ಸಾರಾ ಹೃದಯಭಗ್ನ; ತೆಂಡುಲ್ಕರ್ ಮಗಳ ಹೊಸ ಪೋಸ್ಟ್ ವೈರಲ್..! ಯಾಕೆ? ಏನಾಯ್ತು?
ಲಖನೌ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಪುತ್ರಿ ಹಾಕುವ ಕೆಲವು ಪೋಸ್ಟ್‌ಗಳು ಈಗೀಗ ಸಾಕಷ್ಟು ವೈರಲ್ ಆಗುತ್ತಿವೆ. ಇದೀಗ ಸಾರಾ ತೆಂಡುಲ್ಕರ್ ತಮ್ಮ ಹೃದಯಭಗ್ನವಾಗಿರುವ ಫೋಟೋ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಟೀಂ ಇಂಡಿಯಾ ಅದ್ಭುತ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ತಾನಾಡಿದ ಮೊದಲ 5 ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಇದೀಗ ಲಖನೌದ ಏಕಾನ ಮೈದಾನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಕಣಕ್ಕಿಳಿದಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. 40 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಗಿದೆ.
ಇಂಗ್ಲೆಂಡ್ ಎದುರು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಿಲ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಶೂನ್ಯ ಸಂಪಾದನೆ ಮಾಡಿದರು. ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕೇವಲ 4 ರನ್‌ಗಳಿಗೆ ಸೀಮಿತವಾಯಿತು.
ಇಂಗ್ಲೆಂಡ್ ಎದುರು ಬೌಂಡರಿಯೊಂದಿಗೆ ರನ್ ಖಾತೆ ತೆರೆದ ಶುಭ್‌ಮನ್ ಗಿಲ್ ದೊಡ್ಡ ಮೊತ್ತ ಕಲೆಹಾಕುವ ಭರವಸೆ ಮೂಡಿಸಿದ್ದರು. ಆದರೆ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ತಮ್ಮ ಆತ್ಮೀಯ ಗೆಳೆಯ ಶುಭ್‌ಮನ್ ಗಿಲ್ ದೊಡ್ಡ ಇನಿಂಗ್ಸ್ ಆಡಬಹುದು ಎಂದು ಕಾತರದಿಂದ ಕಾಯುತ್ತಿದ್ದ ಸಾರಾ ತೆಂಡುಲ್ಕರ್‌ಗೆ ಭಾರೀ ನಿರಾಸೆ ಎದುರಾಗಿದೆ. ತಮ್ಮ ನಿರಾಸೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
ಶುಭ್‌ಮನ್ ಗಿಲ್ ಕ್ಲೀನ್ ಬೌಲ್ಡ್ ಆಗಿರುವ ಫೋಟೋ ಜತೆಗೆ ಹಾರ್ಟ್ ಬ್ರೋಕನ್ ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಗಿಲ್ ಮೇಲಿನ ನೋವು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.