World Cup 2023: ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ
ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಕಳೆದ ಬಾರಿಯಂತೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಪ್ರತಿಪಂದ್ಯದಲ್ಲೂ ಉತ್ತಮ ಅಂತರದಲ್ಲಿ ಗೆಲುವು ದಾಖಲಿಸಲು ಎಲ್ಲಾ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಆತಿಥೇಯ ಭಾರತ ತಂಡವು ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಕಾಂಗರೂ ಪಡೆಗೆ ಸೋಲಿನ ಶಾಕ್ ನೀಡುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.
ಚೆನ್ನೈ(ಅ.06): ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ನಡೆಯಲಿರುವ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಏಕದಿನ ವಿಶ್ವಕಪ್‌ಗೆ ಕಾಲಿಡಲು ಎದುರು ನೋಡುತ್ತಿರುವ ಭಾರತ ತಂಡ, ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಿರತವಾಗಿದೆ. ಗುರುವಾರ ತಾರಾ ಆಟಗಾರ ವಿರಾಟ್ ಕೊಹ್ಲಿ ಸುಮಾರು 45 ನಿಮಿಷಗಳ ಕಾಲ ಬ್ಯಾಟ್ ಬೀಸಿದರು.
ಶ್ರೇಯಸ್ ಅಯ್ಯರ್, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್, ಜಡೇಜಾ, ಇಶನ್ ಕಿಶಾನ್, ವೇಗಿಗಳಾದ ಬುಮ್ರಾ, ಸಿರಾಜ್, ಶಮಿ ಕೂಡಾ ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ತವರಿನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಆರ್.ಅಶ್ವಿನ್ ಹೆಚ್ಚಿನ ಸಮಯ ಮೈದಾನದಲ್ಲೇ ಕಳೆದರು. ಆಯ್ಕೆಗಾರರು ಮೊದಲ ಪಂದ್ಯಕ್ಕೆ ಹೆಚ್ಚುವರಿ ಸ್ಪಿನ್ನರ್ ಆಡಿಸಲು ನಿರ್ಧರಿಸಿದರೆ ಅಶ್ವಿನ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
'ಬೌಂಡರಿ ಕೌಂಟ್' ಲೆಕ್ಕದಲ್ಲೇ ಇಂಗ್ಲೆಂಡ್‌ಗೆ ಹೀನಾಯ ಸೋಲುಣಿಸಿದ ಕಿವೀಸ್; ವಿಶ್ವಕಪ್ ಫೈನಲ್ ಸೋಲಿನ ಲೆಕ್ಕ ಚುಕ್ತಾ
ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಕಳೆದ ಬಾರಿಯಂತೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಪ್ರತಿಪಂದ್ಯದಲ್ಲೂ ಉತ್ತಮ ಅಂತರದಲ್ಲಿ ಗೆಲುವು ದಾಖಲಿಸಲು ಎಲ್ಲಾ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಆತಿಥೇಯ ಭಾರತ ತಂಡವು ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಕಾಂಗರೂ ಪಡೆಗೆ ಸೋಲಿನ ಶಾಕ್ ನೀಡುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.
ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮದ್ ಶಮಿ, ಆರ್.ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಮೋದಿ ಕ್ರೀಡಾಂಗಣ ಮಧ್ಯಾಹ್ನ ಖಾಲಿ, ಸಂಜೆ ವೇಳೆಗೆ ಅರ್ಧ ಭರ್ತಿ
ಅಹಮದಾಬಾದ್: ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ನಿರೀಕ್ಷಿಸಿದ್ದ ಐಸಿಸಿ-ಬಿಸಿಸಿಐಗೆ ಗುರುವಾರ ಅಚ್ಚರಿ, ಆಘಾತ ಎರಡೂ ಒಟ್ಟೊಟ್ಟಿಗೆ ಎದುರಾಯಿತು. ಗಣನೀಯ ಪ್ರಮಾಣದಲ್ಲಿ ಟಿಕೆಟ್ ಮಾರಾಟಗೊಂಡಿದ್ದರೂ, ಪಂದ್ಯ ಆರಂಭವಾಗುವ ವೇಳೆಗೆ 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂದಾಜು 10,000ಕ್ಕಿಂತ ಕಡಿಮೆ ಪ್ರೇಕ್ಷಕರಿದ್ದರು.
World Cup 2023: ಪಾಕ್ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್ ಬೌಲಿಂಗ್ ಆಯ್ಕೆ..!
ಇದನ್ನು ಕಂಡು ಸಾಮಾಜಿಕ ತಾಣಗಳಲ್ಲಿ ಭಾರತ ಹಾಗೂ ವಿದೇಶಿ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಹಾಗೂ ಐಸಿಸಿಯನ್ನು ಟೀಕಿಸುವುದರ ಜೊತೆಗೆ ಟ್ರೋಲ್ ಸಹ ಮಾಡಿದರು. ಬಿಸಿಲಿನ ತೀವ್ರತೆ ಕಡಿಮೆಯಾಗುತ್ತಲೇ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದರು. ಕೊನೆಯಲ್ಲಿ 42000ಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.