Asianet Suvarna News Asianet Suvarna News

ICC U-19 World Cup: ಪಂದ್ಯ ನಡೆಯುತ್ತಿದ್ದ ವೇಳೆಯೇ ಭೂಕಂಪನ..!

* ಅಂಡರ್ 19 ವಿಶ್ವಕಪ್ ಪಂದ್ಯ ನಡೆಯುತ್ತಿರುವಾಗಲೇ ಸಂಭವಿಸಿತು ಭೂಕಂಪ

* ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಪ್ಲೇಟ್ ಹಂತದ ಪಂದ್ಯದ ವೇಳೆ ಘಟನೆ

* ಟ್ರಿನಿಡಾಡ್ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲು

ICC U19 World Cup Earthquake felt at Ireland vs Zimbabwe game kvn
Author
Bengaluru, First Published Jan 30, 2022, 1:06 PM IST

ಟ್ರಿನಿಡಾಡ್‌(ಜ.30): ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ (ICC U-19 World Cup) ಜಿಂಬಾಬ್ವೆ ಹಾಗೂ ಐರ್ಲೆಂಡ್ (Ireland vs Zimbabwe game) ತಂಡಗಳ ನಡುವಿನ ಪ್ಲೇಟ್ ಹಂತದ ಸೆಮಿಫೈನಲ್‌ ಪಂದ್ಯದ ವೇಳೆಯೇ ಭೂಕಂಪನ ಸಂಭವಿಸಿದೆ. ಶನಿವಾರ ಟ್ರಿನಿಡಾಡ್ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದ್ದು, ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದ ಕಾಮೆಂಟೇಟರ್‌ಗಳಿಗೆ ಈ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ತಮ್ಮ ಮುಂದಿದ್ದ ಟೀವಿ ಅಲುಗಾಡುವ ವಿಡಿಯೋವೊಂದನ್ನು ಕಾಮೆಂಟೇಟರ್ ಒಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ತುಂಬಾ ಅಚ್ಚರಿಯ ವಿಚಾರವೆಂದರೆ ಮೈದಾನದಲ್ಲಿದ್ದ ಆಟಗಾರರಿಗೆ ಈ ಘಟನೆಯ ಮಾಹಿತಿಯೇ ಇರಲಿಲ್ಲ. ಇನ್ನು ಪಂದ್ಯ ಪ್ರಸಾರಕ್ಕೆ ಕೂಡಾ ಯಾವುದೇ ಅಡಚಣೆ ಆಗಲಿಲ್ಲ. 

ಸಿಎಸ್‌ಕೆ ಭಾರತದ ಅತಿ ಶ್ರೀಮಂತ ಕ್ರೀಡಾ ತಂಡ

ನವದೆಹಲಿ: ಐಪಿಎಲ್‌ನ (IPL) ನಾಲ್ಕು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Channai Super Kings) ಭಾರತದ ಅತಿ ಶ್ರೀಮಂತ ಕ್ರೀಡಾ ತಂಡ ಎನಿಸಿಕೊಂಡಿದೆ. ತಂಡದ ಒಟ್ಟು ಮೌಲ್ಯ ಶುಕ್ರವಾರ 7,600 ಕೋಟಿ ರು. ದಾಟಿದೆ. ಚೆನ್ನೈ ತಂಡದ ಮೌಲ್ಯ ತಂಡದ ಮಾಲಿಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ಗಿಂತಲೂ (India Cements) ಹೆಚ್ಚಾಗಿ ದಾಖಲೆ ಬರೆದಿದೆ. ಸದ್ಯ ಇಂಡಿಯಾ ಸಿಮೆಂಟ್‌ ಕಂಪೆನಿಯ ಮಾರುಕಟ್ಟೆಮೌಲ್ಯ 6,869 ಕೋಟಿ ರು. ಇದೆ.

IPL Auction 2022: ಈ ಮೂವರು ವಿಂಡೀಸ್ ಸ್ಟಾರ್ ಆಟಗಾರರು ಅನ್‌ಸೋಲ್ಡ್‌ ಆಗಬಹುದು..!

ಇನ್ನು ಡಾ. ಆರ್‌.ಪಿ. ಸಂಜೀವ್ ಗೋಯೆಂಕಾ ಒಡೆತನದ ಆರ್‌ಪಿಎಸ್‌ಜಿ ಗ್ರೂಪ್‌ (RPSG Group) 7,000+ ಕೋಟಿ ರುಪಾಯಿ ನೀಡಿ ಲಖನೌ ಫ್ರಾಂಚೈಸಿಯ (Lucknow Franchise) ಮಾಲೀಕತ್ವ ಪಡಿದುಕೊಂಡಿತ್ತು. ಇನ್ನು ಸಿವಿಸಿ ಕ್ಯಾಪಿಟಲ್ (CVC Capitals) ಗ್ರೂಪ್ 5,625 ಕೋಟಿ ರುಪಾಯಿ ಬಿಡ್‌ ಮಾಡಿ ಅಹಮದಾಬಾದ್ ತಂಡವನ್ನು ಖರೀದಿಸಿತ್ತು. ಇದರ ಬೆನ್ನಲ್ಲೇ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಶೇರು ಮೌಲ್ಯ ಕೂಡಾ ಹೆಚ್ಚಳವಾಗಿದೆ.

ಈ ವರ್ಷವೂ ಚೆನ್ನೈಗೆ ಧೋನಿಯೇ ನಾಯಕ

ಚೆನ್ನೈ: 2022ರ ಐಪಿಎಲ್‌ನಲ್ಲೂ ಎಂ.ಎಸ್‌.ಧೋನಿಯೇ(MS Dhoni) ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಭವಿಷ್ಯದ ದೃಷ್ಟಿಯಿಂದ ಈಗಲೇ ಧೋನಿ, ರವೀಂದ್ರ ಜಡೇಜಾಗೆ (Ravindra Jadeja) ನಾಯಕತ್ವ ಬಿಟ್ಟುಕೊಡಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. 

‘ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈಗ ಧೋನಿಯೇ ತಂಡದ ನಾಯಕ. ಮುಂದೆ ನಾಯಕತ್ವ ಬಿಡುವುದಾದರೆ ಅವರೇ ಅದನ್ನು ಘೋಷಿಸಲಿದ್ದಾರೆ’ ಎಂದು ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 12 ಹಾಗೂ 13ಕ್ಕೆ ನಡೆಯಲಿರುವ ಐಪಿಎಲ್ ಮೆಗಾ ಹರಾಜು (IPL Mega Auction) ಪ್ರಕ್ರಿಯೆಗೆ ಸಿದ್ಧತೆ ನಡೆಸಲು ಧೋನಿ ಚೆನ್ನೈಗೆ ತೆರಳಿದ್ದಾರೆ.

MS Dhoni Advices : ಫಲಿತಾಂಶದ ಮೇಲಲ್ಲ, ಪ್ರಕ್ರಿಯೆ ಮೇಲೆ ಹೆಚ್ಚಿನ ಗಮನ ನೀಡಿ!

ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಮೋಯಿನ್ ಅಲಿ(Moeen Ali) ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ರೀಟೈನ್‌ ಮಾಡಿಕೊಂಡಿದೆ. ಇನ್ನು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ನಾಯಕ ಮಹೇಂದ್ರ ಸಿಂಗ್ ಧೋನಿ ಈಗಿನಿಂದಲೇ ರಣತಂತ್ರ ಹೆಣೆಯಲಾರಂಭಿಸಿದ್ದಾರೆ.

Follow Us:
Download App:
  • android
  • ios