ರಟ್ಟಾಯ್ತು ಭಾರತೀಯರ ಬ್ಯಾಟಿಂಗ್ ಗುಟ್ಟು..! ರೋಹಿತ್-ಗಿಲ್-ಶ್ರೇಯಸ್‌ಗೆ ದ್ರಾವಿಡ್ ಕೊಟ್ಟ ಟಾಸ್ಕ್ ಏನು ಗೊತ್ತಾ?

ಟೀಂ ಇಂಡಿಯಾ ಕೋಚ್ ದ್ರಾವಿಡ್ ಟಾಸ್ಕ್ ಅನ್ನ ಬಿಡಿಬಿಡಿಯಾಗಿ ಹೇಳ್ತಿವಿ ಕೇಳಿ. ಓಪನರ್ಗಳಾದ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಪೈಕಿ, ಆರಂಭದಿಂದಲೂ ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕು. ಹಿಟ್‌ಮ್ಯಾನ್‌ಗೆ ಗಿಲ್ ಸಾಥ್ ನೀಡ್ಬೇಕು. ಅದರಂತೆ ರೋಹಿತ್ ಕ್ರೀಸಿಗೆ ಬಂದ ತಕ್ಷಣವೇ ಗೇರ್ ಬದಲಿಸಿ, ಎದುರಾಳಿ ಬೌಲರ್ಸ್ ಮೇಲೆ ಸವಾರಿ ಮಾಡ್ತಾರೆ. ಬೌಂಡ್ರಿ-ಸಿಕ್ಸರ್ಗಳನ್ನ ಸಿಡಿಸ್ತಾರೆ. ಗಿಲ್ ಸೈಲೆಂಟಾಗಿ ಆಡ್ತಾರೆ.

ICC World Cup 2023 Team India batting Success secrete all fans need to know kvn

ಬೆಂಗಳೂರು(ನ.17): ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ತುಂಬಾನೇ ಸ್ಟ್ರಾಂಗ್ ಆಗಿದೆ. ಜೊತೆಗೆ ವಿಭಿನ್ನವಾಗಿದೆ. ವೆರೈಟಿ ಬೌಲಿಂಗ್ ಅಂತರಲ್ಲ. ಹಾಗೆ ವೆರೈಟಿ ಬ್ಯಾಟಿಂಗ್ ನೋಡ್ಬಹುದು. ಆರು ಬ್ಯಾಟರ್‌ಗಳ ಬ್ಯಾಟಿಂಗ್ ಸ್ಟೈಲ್ ವಿಭಿನ್ನವಾಗಿರೋದ್ಯಾಕೆ..? ಇದರಲ್ಲಿರುವ ಸಿಕ್ರೇಟ್ ಏನು ಅನ್ನೋದನ್ನ ನೋಡಿಕೊಂಡು ಬರೋಣ ಬನ್ನಿ. 

ಒನ್ಡೇ ವರ್ಲ್ಡ್‌ಕಪ್‌ನಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರ ಎನಿಸಿಕೊಂಡು ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಹೀಗೆ ಮೂರು ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡ್ತಿದೆ. ಅದರಲ್ಲೂ ಬ್ಯಾಟರ್ಸ್ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಆದ್ರೆ ಟೀಮ್‌ನಲ್ಲಿರುವ ಆರು ಬ್ಯಾಟರ್‌ಗಳ ಬ್ಯಾಟಿಂಗ್ ಸ್ಟೈಲ್ ವಿಭಿನ್ನವಾಗಿದೆ. ಯಾಕೆ ಹೀಗೆ ಅಂತ ನೋಡೋಕೆ ಹೋದ್ರೆ, ಇದರ ಹಿಂದೆ ಕೋಚ್ ರಾಹುಲ್ ದ್ರಾವಿಡ್ ಮಾಸ್ಟರ್ ಪ್ಲಾನ್ ಅಡಗಿದೆ. ದ್ರಾವಿಡ್ ಕೊಟ್ಟ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಬ್ಯಾಟರ್ಸ್.

ವಿರಾಟ್ ಕೊಹ್ಲಿಯನ್ನು ದೇವರ ಮಗ ಎಂದು ಕರೆದ ಪತ್ನಿ ಅನುಷ್ಕಾ ಶರ್ಮಾ!

ರೋಹಿತ್ ಶರ್ಮಾ ಆರ್ಭಟಿಸಬೇಕು, ಗಿಲ್ ಸೈಲೆಂಟಾಗಿರಬೇಕು..! 

ಟೀಂ ಇಂಡಿಯಾ ಕೋಚ್ ದ್ರಾವಿಡ್ ಟಾಸ್ಕ್ ಅನ್ನ ಬಿಡಿಬಿಡಿಯಾಗಿ ಹೇಳ್ತಿವಿ ಕೇಳಿ. ಓಪನರ್ಗಳಾದ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಪೈಕಿ, ಆರಂಭದಿಂದಲೂ ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕು. ಹಿಟ್‌ಮ್ಯಾನ್‌ಗೆ ಗಿಲ್ ಸಾಥ್ ನೀಡ್ಬೇಕು. ಅದರಂತೆ ರೋಹಿತ್ ಕ್ರೀಸಿಗೆ ಬಂದ ತಕ್ಷಣವೇ ಗೇರ್ ಬದಲಿಸಿ, ಎದುರಾಳಿ ಬೌಲರ್ಸ್ ಮೇಲೆ ಸವಾರಿ ಮಾಡ್ತಾರೆ. ಬೌಂಡ್ರಿ-ಸಿಕ್ಸರ್ಗಳನ್ನ ಸಿಡಿಸ್ತಾರೆ. ಗಿಲ್ ಸೈಲೆಂಟಾಗಿ ಆಡ್ತಾರೆ.

ಓಪನರ್ಗಳಲ್ಲಿ ಒಬ್ಬರು ಔಟಾದ್ಮೇಲೆ ಮತ್ತೊಬ್ಬರು ವೈಲೆಂಟ್..!

ಓಪನರ್ಗಳಲ್ಲಿ ಒಬ್ಬರು ಔಟಾದ್ರೆ ಮತ್ತೊಬ್ಬರು ವೈಲೆಂಟ್ ಆಗಬೇಕು. ಸೆಮಿಫೈನಲ್ನಲ್ಲಿ ರೋಹಿತ್ ಔಟಾದ್ಮೇಲೆ ಗಿಲ್, ಗಿಲ್ಲಿ ದಾಂಡ ಆಡಿದ್ರು.  ನಂಬರ್ 3 ಸ್ಲಾಟ್ನಲ್ಲಿ ಬರುವ ವಿರಾಟ್ ಕೊಹ್ಲಿ, ಓಪನರ್ಗೆ ಸಾಥ್ ನೀಡ್ಬೇಕು. ಆಡುವುದರ ಜೊತೆ ಇತ ರೆ ಬ್ಯಾಟರ್ಗಳನ್ನೂಆಡಿಸಬೇಕು. ಪೂರ್ತಿ 50 ಓವರ್ ಕ್ರೀಸಿನಲ್ಲಿ ನಿಲ್ಲಬೇಕು. ಕೊಹ್ಲಿ ಕ್ರೀಸಿನಲ್ಲಿದ್ದರೆ ರನ್ ಸರಾಗವಾಗಿ ಬರ್ತಾವೆ. ಹಾಗೆ ಇತರೆ ಬ್ಯಾಟರ್ಸ್ ರನ್ ಹೊಡೆಯುತ್ತಾರೆ. 50 ಓವರ್ ಪೂರ್ತಿ ಆಡೋದೇ ಕೊಹ್ಲಿಗೆ ನೀಡಿರುವ ಬಿಗ್ ಟಾಸ್ಕ್. ಹಾಗಾಗಿಯೇ ಕೊಹ್ಲಿ, ಬಿಗ್ ಶಾಟ್‌ಗಳನ್ನ ಹೊಡೆಯದೆ, ಸಿಂಗಲ್ಸ್, ಡಬಲ್ಸ್ ತೆಗೆದುಕೊಂಡು ರನ್ ಗಳಿಸೋದು. ಅವಕಾಶ ಸಿಕ್ಕಾಗ ಬೌಂಡ್ರಿ-ಸಿಕ್ಸರ್ ಬಾರಿಸ್ತಾರೆ.

"ವಿರಾಟ್ ಕೊಹ್ಲಿ ಅವರಂತವರು ಪ್ರಶಂಸೆಗೆ ಅರ್ಹರು": ಪಾಕ್ ದಿಗ್ಗಜ ಕ್ರಿಕೆಟಿಗನ ಮನದಾಳದ ಮಾತು

ಶ್ರೇಯಸ್ ವೈಲೆಂಟ್, ರಾಹುಲ್ ಸೈಲೆಂಟ್..!

ಇನ್ನು ಶ್ರೇಯಸ್ ಅಯ್ಯರ್‌ಗೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡೋ ಟಾಸ್ಕ್ ನೀಡಲಾಗಿದೆ. ಹಾಗಾಗಿಯೇ ಅವರು ಕ್ರೀಸಿಗೆ ಬಂದಕ್ಷಣ ಎರ್ರಾಬಿರ್ರಿ ಬ್ಯಾಟ್ ಬೀಸೋದು. ಕ್ರೀಸಿನಲ್ಲಿ ಕೊಹ್ಲಿ ಅಥವಾ ರಾಹುಲ್ ಇಬ್ಬರಲ್ಲಿ ಒಬ್ಬರು ಇದ್ದರೆ ಶ್ರೇಯಸ್‌ಗೆ ಎಲ್ಲಿಲ್ಲದ ಧೈರ್ಯ. ಹಾಗಾಗಿಯೇ ಬ್ಯಾಕ್ ಟು ಬ್ಯಾಕ್ ಎರಡು ಸೆಂಚುರಿ ಸಿಡಿಸೋಕೆ ಸಾಧ್ಯವಾಗಿರೋದು.

ಕೊನೆಯಲ್ಲಿ ಮಾತ್ರ ರಾಹುಲ್ ಆರ್ಭಟಿಸಬೇಕು..!

ನಂಬರ್ 5 ಸ್ಲಾಟ್‌ನಲ್ಲಿ ಆಡುವ ಕನ್ನಡಿಗ ಕೆಎಲ್ ರಾಹುಲ್, ಯಾವ ಸಮಯದಲ್ಲಿ ಬ್ಯಾಟಿಂಗ್ಗೆ ಬರಲಿ, 45 ಓವರ್ ವರೆಗೆ ಸೈಲೆಂಟಾಗಿಯೇ ಬ್ಯಾಟಿಂಗ್ ಮಾಡ್ಬೇಕು. 45 ಓವರ್ ಬಳಿಕ ವೈಲೆಂಟ್ ಆಗಬೇಕು ಅನ್ನೋ ಟಾಸ್ಕ್ ನೀಡಲಾಗಿದೆ. ಇದರಿಂದ ಅವರು ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ, ಕೊನೆಕೊನೆಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಸೆಮಿಫೈನಲ್ನಲ್ಲೂ ರಾಹುಲ್ ಅದನ್ನೇ ಮಾಡಿದ್ದು.

ಸೂರ್ಯನಿಗೆ ವೈಲೆಂಟ್ ಟಾಸ್ಕ್..!

ಸೂರ್ಯಕುಮಾರ್ ಯಾದವ್ ಯಾವಾಗ್ಲೇ ಕ್ರೀಸಿಗೆ ಬರಲಿ. ವೈಲೆಂಟ್ ಆಗೋ ಟಾಸ್ಕ್ ನೀಡಲಾಗಿದೆ. ಅದಕ್ಕೆ ಅವರು ಕ್ರೀಸಿಗೆ ಬಂದ ತಕ್ಷಣ ವೈಲೆಂಟ್ ಆಗೋದು. ಇಂಗ್ಲೆಂಡ್ ವಿರುದ್ಧ 49 ರನ್ ಸಿಡಿಸಿದ್ದರು. 10 ಪಂದ್ಯಗಳಲ್ಲಿ ದ್ರಾವಿಡ್ ಮಾಸ್ಟರ್ ಪ್ಲಾನ್ ವರ್ಕ್ ಔಟ್ ಆಗಿದೆ. ಫೈನಲ್ನಲ್ಲೂ ವರ್ಕ್ ಔಟ್ ಆದ್ರೆ ಈ ಸಲ ವಿಶ್ವಕಪ್ ನಮ್ದೇ.

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Latest Videos
Follow Us:
Download App:
  • android
  • ios