World Cup 2023: 'ಪಾಕ್ ಎದುರಿನ ಪಂದ್ಯಕ್ಕಿಂತ ನನ್ನಮ್ಮ ನನಗೆ ಮುಖ್ಯ': ಜಸ್ಪ್ರೀತ್ ಬುಮ್ರಾ ಹೀಗಂದಿದ್ದೇಕೆ?

ಜಸ್ಪ್ರೀತ್ ಬುಮ್ರಾ 5 ವರ್ಷ ತುಂಬುವುದರೊಳಗಾಗಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಶಾಲಾ ಪ್ರಿನ್ಸಿಪಾಲ್ ಆಗಿರುವ ಅವರ ತಾಯಿ ದಲ್ಜೀತ್, ತಮ್ಮ ಮಗನನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ICC World Cup 2023 Mother First Priority Before Pakistan says Jasprit Bumrah kvn

ಅಹಮದಾಬಾದ್‌(ಅ.12): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಆಡಿದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇನ್ನು ಇದೀಗ ಟೀಂ ಇಂಡಿಯಾ ಅಕ್ಟೋಬರ್ 14ರಂದು ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

ಅಹಮದಾಬಾದ್‌ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ತವರು ಮೈದಾನವಾಗಿದ್ದು, ತವರಿನಂಗಳದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಅಬ್ಬರಿಸಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ 29 ವರ್ಷದ ಬಲಗೈ ವೇಗಿ ಬುಮ್ರಾ, ತಮಗೆ ಪಾಕಿಸ್ತಾನ ಎದುರಿನ ಪಂದ್ಯಕ್ಕಿಂತ ತಮ್ಮ ತಾಯಿ ಮುಖ್ಯ ಎನ್ನುವುದನ್ನು ಸೂಚ್ಯವಾಗಿ ವಿವರಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಬುಮ್ರಾ, "ನಾನು ಸಾಕಷ್ಟು ಸಮಯದಿಂದ ತವರಿನಾಚೆಯೇ ಇದ್ದೇನೆ. ಮನೆಯಲ್ಲಿರುವ ನನ್ನಮ್ಮನನ್ನು ನೋಡಿ ಖುಷಿಯಾಯಿತು ಎಂದು ಬುಮ್ರಾ ಹೇಳಿದ್ದಾರೆ. ಬುಮ್ರಾ, ಆಫ್ಘಾನಿಸ್ತಾನ ಎದುರಿನ ಪಂದ್ಯದ ವೇಳೆ ಕೇವಲ 39 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮಗಳು ಸನಾ ಎಜುಕೇಷನ್‌ಗೆ ಸೌರವ್ ಗಂಗೂಲಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಜಸ್ಪ್ರೀತ್ ಬುಮ್ರಾ 5 ವರ್ಷ ತುಂಬುವುದರೊಳಗಾಗಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಶಾಲಾ ಪ್ರಿನ್ಸಿಪಾಲ್ ಆಗಿರುವ ಅವರ ತಾಯಿ ದಲ್ಜೀತ್, ತಮ್ಮ ಮಗನನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

"ನಾನು ನನ್ನಮ್ಮನನ್ನು ನೋಡೋಕೆ ಹೋಗುತ್ತಿದ್ದೇನೆ. ಅದು ನನ್ನ ಪಾಲಿನ ಮೊದಲ ಆದ್ಯತೆಯ ಕರ್ತವ್ಯವಾಗಿದೆ. ಇದಾದ ಬಳಿಕ ಭಾರತ ಹಾಗೂ ಪಾಕಿಸ್ತಾನ  ನಡುವಿನ ಪಂದ್ಯದ ಬಗ್ಗೆ ಆಲೋಚಿಸುತ್ತೇನೆ" ಎಂದು ಬುಮ್ರಾ ಹೇಳಿದ್ದಾರೆ. ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಗುರುತಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಇದುವರೆಗೂ ಒಂದೇ ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿಲ್ಲ. ಪಾಕಿಸ್ತಾನ ಎದುರಿನ ಬ್ಲಾಕ್‌ಬಸ್ಟರ್ ಪಂದ್ಯವೇ ಜಸ್ಪ್ರೀತ್ ಬುಮ್ರಾ ತವರಿನಲ್ಲಿ ಆಡಲಿರುವ ಮೊದಲ ಅಂತಾರಾಷ್ಟ್ರೀಯ ಎನಿಸಲಿದೆ.

ವಿಶ್ವಕಪ್‌ನಲ್ಲಿ ಗರಿಷ್ಠ ರನ್‌: ಸಚಿನ್ ದಾಖಲೆ ನುಚ್ಚುನೂರು ಮಾಡಿದ ಕಿಂಗ್ ಕೊಹ್ಲಿ..!

"ನಾನಿಲ್ಲಿ ಇದುವರೆಗೂ ಯಾವುದೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿಲ್ಲ. ಆದರೆ ನಾನಿಲ್ಲಿ ಟೆಸ್ಟ್ ಪಂದ್ಯವನ್ನಾಡಿದ್ದೇನೆ. ವಾತಾವರಣವನ್ನು ನೋಡಿದರೆ ನಾನು ಇದೀಗ ಇಲ್ಲಿ ಏಕದಿನ ಪಂದ್ಯವನ್ನಾಡಲು ಉತ್ಸುಕನಾಗಿದ್ದೇನೆ. ಸಾಕಷ್ಟು ಜನರು ಪಂದ್ಯವನ್ನು ವೀಕ್ಷಿಸಲು ಬರಲಿದ್ದಾರೆ ಎನ್ನುವ ವಿಶ್ವಾಸವಿದೆ. ಇಲ್ಲಿಯೂ ನಾನು ಚೆನ್ನಾಗಿ ಬೌಲಿಂಗ್ ಮಾಡುವ ವಿಶ್ವಾಸವಿದೆ" ಎಂದು ಬುಮ್ರಾ ಹೇಳಿದ್ದಾರೆ. 

ರೋ‘ಹಿಟ್‌’ಗೆ ಆಫ್ಘನ್‌ ಬಾಲ ಕಟ್‌!

ಭಾರತಕ್ಕೆ ಕಠಿಣ ಸ್ಪರ್ಧೆ ನೀಡಲಿದ್ದೇವೆ ಎಂದು ಘೋಷಿಸಿ ಕಣಕ್ಕಿಳಿದಿದ್ದ ಅಫ್ಘಾನಿಸ್ತಾನಕ್ಕೆ ರೋಹಿತ್‌ರ ‘ವಿರಾಟ’ ರೂಪ ದರ್ಶನವಾಯಿತು. ಭಾರತದ ನಾಯಕನ ಪ್ರಚಂಡ ಆಟಕ್ಕೆ ಆಫ್ಘನ್ನರು ಬಾಲ ಮುದುರಿದರು. 8 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾ, ತನ್ನ ಖಾತೆಗೆ ಮತ್ತೆರಡು ಅಂಕಗಳನ್ನು ಸೇರ್ಪಡೆ ಮಾಡಿಕೊಂಡು ವಿಶ್ವಕಪ್‌ ಅಭಿಯಾನಯನ್ನು ಯಶಸ್ವಿಯಾಗಿ ಮುಂದುವರಿಸಿತು.

ತವರಿನ ಹೀರೋ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್‌ ನೋಡಲು ಅರುಣ್‌ ಜೇಟ್ಲಿ ಕ್ರೀಡಾಂಗಣಕ್ಕೆ ಬಂದಿದ್ದ ದೆಹಲಿಯ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ. ಕೊಹ್ಲಿಯ ಬ್ಯಾಟ್‌ ಹೆಚ್ಚು ಸದ್ದು ಮಾಡದಿದ್ದರೂ, ರೋಹಿತ್‌ ಶರ್ಮಾರ ದಾಖಲೆಯ ಶತಕ ಪ್ರೇಕ್ಷಕರ ಮನಸೊರೆಗೊಂಡಿತು.

ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಆಫ್ಘನ್‌, ಆರಂಭಿಕ ಆಘಾತದ ಹೊರತಾಗಿಯೂ 50 ಓವರಲ್ಲಿ 8 ವಿಕೆಟ್‌ಗೆ 272 ರನ್‌ ಕಲೆಹಾಕಿತು. ಹೊಸ ಪಿಚ್‌ ನಿರ್ಮಾಣದ ಬಳಿಕ ಬ್ಯಾಟರ್‌ಗಳ ಸ್ವರ್ಗ ಎನಿಸಿರುವ ಜೇಟ್ಲಿ ಕ್ರೀಡಾಂಗಣದಲ್ಲಿ 273 ರನ್‌ ಗುರಿ ಸಾಧಾರಣ ಎನಿಸಿತು.

ವಿಶ್ವಕಪ್‌ನಲ್ಲಿ ಭಾರತಕ್ಕೆ ಸತತ 2ನೇ ಗೆಲುವು, ರೋಹಿತ್ ಅಬ್ಬರಕ್ಕೆ ಶರಣಾದ ಆಫ್ಘಾನಿಸ್ತಾನ!

ಮೊದಲ 10 ಓವರಲ್ಲಿ ಭಾರತ 94 ರನ್‌ ಚಚ್ಚಿತು. ಇದರಲ್ಲಿ ರೋಹಿತ್‌ರದ್ದೇ 76 ರನ್‌. 62 ಎಸೆತದಲ್ಲಿ ಶತಕ ಸಿಡಿಸಿದ ರೋಹಿತ್‌, ಕಿಶನ್‌(47) ಜೊತೆ ಮೊದಲ ವಿಕೆಟ್‌ಗೆ 156 ರನ್‌ ಜೊತೆಯಾಟವಾಡಿದರು.

84 ಎಸೆತದಲ್ಲಿ 16 ಬೌಂಡರಿ, 5 ಸಿಕ್ಸರ್‌ನೊಂದಿಗೆ 131 ರನ್‌ ಗಳಿಸಿ ರೋಹಿತ್‌ ಔಟಾದಾಗ ತಂಡದ ಗೆಲುವಿಗೆ 24.3 ಓವರಲ್ಲಿ (147 ಎಸೆತ) 68 ರನ್‌ ಬೇಕಿತ್ತು. ಬಳಿಕ ಕೆಲ ಆಕರ್ಷಕ ಹೊಡೆತಗಳ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದ ವಿರಾಟ್‌, 55 ರನ್‌ ಗಳಿಸಿ ಔಟಾಗದೆ ಉಳಿದರು. ಶ್ರೇಯಸ್‌ ಅಯ್ಯರ್‌(25) ಸಹ ಕೆಲ ಸಮಯ ಕ್ರೀಸ್‌ನಲ್ಲಿ ಕಳೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.
 

Latest Videos
Follow Us:
Download App:
  • android
  • ios