ಸಿಡ್ನಿ(ಫೆ.21):ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಶುಕ್ರವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ, ಭಾರತದ ಸವಾಲನ್ನು ಎದುರಿಸಲಿದೆ. ಫೆ. 21 ರಿಂದ ಮಾ.8 ರವರೆಗೆ ಪಂದ್ಯಾವಳಿ ನಡೆಯಲಿದೆ. 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿರು ಭಾರತ ತಂಡಕ್ಕೆ ಟೂರ್ನಿಯುದ್ದಕ್ಕೂ ಕಠಿಣ ಸವಾಲು ಎದುರಾಗಲಿದೆ.

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ

7ನೇ ಆವೃತ್ತಿ ಟೂರ್ನಿ ಇದಾಗಿದ್ದು ಕಳೆದ 6 ಆವೃತ್ತಿಗಳಲ್ಲಿ 4 ಬಾರಿ ಪ್ರಶಸ್ತಿ ಎತ್ತಿಹಿಡಿದಿರುವ ಆಸ್ಪ್ರೇಲಿಯಾ ತಂಡ, ಪ್ರಬಲ ತಂಡವಾಗಿ ಹೊರಹೊಮ್ಮಿದೆ. ನಿರೀಕ್ಷೆಯಂತೆ ತವರಲ್ಲಿ ಆಯಾ ತಂಡಗಳು ಪ್ರಾಬಲ್ಯ ಸಾಧಿಸಿರುತ್ತವೆ. ಆತಿಥೇಯ ಆಸ್ಪ್ರೇಲಿಯಾ ತಂಡವನ್ನು ಅದರದೇ ನೆಲದಲ್ಲಿ ಎದುರಿಸುವುದು ನಿಜಕ್ಕೂ ಸುಲಭದ ಮಾತಲ್ಲ. ಒಂದು ವೇಳೆ ಭಾರತ ತಂಡ, ಆಸೀಸ್‌ ತಂಡವನ್ನು ಮಣಿಸಿದರೆ ಚಾರಿತ್ರಿಕ ಸಾಧನೆಯಾಗಲಿದೆ. ಇತ್ತೀಚೆಗಷ್ಟೇ ನಡೆದಿದ್ದ ತ್ರಿಕೋನ ಟಿ20 ಸರಣಿಯ ಲೀಗ್‌ ಹಂತದ ಪಂದ್ಯದಲ್ಲಿ ಹಮ್‌ರ್‍ನ್‌ ಪಡೆ, ಆಸೀಸ್‌ ಎದುರು ಗೆಲುವು ಸಾಧಿಸಿತ್ತು. ಅದೇ ಆತ್ಮವಿಶ್ವಾಸದಲ್ಲಿ ಹರ್ಮನ್‌ಪ್ರೀತ್‌ ಪಡೆ ಕಣಕ್ಕಿಳಿಯುತ್ತಿದೆ.

ಮೊದಲ ದಿನ ಮಳೆಯಾಟ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪರದಾಟ..!

6 ಆವೃತ್ತಿಗಳಲ್ಲಿ ಭಾರತ ತಂಡ, ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಕನಿಷ್ಠ ಫೈನಲ್‌ವರೆಗೂ ಭಾರತ ಮಹಿಳಾ ತಂಡ ಪ್ರವೇಶಿಸಿಲ್ಲ. 2016ರಲ್ಲಿ ಟಿ20 ವಿಶ್ವಕಪ್‌ಗೆ ಭಾರತವೇ ಆತಿಥ್ಯ ವಹಿಸಿತ್ತು. ಆದರೂ ಪ್ರಶಸ್ತಿ ಕನಸು ಮಾತ್ರ ಈಡೇರಿಲ್ಲ. ಈ ಹಿಂದಿನ ತಂಡಗಳಿಗೆ ಹೋಲಿಸಿದರೆ ಭಾರತ ತಂಡ, ಈಗ ಪ್ರಬಲವಾಗಿದೆ. ಪ್ರಭಾವಿ ಆಟಗಾರ್ತಿಯರನ್ನು ಒಳಗೊಂಡಿರುವ ಮಹಿಳಾ ಪಡೆ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ.

ಬಲಾಢ್ಯ ಬ್ಯಾಟಿಂಗ್‌ ಪಡೆ:

ಭಾರತ ತಂಡ ಉತ್ತಮ ಬ್ಯಾಟಿಂಗ್‌ ಪಡೆಯನ್ನು ಹೊಂದಿದೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೊತೆಯಲ್ಲಿ ಸ್ಮೃತಿ ಮಂಧನಾ ಬ್ಯಾಟಿಂಗ್‌ ಲಯದಲ್ಲಿದ್ದಾರೆ. ಇನ್ನು 16 ವರ್ಷ ವಯಸ್ಸಿನ ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಜ್‌, ತಾನಿಯಾ ಭಾಟಿಯಾ, ವೇದಾ ಕೃಷ್ಣಮೂರ್ತಿ ತಂಡದ ಟ್ರಂಪ್‌ ಕಾರ್ಡ್‌ ಆಟಗಾರ್ತಿಯರಾಗಿದ್ದಾರೆ.

ಆಸ್ಪ್ರೇಲಿಯಾ ತಂಡ ಕೂಡಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಪ್ರಭಾವಿ ಆಟಗಾರ್ತಿಯರನ್ನು ಒಳಗೊಂಡಿದ್ದು ಜಯದ ಉತ್ಸಾಹದಲ್ಲಿದೆ. ವೇಗದ ಬೌಲರ್‌ ತೈಲಾ ವ್ಲಾಮಿನಿಕ್‌ ಗಾಯದ ಸಮಸ್ಯೆಗೆ ಒಳಗಾಗಿದ್ದು, ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಆಸ್ಪ್ರೇಲಿಯಾ ಟೂರ್ನಿ ಆರಂಭಕ್ಕೂ ಮುನ್ನವೇ ಕೊಂಚ ಹಿನ್ನಡೆ ಅನುಭವಿಸಿದೆ.

ಭಾರತದ ವೇಳಾಪಟ್ಟಿ

ದಿನಾಂಕ ಎದುರಾಳಿ ಸಮಯ

ಫೆ.21 ಆಸ್ಪ್ರೇಲಿಯಾ ಮಧ್ಯಾಹ್ನ 1.30ಕ್ಕೆ

ಫೆ.24 ಬಾಂಗ್ಲಾದೇಶ ಸಂಜೆ 4.30ಕ್ಕೆ

ಫೆ.27 ನ್ಯೂಜಿಲೆಂಡ್‌ ಬೆಳಗ್ಗೆ 9.30ಕ್ಕೆ

ಫೆ.29 ಶ್ರೀಲಂಕಾ ಮಧ್ಯಾಹ್ನ 1.30ಕ್ಕೆ

ಸಂಭವನೀಯ ತಂಡಗಳು

ಭಾರತ

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ತಾನಿಯಾ ಭಾಟಿಯಾ, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂಧನಾ, ಶಿಖಾ ಪಾಂಡೆ, ಪೂನಮ್‌ ಯಾದವ್‌, ಜೆಮಿಮಾ ರೋಡ್ರಿಗಜ್‌, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌.

ಆಸ್ಪ್ರೇಲಿಯಾ

ಮೆಗ್‌ ಲೆನ್ನಿಂಗ್‌ (ನಾಯಕಿ), ರಚೆಲ್‌ ಹೇನ್ಸ್‌, ಎರಿನ್‌ ಬನ್ಸ್‌ರ್‍, ನಿಕೋಲ ಕ್ಯಾರಿ, ಅಲಿಸಾ ಹೇಲಿ, ಎಲೈಸೆ ಪೆರ್ರಿ, ಬೆಥ್‌ ಮೂನಿ, ಮೆಗಾನ್‌ ಶಾಟ್‌, ಜೆಸ್‌ ಜಾನ್ಸನ್‌, ಸದರ್‌ಲೆಂಡ್‌, ಆ್ಯಶ್ಲೆ ಗಾರ್ಡನರ್‌.

ಪಿಚ್‌ ರಿಪೋರ್ಟ್‌

ಸಿಡ್ನಿ ಮೈದಾನದ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಅವಧಿ ಕಳೆದಂತೆ ಪಿಚ್‌ ಹೆಚ್ಚು ತಿರುವು ಪಡೆಯಲಿದೆ. ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ದೊರೆಯಲಿದೆ. ಮೊದಲು ಬೌಲಿಂಗ್‌ ಮಾಡಿದ ತಂಡ ಇಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್