ ಗುತ್ತಿಗೆ ಇರಲಿದೆ. ಅವರು ಮರು ಆಯ್ಕೆ ಬಯಸಿದರೆ ಮತ್ತೆ ಅರ್ಜಿ ಸಲ್ಲಿಸಬಹುದು" ಎಂದು ಶಾ ತಿಳಿಸಿದ್ದಾರೆ. ಹೊಸ ಕೋಚ್‌ರನ್ನು 3 ವರ್ಷ ಅವಧಿಗೆ ನೇಮಕ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ದ್ರಾವಿಡ್ 2 ವರ್ಷದ ಗುತ್ತಿಗೆ 2023ರ ಏಕದಿನ ವಿಶ್ವಕಪ್ ಬಳಿಕ ಮುಗಿದಿತ್ತು. ಬಳಿಕ ಟಿ20 ವಿಶ್ವಕಪ್ ವರೆಗೂ ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ಕೇಳಿಕೊಂಡಿತ್ತು.