Asianet Suvarna News Asianet Suvarna News

ಭಾರತಕ್ಕೆ ಬಂದ ಆಫ್ರಿಕಾ ಕ್ರಿಕೆಟಿಗರಿಗೆ ಎಲ್ಲಿದ್ದೇವೆ ಹೇಳಲು ಸಾಧ್ಯವಾಗುತ್ತಿಲ್ಲ, ತರೂರ್ ಟ್ವೀಟ್ ವೈರಲ್!

ಏಕದಿನ ವಿಶ್ವಕಪ್ ಟೂರ್ನಿಗಾಗಿ ಸೌತ್ ಆಫ್ರಿಕಾ ಕ್ರಿಕೆಟಿಗರು ಕೇರಳದ ತಿರುವನಂತಪುರಂಗೆ ಬಂದಿಳಿದಿದ್ದಾರೆ. ಆದರೆ ಯಾರಾದರೂ ಭಾರತದಲ್ಲಿ ನೀವು ಎಲ್ಲಿದ್ದೀರಿ ಎಂದು ಕೇಳಿದರೆ ಸೌತ್ ಆಫ್ರಿಕಾ ಕ್ರಿಕೆಟಿಗರಿಗೆ ಹೇಳಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಕಾಂಗ್ರಸ್ ನಾಯಕ ಶಶಿ ತರೂರ್ ಪೋಸ್ಟ್ ಮಾಡಿದ ವಿಡಿಯೋ ವೈರಲ್ ಆಗಿದೆ.
 

ICC World cup 2023 South Africa cricketers fail to pronounce Thiruvananthapuram shashi tharoor tweet viral ckm
Author
First Published Oct 1, 2023, 10:06 PM IST

ತಿರುವನಂತಪುರಂ(ಅ.01) ಏಕದಿನ ವಿಶ್ವಕಪ್ ಟೂರ್ನಿಗಾಗಿ ಎಲ್ಲಾ ತಂಡಗಳು ಭಾರತಕ್ಕೆ ಆಗಮಿಸಿ ಅಭ್ಯಾಸ ಪಂದ್ಯದಲ್ಲಿ ತೊಡಗಿಕೊಂಡಿದೆ. ಹೀಗೆ ಸೌತ್ ಆಫ್ರಿಕಾ ತಂಡ ಕೂಡ ಕೇರಳದ ತಿರುವನಂತಪುರಂಗೆ ಆಗಮಿಸಿದೆ. ಆದರೆ ಸೌತ್ ಆಫ್ರಿಕಾ ಕ್ರಿಕೆಟಿಗರು ತಾವು ಎಲ್ಲಿದ್ದೇವೆ ಅನ್ನೋದು ಹೇಳಲು ತಡಬಡಾಯಿಸಿದ್ದಾರೆ. ಕಾರಣ ತಿರುವನಂತಪುರಂ ಎಂದು ಹೇಳಲು ಸೌತ್ ಆಫ್ರಿಕಾ ಕ್ರಿಕೆಟಿಗರು ಹರಸಾಹಸ ಪಟ್ಟಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸೌತ್ ಆಫ್ರಿಕಾ ಕ್ರಿಕೆಟಿಗರು ತಿರುವನಂತಪುರಂಗೆ ಆಗಮಿಸಿದ್ದಾರೆ. ಆದರೆ ಯಾರಾದರೂ ಕೇಳಿದರೆ, ತಾವು ಎಲ್ಲಿದ್ದೇವೆ ಅನ್ನೋದು ಹೇಳಲು ಸಾಧ್ಯವೇ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಸೌತ್ ಆಫ್ರಿಕಾ ಕ್ರಿಕೆಟಿಗರು ತಿರುವನಂತಪುರಂನಲ್ಲಿರುವ ಕೇರಳ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ವೇಳೆ ತಿರುವನಂತಪುರಂ ಉಚ್ಚರಿಸುವ ಟಾಸ್ಕ್ ನೀಡಲಾಗಿದೆ. ಹಲವು ಪ್ರಯತ್ನಗಳ ಬಳಿಕ ಕೆಲವೇ ಕೆಲವು ಕ್ರಿಕೆಟಿಗರು ತಿರುವನಂತಪುರಂ ಎಂದು ಹೇಳಿದ್ದಾರೆ. ಬಹುತೇಕರು ತಿರುವನಂತಪುರಂ ಉಚ್ಚರಿಸಲು ಪರದಾಡಿದ್ದಾರೆ.

 

 

ಅಕ್ಷರ್ ಪಟೇಲ್ ಸ್ಥಾನಕ್ಕೆ ಅಶ್ವಿನ್ ಬದಲಿಗೆ ಈ ಆಟಗಾರನಿಗೆ ಸ್ಥಾನ ನೀಡಬೇಕಿತ್ತು ಎಂದ ವಿಶ್ವಕಪ್ ಹೀರೋ ಯುವಿ..!

ಸೌತ್ ಆಫ್ರಿಕಾ ಮಾತ್ರವಲ್ಲ, ಉತ್ತರ ಭಾರತದ ಬಹುತೇಕರು ಕೂಡ ತಿರುವನಂತಪುರಂ ಸೇರಿದಂತೆ ದಕ್ಷಿಣ ಭಾರತದ ಹೆಸರುಗಳನ್ನು ಉಚ್ಚರಿಸಲು ಪರದಾಡುತ್ತಾರೆ. ಈ ಕುರಿತು ಶಶಿ ತರೂರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ತಿರುವನಂತಪುರಂನಲ್ಲಿ ನಡೆಯುಲ ಫಿಲ್ಮ್ ಫೆಸ್ಟಿವೆಲ್ ವೇಳೆಯೂ ಹಲವು ನಟ ನಟಿಯರೂ ಹೆಸರು ಹೇಳಲು ತಡಬಡಾಯಿಸುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ಸರಿಯಾಗಿ ಉಚ್ಚರಿಸುತ್ತಾರೆ ಎಂದು ಶಶಿ ತರೂರ್ ಹೇಳಿದ್ದಾರೆ.

ಭಾರತದ ಹಲವು ಪ್ರದೇಶ, ನಗರ, ಜಿಲ್ಲೆಗಳ ಹೆಸರು ಉಚ್ಚರಿಸಲು ಸಾಧ್ಯವಾಗದ ಕಾರಣ ಬ್ರಿಟಿಷರ್ ತಮಗೆ ಸಾಧ್ಯವಾಗುವ ರೀತಿಯಲ್ಲಿ ಬದಲಾಯಿಸಿದ್ದರು. ಈ ಪೈಕಿ ಕೆಲ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ. ಈ ಪೈಕಿ ತಿರವನಂತಪುರಂ ಕೂಡ ಒಂದು. ತಿರುವನಂತಪುರಂ ಉಚ್ಚರಿಸಲು ಸಾಧ್ಯವಾಗದ ಬ್ರಿಟಿಷರ್ ಈ ನಗರಕ್ಕೆ ಟ್ರಿವಾಂಡ್ರಮ್ ಎಂದು ನಾಮಕರಣ ಮಾಡಿದ್ದರು. 1991ರ ವರೆಗೆ ಟ್ರಿವಾಂಡ್ರಮ್ ಎಂದೇ ಕರೆಯಲಾಗುತ್ತಿತ್ತು. 1991ರಲ್ಲಿ ಮತ್ತೆ ತಿರುವನಂತಪುರಂ ಎಂದು ಮರುನಾಮಕರಣ ಮಾಡಲಾಗಿದೆ. 

 

 

ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾದ ಆಫರ್ ತಿರಸ್ಕರಿಸಿದ 'ಡೂಪ್ಲಿಕೇಟ್ ಅಶ್ವಿನ್‌'..!

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ(ಸೆ.30) ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ಆದರೆ ಗುವ್ಹಾಟಿಯಲ್ಲಿ ಸುರಿದ ಮಳೆಯಿದಂ ಅಭ್ಯಾಸ ಪಂದ್ಯ ರದ್ದಾಗಿತ್ತು. ಅಕ್ಟೋಬರ್ 5 ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ.
 

Follow Us:
Download App:
  • android
  • ios