INDvSA ಪಂದ್ಯದ ನಡುವೆ ಕೋಲ್ಕಾತದಲ್ಲಿ ಮೊಳಗಿದ ವಂದೇ ಮಾತರಂ, ವಿಡಿಯೋ ವೈರಲ್!
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಪಂದ್ಯದಲ್ಲಿ ಕೋಲ್ಕತಾದಲ್ಲಿ ನೆರೆದಿದ್ದ 60 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ವಂದೇ ಮಾತರಂ ಹಾಡು ಮೊಳಗಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಕೋಲ್ಕತಾ(ನ.05) ಐಸಿಸಿ ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತ 8ನೇ ಗೆಲುವು ದಾಖಲಿಸಿದೆ. ಸೌತ್ ಆಫ್ರಿಕಾ ವಿರುದ್ಧದ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಭಾರತ 243 ರನ್ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ಕೇವಲ 83 ರನ್‌ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದೇ ಪಂದ್ಯದ ನಡುವೆ ಈಢನ್ಸ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನರೆದಿದ್ದ 60 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ವಂದೇ ಮಾತರಂ ಗೀತೆ ಮೊಳಗಿಸಿದ್ದಾರೆ. ಇಡೀ ಕ್ರೀಡಾಂಗಣದವೇ ವಂದೇ ಮಾತರಂ ಹಾಡಿತ್ತು. ಈ ವಿಡಿಯೋ ವೈರಲ್ ಆಗಿದೆ.
ಭಾರತದ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ ಅಷ್ಟೇ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿತ್ತು. ಪಂದ್ಯದ ನಡುವೆ ಅಭಿಮಾನಿಗಳು ವಂದೇ ಮಾತರಂ ಗೀತೆ ಹಾಡುವ ಮೂಲಕ ಟೀಂ ಇಂಡಿಯಾವನ್ನು ಹುರಿದುಂಬಿಸಿದ್ದಾರೆ. ಈ ವೈರಲ್ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳು ಎದ್ದು ನಿಂತು ವಂದೇ ಮಾತರಂ ಹಾಡಿದ್ದಾರೆ.
ಜಡೇಜಾ ಸ್ಪಿನ್ ಮೋಡಿಗೆ ಸೌತ್ ಆಫ್ರಿಕಾ ಉಡೀಸ್,243 ರನ್ ಗೆಲುವಿನ ದಾಖಲೆ ಬರೆದ ರೋಹಿತ್ ಬಾಯ್ಸ್!
ಸೌತ್ ಆಫ್ರಿಕಾ ವಿರುದ್ದದ ಗೆಲುವಿನ ಬಳಿಕ ಟೀಂ ಇಂಡಿಯಾದ ಒಟ್ಟು ಅಂಕ 16ಕ್ಕೆ ಏರಿಕೆಯಾಗಿದೆ. ಆಡಿದ 8 ಪಂದ್ಯದಲ್ಲಿ 8ರಲ್ಲೂ ಭಾರತ ಗೆಲುವು ದಾಖಲಿಸಿದೆ. ಎರಡನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 8ರಲ್ಲಿ 6 ಗೆಲುವು ದಾಖಲಿಸಿ 12 ಅಂಕ ಸಂಪಾದಿಸಿದೆ. ಭಾರತ ಹಾಗೂ ಸೌತ್ ಆಫ್ರಿಕಾ ಎರಡೂ ತಂಡ ಅಧಿಕೃತವಾಗಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನುಳಿದ 2 ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ.
ಸದ್ಯ ಆಸ್ಟ್ರೇಲಿಯಾ 7ರಲ್ಲಿ 5 ಪಂದ್ಯ ಗೆದ್ದು 10 ಅಂಕಗಳಿಸಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ.ಇನ್ನು ನ್ಯೂಜಿಲೆಂಡ್ 8ರಲ್ಲಿ ನಾಲ್ಕು ಗೆಲುವು ನಾಲ್ಕು ಸೋಲಿನ ಮೂಲಕ 8 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಇತ್ತ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ಕೂಡ 8 ರಲ್ಲಿ 4 ಗೆಲುವು ದಾಖಲಿಸಿದೆ. ಆದರೆ ನ್ಯೂಜಿಲೆಂಡ್ ನೆಟ್ ರನ್‌ರೇಟ್ ಉತ್ತಮವಾಗಿರುವ ಕಾರಣ 4ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನಕ್ಕೆ ಸೆಮಿಫೈನಲ್ ಸ್ಥಾನಕ್ಕೇರುವ ಅಕಾಶವಿದೆ.
INDvSA ಕೊಹ್ಲಿ ಶತಕ ದಾಖಲೆಗೆ ಪರ ವಿರೋಧ, ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿಶ್ ಸೆಂಚುರಿ ಟ್ರೆಂಡ್!
ಶ್ರೀಲಂಕಾ ಹಾಗೂ ನೆದರ್ಲೆಂಡ್ ಅಧಿಕೃತವಾಗಿ ಹೊರಬಿದ್ದಿಲ್ಲ, ಆದರೆ ಟೂರ್ನಿಯಿಂದ ಬಹುತೇಕ ಔಟ್ ಆಗಿದೆ. ಇನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ಮೊದಲ ತಂಡವಾಗಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಇತ್ತ ಬಾಂಗ್ಲಾದೇಶ ಕೂಡ ಟೂರ್ನಿಯಿಂದ ಹೊರಬಿದ್ದಿದೆ.