Asianet Suvarna News Asianet Suvarna News

ಭಾರತ-ಪಾಕ್ ಸೆಮಿಫೈನಲ್ ಪಂದ್ಯ ಟ್ರೆಂಡ್, ಬಾಬರ್ ಅಜಮ್ ಸೈನ್ಯಕ್ಕಿದೆ 2 ದಾರಿ!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಬಹುತೇಕ ಟೂರ್ನಿಯಿಂದ  ಹೊರಬಿದ್ದಿದ್ದ ಪಾಕಿಸ್ತಾನ ಇದೀಗ ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ. ನ್ಯೂಜಿಲೆಂಡ್ ಮಣಿಸಿದ ಬೆನ್ನಲ್ಲೇ ಇದೀಗ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ -ಪಾಕಿಸ್ತಾನ ಸೆಮಿಫೈನಲ್ ಪಂದ್ಯ ನಡೆಯಲಿದೆ ಎಂದು ಕೆಲ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇಂಡೋ-ಪಾಕ್ ಸೆಮಿಫೈನಲ್ ಪಂದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ.
 

ICC World cup 2023 India vs Pakistan Semi-final match trending on social media after New zealand match ckm
Author
First Published Nov 4, 2023, 9:05 PM IST

ಬೆಂಗಳೂರು(ನ.04) ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ 21 ರನ್(ಡಕ್ ವರ್ತ್) ಗೆಲುವು ದಾಖಲಿಸುತ್ತಿದ್ದಂತೆ ಪಾಕಿಸ್ತಾನದ ಅದೃಷ್ಠ ಬದಲಾಗಿದೆ. ಟೂರ್ನಿಯಿಂದಲೇ ಔಟ್ ಎಂದೇ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಇದೀಗ ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ. ಇದರ ಬೆನ್ನಲ್ಲೇ ಕೆಲ ಅಭಿಮಾನಿಗಳು ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್ ಆಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಹಲವು ಮಾಜಿ ಕ್ರಿಕೆಟಿಗರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಮಾಜಿ ಕ್ರಿಕೆಟಿಗೆ ಮೈಕಲ್ ವಾನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಎಲ್ಲಾ ಪಂದ್ಯಗಳನ್ನು ಗೆದ್ದು ಭಾರತ ವಿರುದ್ಧ ಸೆಮಿಫೈನಲ್ ಆಡುವಂತವಾಗಲಿ ಎಂದಿದ್ದಾರೆ. ಕೋಲ್ಕತ್ತಾದಲ್ಲಿ ಭಾರತ ಪಾಕಿಸ್ತಾನ ಸೆಮಿಫೈನಲ್ ಪಂದ್ಯ ಅನ್ನೋ ಭವಿಷ್ಯ ಐಸಿಸಿ ವಿಶ್ವಕಪ್ ಟೂರ್ನಿಯ ರೋಚಕತೆ ಮತ್ತಷ್ಟು ಹೆಚ್ಚಿಸಿದೆ.

ಮಳೆ ನಡುವೆ ಪಾಕಿಸ್ತಾನದ ಸೆಮೀಸ್ ಆಸೆ ಜೀವಂತ, ನ್ಯೂಜಿಲೆಂಡ್ ಸೋಲಿನಿಂದ ಆಫ್ರಿಕಾ ಸ್ಥಾನ ಖಚಿತ!

ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ದ ಹೋರಾಟ ನಡೆಸಲಿದೆ. ಇಂಗ್ಲೆಂಡ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಯಾವ ತಂಡಕ್ಕೂ ಪ್ರಬಲ ಎದುರಾಳಿ ಎಂದು ಅನಿಸಲೇ ಇಲ್ಲ. ಸದ್ಯ ಪಾಕಿಸ್ತಾನದ ಫಾರ್ಮ್ ನೋಡಿದರೆ, ಇಂಗ್ಲೆಂಡ್ ವಿರುದ್ಧ ಗೆಲುವು ದಾಖಸಲಿದೆ. ಹೀಗಾದರೆ ಪಾಕಿಸ್ತಾನದ ಒಟ್ಟು ಅಂಕ 10ಕ್ಕೆ ಏರಿಕೆಯಾಗಲಿದೆ. ಇಷ್ಟಕ್ಕೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲ್ಲ.

ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಕ್ಕೆ ಎರಡು ದಾರಿಗಳಿವೆ. ಆದರೆ ಈ ಎರಡೂ ದಾರಿಯಲ್ಲಿ ಇತರ ತಂಡದ ಫಲಿತಾಂಶವೇ ಮುಖ್ಯ. ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಲು ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಮುಗ್ಗರಿಸಬೇಕು. ಹೀಗಾದಲ್ಲಿ ನ್ಯೂಜಿಲೆಂಡ್ ತಂಡದ ಒಟ್ಟು ಅಂಕ 10ಕ್ಕೆ ಸೀಮಿತಗೊಳ್ಳಲಿದೆ. ಇತ್ತ ಇಂಗ್ಲೆಂಡ್ ವಿರುದ್ದ ಉತ್ತಮ ರನ್‌ರೇಟ್ ಮೂಲಕ ಪಾಕಿಸ್ತಾ ಗೆದ್ದರೆ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲಿದೆ.

ದೆಹಲಿ ಮಾಲಿನ್ಯದಿಂದ ಲಂಕಾ-ಬಾಂಗ್ಲಾ ಅಭ್ಯಾಸ ರದ್ದು, ಪಂದ್ಯ ಸ್ಥಳಾಂತರದ ಕುರಿತು ಬಿಸಿಸಿಐ ಸ್ಪಷ್ಟನೆ!

ಇನ್ನೊಂದು ದಾರಿ ಎಂದರೆ ಆಸ್ಟ್ರೇಲಿಯಾ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಸೋಲು ಕಾಣಬೇಕು. ಹೀಗಾದಲ್ಲಿ ಆಸ್ಟ್ರೇಲಿಯಾದ ಒಟ್ಟು ಅಂಕ 8ರಲ್ಲೇ ಇರಲಿದೆ. ಇತ್ತ ಪಾಕಿಸ್ತಾನ 10 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಲಿದೆ. ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿದೆ. ಹಾಗಂತ ಸುಲಭವಾಗಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಅಸಾಧ್ಯ ಯಾವೂದು ಇಲ್ಲ.


 

Follow Us:
Download App:
  • android
  • ios