ಹಿಂದಿಯಲ್ಲಿ ರೋಹಿತ್ ಉತ್ತರಕ್ಕೆ ನಕ್ಕು ನೀರಾದ ಜನ, ಬಟ್ಲರ್‌ಗೆ ಟ್ರಾನ್ಸಲೇಶನ್ ಮಾಡಿದ ಬಾಬರ್ ಟ್ರೋಲ್!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನಾಯಕ ಫೋಟೋಶೂಟ್ ಸಾಮಾನ್ಯ. ಹೀಗೆ ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ಪತ್ರಕರ್ತರೊಬ್ಬರು ಹಿಂದಿಯಲ್ಲಿ ಪ್ರಶ್ನೇ ಕೇಳಿದ್ದಾರೆ. ಪ್ರಶ್ನೆಗೆ ರೋಹಿತಿ ಪ್ರತಿಕ್ರಿಯಿಸಿದ ರೀತಿ ಹಾಗೂ ಉತ್ತರಕ್ಕೆ ಎಲ್ಲರೂ ನಕ್ಕಿದ್ದಾರೆ. ಆದರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್‌, ಪಕ್ಕದಲ್ಲಿದ್ದ ಪಾಕ್ ನಾಯಕ ಬಾಬರ್ ಅಜಮ್ ಬಳಿ ಟ್ರಾನ್ಸಲೇಶನ್ ಕೇಳಿದ್ದಾರೆ. ಇದೀಗ ರೋಹಿತ್ ವೈರಲ್ ಆಗಿದ್ದರೆ, ಬಾಬರ್ ಟ್ರೋಲ್ ಆಗಿದ್ದಾರೆ. 

ICC World cup Jose buttle ask Babar azam to translate Rohit sharma hindi reply Fans troll Pak captain ckm

ಅಹಮ್ಮದಾಬಾದ್(ಅ.05) ಐಸಿಸಿ ವಿಶ್ವಕಪ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಟ್ರೋಫಿ ಗೆಲ್ಲೋ ನೆಚ್ಚಿನ ತಂಡ ಯಾವುದು ಅನ್ನೋ ಲೆಕ್ಕಾಚಾರ ಜೋರಾಗಿದೆ. ಇತ್ತ ಟೂರ್ನಿ ಆರಂಭಕ್ಕೂ ಮುನ್ನ ನಾಯಕರ ಫೋಟೋಶೂಟ್ ನಡೆದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಟ್ರೋಫಿ ಜೊತೆಗೆ ನಾಯಕರ ಫೋಟೋಶೂಟ್ ನಡೆಸಲಾಗಿದೆ. ಈ ವೇಳೆ ಪತ್ರಕರ್ತರ ಜೊತೆಗೆ ಪ್ರಶ್ನೋತ್ತರವು ನಡೆಯಲಿದೆ. ಈ ಬಾರಿ ಪತ್ರಕರ್ತರೊಬ್ಬರು ಹಿಂದಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಪ್ರಶ್ನೆ ಕೇಳಿದ್ದಾರೆ. ಅರೇ ಇದೇನು ಪ್ರಶ್ನೆ ಎಂದು ನಿರಾಸಕ್ತಿ ತೋರಿದ ರೋಹಿತ್ ಶರ್ಮಾ ಅಷ್ಟೇ ನಗುತ್ತಲೇ ಉತ್ತರ ನೀಡಿದ್ದಾರೆ. ಆದರೆ ರೋಹಿತ್ ಹಿಂದಿಯಲ್ಲೇ ಉತ್ತರ ನೀಡಿದ್ದಾರೆ. ಈ ವೇಳೆ ಇತರ ಪತ್ರಕರ್ತರು ನಕ್ಕಿದ್ದಾರೆ. ಆದರೆ ನಾಯಕ ಜೋಸ್ ಬಟ್ಲರ್‌ಗೆ ಅರ್ಥವಾಗಿಲ್ಲ. ಹೀಗಾಗಿ ಪಕ್ಕದಲ್ಲಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಬಳಿ ಟ್ರಾನ್ಸಲೇಶನ್ ಕೇಳಿದ್ದಾರೆ. ಇದೀಗ ರೋಹಿತ್ ಶರ್ಮಾ ವೈರಲ್ ಆದರೆ, ಬಾಬರ್ ಅಜಮ್ ಟ್ರಾನ್ಸಲೇಶನ್ ಟ್ರೋಲ್ ಆಗಿದೆ.

ವಿಶ್ವಕಪ್ ಟೂರ್ನಿ ಟ್ರೋಫಿ ಜೊತೆಗೆ ಎಲ್ಲಾ ತಂಡದ ನಾಯಕರು ಫೋಟೋಶೂಟ್ ಮಾಡಿದ್ದಾರೆ. ಬಳಿಕ ಪತ್ರಕರ್ತರ ಪ್ರಶ್ನೆಗಳು ಆರಂಭವಾಗಿದೆ. ಈ ವೇಳೆ ಹಿಂದಿ ಪತ್ರಕರ್ತರೊಬ್ಬರು ನಾಯಕ ರೋಹಿತ್ ಶರ್ಮಾಗೆ ಹಿಂದಿಯಲ್ಲಿ ಪ್ರಶ್ನೆ ಕೇಳಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡದ ಗೆಲುವನ್ನು ಬೌಂಡರಿ ಲೆಕ್ಕಾಚಾರದಲ್ಲಿ ನಿರ್ಧರಿಸಲಾಗಿತ್ತು. ಆದರೆ ಎರಡೂ ತಂಡವನ್ನು ಚಾಂಪಿಯನ್ ಎಂದು ಘೋಷಿಸಬೇಕಿತ್ತಾ ? ಎಂದು ಪ್ರಶ್ನಿಸಿದ್ದಾರೆ. 

ಸೌತ್ ಆಫ್ರಿಕ ಕ್ರಿಕೆಟಿಗ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ, ಹೆಮ್ಮೆಯ ಸನಾತನಿ ಎಂದ ಫ್ಯಾನ್ಸ್!

ಈ ಪ್ರಶ್ನೆ ಕೇಳುುತ್ತಲೇ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ ರೀತಿಗೆ ಎಲ್ಲರೂ ನಕ್ಕಿದ್ದಾರೆ. ಅರೇ ಯಾರ್, ವಿಶ್ವಕಪ್ ಗೆಲುವು, ಚಾಂಪಿಯನ್ ಘೋಷಿಸುವ ಕೆಲಸ ನನ್ನದಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಪ್ರತಿಕ್ರಿಯೆಯಿಂದ ಅಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಇತ್ತ ಪಾಕಿಸ್ತಾನ, ಬಾಂಗ್ಲಾದೇಶ ನಾಯಕರನ್ನು ಹೊರತುಪಡಿಸಿ ಇನ್ನುಳಿದ ನಾಯಕರಿಗೆ ಏನೂ ಅರ್ಥವಾಗಿಲ್ಲ. ಹೀಗಾಗಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಪಕ್ಕದಲ್ಲೇ ಇದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಬಳಿ ರೋಹಿತ್ ಶರ್ಮಾ ಉತ್ತರ ಏನು ಎಂದು ಕೇಳಿದ್ದಾರೆ. ಟ್ರಾನ್ಸಲೇಶನ್ ಮಾಡುವಂತೆ ಕೇಳಿದ್ದಾರೆ.

 

 

ICC World Cup 2023: ಕ್ರಿಕೆಟ್ ವಿಶ್ವ ಸಮರಕ್ಕೆ ಇಂದು ಅಧಿಕೃತ ಚಾಲನೆ..!

ಈ ವೇಳೆ ಬಾಬರ್ ಅಜಮ್ ಇಂಗ್ಲೀಷ್‌ನಲ್ಲಿ ರೋಹಿತ್ ಶರ್ಮಾ ಉತ್ತರವನ್ನು ಭಾಷಾಂತರ ಮಾಡಿದ್ದಾರೆ. ಒಂದೆಡೆ ರೋಹಿತ್ ಶರ್ಮಾ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದ್ದರೆ, ಇತ್ತ ಬಾಬರ್ ಅಜಮ್ ಭಾಷಾಂತರ ಟ್ರೋಲ್ ಆಗಿದೆ. ಬಾಬರ್ ಅಜಮ್ ಏನೆಂದು ಟ್ರಾನ್ಸಲೇಟ್ ಮಾಡಿರುತ್ತಾರೆ ಎಂದು ಮೀಮ್ಸ್ ಹರಿದಾಡುತ್ತಿದೆ.


 

Latest Videos
Follow Us:
Download App:
  • android
  • ios