IND vs NZ ಕೊಹ್ಲಿ ಅಬ್ಬರಕ್ಕೆ ನ್ಯೂಜಿಲೆಂಡ್ ಕಂಗಾಲು, 20 ವರ್ಷ ಬಳಿಕ ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲುವು!

ದಿಢೀರ್ ವಿಕೆಟ್ ಪತನದಿಂದ ಪಂದ್ಯದ ಗತಿ ಬದಲಾಯಿತು. ಸೂರ್ಯಕುಮಾರ್ ಯಾದವ್ ರನೌಟ್ ಕೂಡ ವಿರಾಟ್ ಕೊಹ್ಲಿ ತಲೆ ಮೇಲೆ ಬಂದಿತ್ತು. ಆದರೆ ದಿಟ್ಟ ಹೋರಾಟ ನೀಡಿದ ವಿರಾಟ್ ಕೊಹ್ಲಿ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದರು. ಕಳೆದ 20 ವರ್ಷದಿಂದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ದ ಸೋಲನ್ನೇ ಹಾಸು ಹೊದ್ದ ಭಾರತ ಕೊನೆಗೂ ಸಂಕೋಲೆಯಿಂದ ಹೊರಬಂದಿದೆ. ಕೊಹ್ಲಿ ದಿಟ್ಟ ಹೋರಾಟಕ್ಕೆ ಭಾರತ 4 ವಿಕೆಟ್ ಗೆಲುವು ದಾಖಲಿಸಿದೆ.

ICC World cup 2023 IND vs NZ Virat Kohli help Team India to thrash New Zealand by 4 wickets ckm

ಧರ್ಮಶಾಲಾ(ಅ.22) ಕಳೆದ 20 ವರ್ಷದಿಂದ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ದ ಗೆಲುವು ಸಿಕ್ಕಿರಲಿಲ್ಲ. ಇದೀಗ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ವಿರಾಟ್ ಕೊಹ್ಲಿ ಸಿಡಿಸಿದ 95 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅಜೇಯ 39 ರನ್ ನೆರವಿನಿಂದ ಭಾರತ 4 ವಿಕೆಟ್ ಗೆಲುವು ದಾಖಲಿಸಿದೆ. 2003ರ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಗೆಲುವಿನ ನಗೆ ಬೀರಿದೆ. 5 ಪಂದ್ಯದಲ್ಲಿ 5ರಲ್ಲೂ ಗೆಲುವು ದಾಖಲಿಸಿದ ಭಾರತ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಡರಿಲ್ ಮೆಚೆಲ್ ಸೆಂಚುರಿ ಹಾಗೂ ರಾಚಿನ್ ರವೀಂದ್ರ 75 ರನ್ ಹೋರಾಟಿಂದ ನ್ಯೂಜಿಲೆಂಡ್ 273 ರನ್ ಸಿಡಿಸಿತ್ತು. ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಸ್ಫೋಟಕ ಆರಂಭದಿಂದ ಭಾರತ ದಿಟ್ಟ ಹೋರಾಟ ನೀಡಿತು. ನಾಯಕ ರೋಹಿತ್ ಶರ್ಮಾ 40 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಭಾರತ 71 ರನ್ ಜೊತೆಯಾಟ ನೀಡಿತು.

IND vs NZ ರೋಹಿತ್-ವಿರಾಟ್ ನಡುವೆ ನಡೆಯಿಯಾ ಮಾತಿನ ಚಕಮಕಿ? ವಿಡಿಯೋ ವೈರಲ್!

ರೋಹಿತ್ ಶರ್ಮಾ ವಿಕೆಟ್ ಪತನದ ಬೆನ್ನಲ್ಲೇ ಗಿಲ್ ವಿಕೆಟ್ ಕೈಚೆಲ್ಲಿದರು. ಗಿಲ್ 26 ರನ್ ಸಿಡಿಸಿ ಔಟಾದರು. ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮೇಲೆ ಜವಾಬ್ದಾರಿ ಹೆಚ್ಚಿತು. ಅಯ್ಯರ್ ಬೌಂಡರಿ ಮೂಲಕವೇ ಅಬ್ಬರಿಸಿದರು. ಆದರೆ 29 ಎಸೆತದಲ್ಲಿ ಶ್ರೇಯಸ್ ಅಯ್ಯರ್ 33 ರನ್ ಸಿಡಿಸಿ ಔಟಾದರು. ಅಯ್ಯರ್ ಬಳಿ ಕೆಎಲ್ ರಾಹಲ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಕೊಹ್ಲಿ ಹಾಗೂ ರಾಹುಲ್ ಜೊತೆಯಾಟದಿಂದ ಭಾರತ ಉತ್ತಮ ಸ್ಥಿತಿ ಕಾಪಾಡಿಕೊಂಡಿತು. ಆಧರೆ ರಾಹುಲ್ 27 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 191 ರನ್‌ಗೆ ಭಾರತ ಪ್ರಮುಖ  5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಭಾರತ ಕೊನೆಯ ಬಾರಿಗೆ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಸೋಲಿಸಿದ್ದಾಗ ಕೊಹ್ಲಿಗೆ ಕೇವಲ 14 ವರ್ಷ..!

ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಇತ್ತ ರವೀಂದ್ರ ಜಡೇಜಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೆ, ಕೊಹ್ಲಿ ರನ್ ಕುಸಿಯದಂತೆ ನೋಡಿಕೊಂಡರು. ನ್ಯೂಡಿಲೆಂಡ್ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ನಿಂದ ನ್ಯೂಜಿಲೆಂಡ್ ಒತ್ತಡದಲ್ಲಿ ಸಿಲುಕಿತು.  ವಿರಾಟ್ ಕೊಹ್ಲಿ 95 ರನ್ ಸಿಡಿಸಿ 5 ರನ್‌ನಿಂದ ಶತಕ ಮಿಸ್ ಮಾಡಿಕೊಂಡರು. ಇತ್ತ ರವೀಂದ್ರ ಜಡೇಜಾ ಅಜೇಯ 39 ರನ್ ಸಿಡಿಸಿದರು. ಈ ಮೂಲಕ ಭಾರತ 48 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
 

Latest Videos
Follow Us:
Download App:
  • android
  • ios