ಶ್ರೀಲಂಕಾ ವಿರುದ್ಧ ಭಾರತ 302 ರನ್ ದಾಖಲೆ ಗೆಲುವು ಸಾಧಿಸಿ ವಿಶ್ವಕಪ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ಈ ಗೆಲುವಿನ ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ರೋಹಿತ್ ಧನ್ಯವಾದ ಹೇಳಿದ್ದಾರೆ. ಇನ್ನು ಪೆವಿಲಿಯನ್‌ಗೆ ತೆರಳುವ ವೇಳೆ ರೋಹಿತ್ ಶರ್ಮಾ ಕ್ರಿಕೆಟ್ ಅಭಿಮಾನಿ, ಯುವ ಕ್ರಿಕೆಟಿಗನಿಗೆ ಶೂ ಗಿಫ್ಟ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈ(ನ.2) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ವಿರುದ್ದ ನಡೆದ ರೋಚಕ ಪಂದ್ಯದಲ್ಲಿ 302 ರನ್ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ್ದಾರೆ. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದ ಸುತ್ತ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಪೆವಿಲಿಯನ್‌ಗೆ ತೆರಳುವ ವೇಳೆ ರೋಹಿತ ಶರ್ಮಾ ತಮ್ಮ ಶೂ ಅಭಿಮಾನಿಗೆ ಗಿಫ್ಟ್ ನೀಡಿದ್ದಾರೆ. 

ಪೆವಿಲಿಯನ್‌ಗೆ ತೆರಳುತ್ತಿದ್ದ ವೇಳೆ ಪುಟ್ಟ ಅಭಿಮಾನಿ ರೋಹಿತ್ ಪರ ಘೋಷಣೆ ಕೂಗಿದ್ದಾರೆ. ಯುವ ಕ್ರಿಕೆಟಿಗನ ಬಳಿ ಬಂದ ರೋಹಿತ್ ಶರ್ಮಾ ಶೂ ಗಿಫ್ಟ್ ನೀಡಿದ್ದಾರೆ. ಈ ಪುಟ್ಟ ಅಭಿಮಾನಿ ಯುವ ಕ್ರಿಕೆಟಿಗ. ಖುದ್ದು ರೋಹಿತ್ ಶರ್ಮಾ ಶೂ ಪಡೆದ ಅಭಿಮಾನಿ ಫುಲ್ ಖುಷ್ ಆಗಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನಡೆ ಮೆಚ್ಚುಗೆ ಪಾತ್ರವಾಗಿದೆ. 

INDVSL ಮೊಹಮ್ಮದ್ ಶಮಿ ದಾಳಿಗೆ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿ ಪುಡಿ!

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಆಡಿದ 7 ಪಂದ್ಯದಲ್ಲೂ ಗೆಲುವ ದಾಖಲಿಸಿದ ಭಾರತ ಅಂಕಪಟ್ಟಿಯಲ್ಲಿ 14 ಅಂಕ ಸಂಪಾದಿಸಿ ಮೊದಲ ಸ್ಥಾನಕ್ಕೇರಿದೆ. ಲಂಕಾ ವಿರುದ್ಧದ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಗೆಲುವಿನ ಮೂಲಕ ಭಾರತ ಕೆಲ ದಾಖಲೆ ಬರೆದಿದೆ. ಏಕದಿನ ಕ್ರಿಕೆಟ್‌ನಲ್ಲಿ 4ನೇ ಗರಿಷ್ಠ ರನ್ ಅಂತರದ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಮೊದಲ ಸ್ಥಾನವನ್ನೂ ಭಾರತವೇ ಆಕ್ರಮಿಸಿಕೊಂಡಿದೆ.

&

Scroll to load tweet…

ಏಕದಿನದಲ್ಲಿ ಗರಿಷ್ಠ ರನ್ ಅಂತರದ ಗೆಲುವು ಸಾಧನೆ
ಭಾರತ v ಶ್ರೀಲಂಕಾ (2023) 317 ರನ್ ಗೆಲುವು
ಆಸ್ಟ್ರೇಲಿಯಾ v ನೆದರ್ಲೆಂಡ್(2023) 309ರನ್ ಗೆಲುವು
ಜಿಂಬಾಬ್ವೆ v ಯಎಇ(2023) 304 ರನ್ ಗೆಲುವು
ಭಾರತ v ಶ್ರೀಲಂಕಾ(2023 302 ರನ್ ಗೆಲುವು
ನ್ಯೂಜಿಲೆಂಡ್ v ಐರ್ಲೆಂಡ್(2008) 290 ರನ್ ಗೆಲುವು
ಆಸ್ಟ್ರೇಲಿಯಾ v ಆಫ್ಘಾನಿಸ್ತಾನ(2015) 275 ರನ್ ಗೆಲುವು

INDVSL 55 ರನ್‌ಗೆ ಶ್ರೀಲಂಕಾ ಆಲೌಟ್, ವಿಶ್ವಕಪ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ ಭಾರತ!