ಸಿಡ್ನಿ(ಮಾ.05): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಮಾರ್ಚ್ 8 ರಂದು ನಡೆಯಲಿರುವ ಫೈನಲ್ ಪಂದ್ಯ ಇದೀಗ ತೀವ್ರ ಕುತೂಹಲ ಕೆರಳಿಸಿದೆ.  2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಸೋಲಿಸಿದ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸೋ ಮೂಲಕ ಭಾರತೀಯ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿತ್ತು. 

ಇದನ್ನೂ ಓದಿ: ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಸೆಮೀಸ್ ಆಡದೇ ಭಾರತ ವನಿತೆಯರು ಫೈನಲ್‌ಗೆ ಲಗ್ಗೆ

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯಕ್ಕೆ ಮಳೆ ವಿಪರೀತ ಅಡ್ಡಿಯಾಗಿದೆ. ಮೊದಲ ಪಂದ್ಯದ ಮಳೆಯಿಂದ ರದ್ದಾಯಿತು. ಅಂಕಪಟ್ಟಿ ಆಧಾರದಲ್ಲಿ ಇಂಗ್ಲೆಂಡ್ ಹಿಂದಿಕ್ಕಿದ ಭಾರತ ವನಿತೆಯರು ಫೈನಲ್ ಪ್ರವೇಶಿಸಿದ್ದರು. ಇದೀಗ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಸೋಲಿಸಿದ ಆಸ್ಟ್ರೇಲಿಯಾ ಫೈನಲ್ ಟಿಕೆಟ್ ಪಡೆಯಿತು.

ಇದನ್ನೂ ಓದಿ:ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರಿಗೆ ಅಭಿನಂದನೆಗಳ ಮಹಾಪೂರ!.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 134 ರನ್ ಸಿಡಿಸಿತು. ಆದರೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಹೀಗಾಗಿ 2ನೇ ಇನಿಂಗ್ಸ್ 13 ಓವರ್‌ಗೆ ಸಮೀತಗೊಳಿಸಲಾಯಿತು. ಡಕ್‌ವರ್ತ್ ನಿಯಮದ ಪ್ರಕಾರ 98 ರನ್ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ 92 ರನ್ ಸಿಡಿಸಿತು. ಈ ಮೂಲಕ ಆಸೀಸ್ 5 ರನ್ ರೋಚಕ ಗೆಲುವು ಕಂಡಿತು.