ಮೈದಾನಕ್ಕೆ ನುಗ್ಗಿದ ಜಾರ್ವೋಗೆ ಸಾಂತ್ವನ ಹೇಳಿ ಹೊರಕಳುಹಿಸಿದ ಕೊಹ್ಲಿ, ಐಸಿಸಿಯಿಂದ ಬಿತ್ತು ಬರೆ!

ಕ್ರಿಕೆಟ್, ರಗ್ಬಿ ಸೇರಿದಂತೆ ಹಲವು ಕ್ರೀಡೆಯ ನಡುವೆ ಅತಿಕ್ರಮಣ ಪ್ರವೇಶಿಸುವ ಯೂಟ್ಯೂಬರ್ ಜಾರ್ವೋ ಇದೀಗ ಐಸಿಸಿ ಏಕದಿನ ಪಂದ್ಯದಲ್ಲೂ ಪ್ರತ್ಯಕ್ಷವಾಗಿದ್ದಾನೆ. ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯದ ವೇಳೆ ನುಗ್ಗಿದ ಜಾರ್ವೋಗೆ ವಿರಾಟ್ ಕೊಹ್ಲಿ ಸಾಂತ್ವನ ಹೇಳಿ ಹೊರಕ್ಕೆ ಕಳುಹಿಸಿದ್ದಾರೆ. ಆದರೆ ಐಸಿಸಿ ಮಾತ್ರ ಶಾಕ್ ನೀಡಿದೆ.

ICC World cup 2023 pitch invader jarvo entered again during India vs Australia ODI ckm

ಚೆನ್ನೈ(ಅ.08) ಕ್ರಿಕೆಟ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಪಿಚ್‌ನತ್ತ ನುಗ್ಗವು ಖ್ಯಾತ ಯೂಟ್ಯೂಬರ್ ಜಾರ್ವೋ ಇದೀಗ ಐಸಿಸಿ ಏಕದಿನ ಪಂದ್ಯದಲ್ಲೂ ಹಾವಳಿ ನೀಡಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ದಿಢೀರ್ ಸೆಕ್ಯೂರಿಟಿ ಕಣ್ತಪ್ಪಿಸಿ ನೇರವಾಗಿ ಮೈದಾನಕ್ಕೆ ಎಂಟ್ರಿಕೊಟ್ಟಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿಗಳು ಜಾರ್ವೋನನ್ನು ಹಿಡಿದು ಹೊರಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಹಿಂದಿನಿಂದ ಓಡಿ ಬಂದ ವಿರಾಟ್ ಕೊಹ್ಲಿ ಜಾರ್ವೋಗೆ ನಯದಿಂದಲೇ ಹೊರಕ್ಕೆ ಹೋಗುವಂತೆ ಮನವಿ ಮಾಡಿದ ಘಟನೆ ನಡೆದಿದೆ. ಆದರೆ ವಿರಾಟ್ ಕೊಹ್ಲಿ ತೋರಿಸಿದ ವಿನಯತೆ ಐಸಿಸಿ ತೋರಿಲ್ಲ. ಕ್ರಿಕೆಟ್ ಪಂದ್ಯದ ನಡುವೆ ನುಗ್ಗಿ ಭದ್ರತೆಗೆ ಸವಾಲೆಸೆಯುವ ಜಾರ್ವೋನನ್ನು ಎಲ್ಲಾ ಐಸಿಸಿ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧಿಸಲಾಗಿದೆ.

ಇಂಗ್ಲೆಂಡ್ ಮೂಲಕ ಜಾರ್ವೋ ಈ ಬಾರಿ ಟೀಂ ಇಂಡಿಯಾ ಏಕದಿನ ಜರ್ಸಿ ತೊಟ್ಟು ಮೈದಾನಕ್ಕೆ ನುಗ್ಗಿದ್ದ. ಖ್ಯಾತ ಜಾರ್ವೋ 69 ಜರ್ಸಿ ನಂಬರ್ ಮುದ್ರಿಸಿ ಆಗಮಿಸಿದ ಜಾರ್ವೋ ಇದೀಗ ಬಾರಿ ಸಂಚಲನ ಸೃಷ್ಟಿಸಿದ್ದಾರೆ. ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ಜಾರ್ವೋ ನೇರವಾಗಿ ಪಿಚ್ ಬಳಿ ತೆರಳಿದ್ದಾನೆ. ಈ ವೇಳೆ ಕೆಲ ನಿಮಿಷ ಪಂದ್ಯ ಸ್ಥಗಿತಗೊಂಡಿತ್ತು. ಇತ್ತ ಭದ್ರತಾ ಸಿಬ್ಬಂದಿಗಳು ತಕ್ಷಣವೇ ಕಾರ್ಯಪ್ರವತ್ತರಾಗಿದ್ದಾರೆ. 

ಭಾರತದ ಸ್ಪಿನ್ ಖೆಡ್ಡಾಗೆ ಬಿದ್ದ ಕಾಂಗರೂ ಪಡೆ, ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ..!

ಭದ್ರತಾ ಸಿಬ್ಬಂದಿಗಳು ಜಾರ್ವೋ ಹಿಡಿದು ಮೈದಾನದಿಂದ ಹೊರಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಓಡೋಡಿ ಬಂದ ವಿರಾಟ್ ಕೊಹ್ಲಿ, ಜಾರ್ವೋಗೆ ನಗುತ್ತಲೇ ಮೈದಾನದಿಂದ ಹೊರಹೋಗುಂತೆ ಮನವಿ ಮಾಡಿದ್ದಾರೆ. ಪದೇ ಪದೇ ಕ್ರಿಕೆಟ್ ಪಂದ್ಯದಲ್ಲಿ ಪ್ರತ್ಯಕ್ಷರಾಗಿ ನಿಯಮ ಉಲ್ಲಂಘಿಸುವ ಜಾರ್ವೋಗೆ ಐಸಿಸಿ ಶಾಕ್ ನೀಡಿದೆ. ಇನ್ನು ಮುಂದೆ ಐಸಿಸಿಯ ಯಾವುದೇ ಪಂದ್ಯಕ್ಕೂ ಜಾರ್ವೋ ಕ್ರೀಡಾಂಗಣ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

 

 

ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 199 ರನ್‌ಗೆ ಆಲೌಟ್ ಆಗಿದೆ. ಡೇವಿಡ್ ವಾರ್ನರ್ 41 ಹಾಗೂ ಸ್ಟೀವ್ ಸ್ಮಿತ್ 46 ರನ್ ಕಾಣಿಕೆ ನೀಡಿದರೆ, ಇತರ ಬ್ಯಾಟ್ಸ್‌ಮನ್ ಟೀಂ ಇಂಡಿಯಾ ದಾಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ರವೀಂದ್ರ ಜಡೇಜಾ 3, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಮೊಹ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದರು.

ಎಬಿಡಿ, ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ವಿಶ್ವಕಪ್ ದಾಖಲೆ ಅಳಿಸಿ ಹಾಕಿದ ಡೇವಿಡ್ ವಾರ್ನರ್..!
 

Latest Videos
Follow Us:
Download App:
  • android
  • ios