ಕಳೆದ 3 ವಿಶ್ವಕಪ್‌ನಲ್ಲಿ ಎಡಭಾಗದಲ್ಲಿ ನಿಂತವರಿಗೆ ಒಲಿದಿದೆ ಟ್ರೋಫಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್!
ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮಣಿಸಿ ಭಾರತ ಟ್ರೋಫಿ ಗೆಲ್ಲಲಿ ಎಂದು ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಜ್ಯೋತಿಷ್ಯ, ಅಂಕಿ ಸಂಖ್ಯೆ ಲೆಕ್ಕಾಚಾರಗಳು ಜೋರಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಕಳೆದ 3 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟ್ರೋಫಿ ಜೊತೆ ಎಡಭಾಗದಲ್ಲಿ ನಿಂತು ಪೋಸ್ ಕೊಟ್ಟ ನಾಯಕರೇ ಚಾಂಪಿಯನ್ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಹೊಸ ಟ್ರೆಂಡ್ ಇಲ್ಲಿದೆ.
ಅಹಮ್ಮದಾಬಾದ್(ನ.18) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ದೇಶದ ಹಲವು ದೇವಸ್ಥಾನಗಳಲ್ಲಿ ಅಭಿಮಾನಿಗಳು ಭಾರತದ ಗೆಲುವಿಗಾಗಿ ಪೂಜೆ, ಪಾರ್ಥನೆ ನಡೆಸಿದ್ದಾರೆ. ಇತ್ತ ಹಲವು ಜ್ಯೋತಿಷಿಗಳು ಗೆಲುವಿನ ಭವಿಷ್ಯ ನುಡಿದಿದ್ದಾರೆ. ಮಾಜಿ ಕ್ರಿಕೆಟಿಗರು ಪ್ರಿಡಿಕ್ಷನ್ ಹೇಳಿದ್ದಾರೆ. ಇದರ ನಡುವೆ ಸಾಮಾಜಿಕ ಮಾಧ್ಯಮಳಲ್ಲೂ ಭಾರಿ ಲೆಕ್ಕಾಚಾರ ನಡೆಯುತ್ತಿದೆ. ಫೈನಲ್ ಪಂದ್ಯಕ್ಕೂ ಮೊದಲು ಉಭಯ ನಾಯಕರು ಟ್ರೋಫಿ ಜೊತೆ ಪೋಸ್ ನೀಡುತ್ತಾರೆ. ಕಳೆದ 3 ವಿಶ್ವಕಪ್ ಟೂರ್ನಿಯಲ್ಲಿ ಎಡಭಾಗದಲ್ಲಿ ನಿಂತು ಫೋಟೋಗೆ ಫೋಸ್ ನೀಡಿದವರೇ ಚಾಂಪಿಯನ್ ಆಗಿದ್ದಾರೆ. ಈ ಬಾರಿ ನಾಯಕ ರೋಹಿತ್ ಶರ್ಮಾ ಎಡಭಾಗದಲ್ಲಿ ನಿಂತಿದ್ದಾರೆ. ಹೀಗಾಗಿ ಭಾರತ ಚಾಂಪಿಯನ್ ಆಗಲಿದೆ ಅನ್ನೋ ಲೆಕ್ಕಾಚಾರವೊಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಫೋಟೋ ಹಾಗೂ ವಿಶೇಷ ಲೆಕ್ಕಾಚಾರದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಾಯಕರ ಟ್ರೋಫಿ ಪೋಟೋಶೂಟ್ ಜೊತೆ ಕಳೆದ 3 ವಿಶ್ವಕಪ್ ಟೂರ್ನಿಯ ನಾಯಕರ ಫೋಟೋಶೂಟ್ ಫೋಟೋ ನೀಡಲಾಗಿದೆ. 2011ರಲ್ಲಿ ನಾಯಕ ಎಂ.ಎಸ್ ಧೋನಿ ಹಾಗೂ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕಾರ ಟ್ರೋಫಿ ಜೊತೆ ಪೋಸ್ ನೀಡಿದ್ದರು. ಈ ವೇಳೆ ಧೋನಿ ಎಡಭಾಗದಲ್ಲಿ ಪೋಸ್ ನೀಡಿದ್ದರು. ಫೈನಲ್ ಪಂದ್ಯದಲ್ಲಿ ಲಂಕಾ ಮಣಿಸಿದ ಭಾರತ ಚಾಂಪಿಯನ್ ಆಗಿತ್ತು.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂಪಾಯಿ ದಾನ, ಆಸ್ಟ್ರೋಟಾಕ್ ಸಿಇಒ ಘೋಷಣೆ!
2015ರಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಹಾಗೂ ನ್ಯೂಜಿಲೆಂಡ್ ನಾಯಕ ಬ್ರೆಂಡೆನ್ ಮೆಕಲಂ ಫೋಟೋಗೆ ಪೋಸ್ ನೀಡಿದ್ರು. ಎಡಭಾಗದಲ್ಲಿ ನಿಂತಿದ್ದ ಕ್ಲಾರ್ಕ್‌ಗೆ ವಿಶ್ವಕಪ್ ಟ್ರೋಫಿ ಒಲಿದಿತ್ತು. ಇನ್ನು 2019ರಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫೋಟೋಗೆ ಪೋಸ್ ನೀಡಿದ್ದರು. ಎಡಭಾಗದಲ್ಲಿ ನಿಂತಿದ್ದ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿತ್ತು.
ಇದೀಗ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಫೋಟೋಗೆ ಪೋಸ್ ನೀಡಿದ್ದಾರೆ. ಅಹಮ್ಮದಾಬಾದ್‌ನ ಖ್ಯಾತ ಸ್ಟೆಪ್ ವೆಲ್‌ನಲ್ಲಿ ಫೋಟೋಶೂಟ್ ನಡೆಸಲಾಗಿದೆ. ಈ ವೇಳೆ ರೋಹಿತ್ ಶರ್ಮಾ ಎಡಭಾಗದಲ್ಲಿ ನಿಂತಿದ್ದಾರೆ. ಕಮಿನ್ಸ್ ಬಲಭಾಗದಲ್ಲಿ ನಿಂತಿದ್ದಾರೆ. ಹೀಗಾಗಿ ಭಾರತವೇ ಗೆಲ್ಲಲಿದೆ ಅನ್ನೋ ಲೆಕ್ಕಾಚಾರ ಹರಿದಾಡುತ್ತಿದೆ.
ಬಹುತೇಕರು ಡ್ರಾಪೌಟ್, ಫೈನಲ್ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ಏನು ಓದಿದ್ದಾರೆ?
ಜ್ಯೋತಿಷ್ಯ, ಅಂಕಿ ಸಂಕಿ ಲಕ್ಕಾಚಾರಗಳು ಒಂದಡೆಯಾದರೆ, ಭಾರತ ತಂಡ ಅದ್ವಿತೀಯ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದೆ. ಇತ್ತ ಆಸ್ಟ್ರೇಲಿಯಾ ಹರಸಾಹಸದ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದೆ. ಸಹಜವಾಗಿ ಭಾರತವೇ ವಿಶ್ವಕಪ್ ಗೆಲುವಿನ ಫಿವರೇಟಿ ಆಗಿದೆ.