Asianet Suvarna News Asianet Suvarna News

ಡೆನ್ಮಾರ್ಕ್‌ ಓಪನ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೆಮೀಸ್‌ಗೆ ಲಗ್ಗೆ

ಈ ವರ್ಷದ ಮೊದಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.19, ಥಾಯ್ಲೆಂಡ್‌ನ ಸುಪನಿದಾ ಕಟೆಥೋಂಗ್‌ ವಿರುದ್ಧ 21-19, 21-12 ಅಂತರದಲ್ಲಿ ಗೆಲುವು ಸಾಧಿಸಿದರು.

PV Sindhu Enters Semi finals Of Denmark Open kvn
Author
First Published Oct 21, 2023, 11:35 AM IST | Last Updated Oct 21, 2023, 11:35 AM IST

ಓಡೆನ್ಸ್‌(ಅ.21): ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 2 ಬಾರಿ ಒಲಿಂಪಿಕ್‌ ಪದಕ ವಿಜೇತೆ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ವರ್ಷದ ಮೊದಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.19, ಥಾಯ್ಲೆಂಡ್‌ನ ಸುಪನಿದಾ ಕಟೆಥೋಂಗ್‌ ವಿರುದ್ಧ 21-19, 21-12 ಅಂತರದಲ್ಲಿ ಗೆಲುವು ಸಾಧಿಸಿದರು. ಇದು ಕಳೆದೆರಡು ವಾರಗಳಲ್ಲಿ ಸಿಂಧುಗೆ 2ನೇ ಸೆಮಿಫೈನಲ್‌.ಕಳೆದ ವಾರ ಆರ್ಕ್ಟಿಕ್‌ ಓಪನ್‌ನಲ್ಲೂ ಸೆಮೀಸ್‌ಗೇರಿದ್ದರು.

ಜೂ. ಬ್ಯಾಡ್ಮಿಂಟನ್‌ ಏಷ್ಯಾ: ಭಾರತಕ್ಕೆ 3 ಪದಕ ಖಚಿತ

ಚೆಂಗ್‌ಡು(ಚೀನಾ): ಇಲ್ಲಿ ನಡೆಯುತ್ತಿರುವ ಕಿರಿಯರ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೂವರು ಸೆಮಿಫೈನಲ್‌ ಪ್ರವೇಶಿಸಿದ್ದು, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಬಾಲಕರ ಅಂಡರ್‌-15 ವಿಭಾಗದಲ್ಲಿ ಜಗ್‌ಶೇರ್‌ ಸಿಂಗ್‌, ಬೋರ್ನಿಲ್‌ ಆಕಾಶ್‌ ಕ್ವಾರ್ಟರ್ ಫೈನಲ್‌ ಪಂದ್ಯಗಳಲ್ಲಿ ಜಯಗಳಿಸಿದರು. ಇವರಿಬ್ಬರು ಶನಿವಾರ ಸೆಮೀಸ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಇದೇ ವೇಳೆ ಬಾಲಕಿಯರ ಅಂಡರ್‌-17 ವಿಭಾಗದಲ್ಲಿ ತಾನ್ವಿ ಶರ್ಮಾ ಸೆಮೀಸ್‌ಗೇರಿದರು.

ಬೆಂಗ್ಳೂರಿನಲ್ಲಿ ನಡೆದ ಆಸ್ಟ್ರೇಲಿಯಾ - ಪಾಕಿಸ್ತಾನ ಮ್ಯಾಚ್‌ ವೀಕ್ಷಿಸಿದ ಸಿಎಂ, ಡಿಸಿಎಂ

ಟೆನಿಸ್‌: ರಾಮ್‌ಕುಮಾರ್‌, ದಿಗ್ವಿಜಯ್‌ ಸೆಮಿಫೈನಲ್‌ಗೆ
 
ಧಾರವಾಡ: ಐಟಿಎಫ್‌ ಧಾರವಾಡ ಓಪನ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಭಾರತದ ತಾರಾ ಟೆನಿಸಿಗರಾದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ದಿಗ್ವಿಜಯ್‌ ಪ್ರತಾಪ್‌ ಸಿಂಗ್ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ಕ್ವಾರ್ಟರ್‌ನಲ್ಲಿ 4ನೇ ಶ್ರೇಯಾಂಕಿತ ರಾಮ್‌ಕುಮಾರ್‌, ಕರ್ನಾಟಕದ ಪ್ರಜ್ವಲ್‌ ದೇವ್‌ ವಿರುದ್ಧ 6-4, 4-6, 6-1ರಿಂದ ಜಯಗಳಿಸಿದರು. 

ಎರಡು ಕಾಲಿಲ್ಲವಾದ್ರೂ ಈಜು ವಿಭಾಗದಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಕನ್ನಡಿಗ!

3ನೇ ಶ್ರೇಯಾಂಕಿತ ದಿಗ್ವಿಜಯ್‌, ಜಪಾನ್‌ನ ಕಜುಕಿ ವಿರುದ್ಧ 6-4, 6-7ರಲ್ಲಿ ಗೆಲುವು ಸಾಧಿಸಿದರು. ಸೆಮೀಸ್‌ನಲ್ಲಿ ರಾಮ್‌ಕುಮಾರ್‌-ದಿಗ್ವಿಜಯ್ ಮುಖಾಮುಖಿಯಾಗಲಿದ್ದಾರೆ. ಇದೇ ವೇಳೆ ಡಬಲ್ಸ್‌ನಲ್ಲಿ ಪ್ರಜ್ವಲ್‌-ನಿತಿನ್‌ ಕುಮಾರ್‌ ಜೋಡಿ ದಿಗ್ವಿಜಯ್‌-ಕರಣ್‌ ಜೋಡಿಯನ್ನು ಸೋಲಿಸಿ ಫೈನಲ್‌ ಪ್ರವೇಶಿಸಿತು.

ಪ್ಯಾರಾ ಅಥ್ಲೀಟ್ಸ್‌ಗೆ ಒಡಿಶಾ ತಲಾ ₹10 ಲಕ್ಷ

ಭುವನೇಶ್ವರ: ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡ ಅಥ್ಲೀಟ್‌ಗಳಂತೆಯೇ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಒಡಿಶಾದ 7 ಅಥ್ಲೀಟ್‌ಗಳಿಗೂ ಅಲ್ಲಿನ ಸರ್ಕಾರ ತಲಾ 10 ಲಕ್ಷ ರುಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದೆ. ಇದರಲ್ಲಿ ಪ್ಯಾರಾಲಿಂಪಿಕ್‌ ಚಿನ್ನ ವಿಜೇತ ಶಟ್ಲರ್ ಪ್ರಮೋದ್ ಭಗತ್ ಕೂಡಾ ಒಳಗೊಂಡಿದ್ದಾರೆ. ಕ್ರೀಡಾಕೂಟ ಅಕ್ಟೋಬರ್ 22ರಿಂದ 28ರ ವರೆಗೆ ಚೀನಾದ ಹ್ಯಾಂಗ್‌ಝೋನಲ್ಲಿ ನಡೆಯಲಿದೆ. 

Latest Videos
Follow Us:
Download App:
  • android
  • ios