Asianet Suvarna News Asianet Suvarna News

MS Dhoni Advices : ಫಲಿತಾಂಶದ ಮೇಲಲ್ಲ, ಪ್ರಕ್ರಿಯೆ ಮೇಲೆ ಹೆಚ್ಚಿನ ಗಮನ ನೀಡಿ!

ಭೂತಾನ್ ಆಲ್ರೌಂಡರ್ ಮಿಕ್ಯೋ ದೋರ್ಜಿಗೆ ಸಲಹೆ
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ
ಐಪಿಎಲ್ ಹರಾಜಿಗೆ ಹೆಸರು ಸೇರಿಸಿದ ಮೊದಲ ಭೂತಾನ್ ಪ್ಲೇಯರ್ ದೋರ್ಜಿ

Former India captain Mahendra Singh Dhoni gave a valuable piece of advice to Bhutan all rounder Mikyo Dorji san
Author
Bengaluru, First Published Jan 29, 2022, 11:11 PM IST

ನವದೆಹಲಿ (ಜ. 29): ಐಪಿಎಲ್ ಹರಾಜು (IPL Auction) ಕಾರ್ಯಕ್ರಮಕ್ಕೆ ತಮ್ಮ ಹೆಸರನ್ನು ನೋಂದಾಯಿಸಿದ ಮೊದಲ ಭೂತಾನ್ ಆಟಗಾರ ಎನಿಸಿಕೊಂಡ ಮಿಕ್ಯೋ ದೋರ್ಜಿಗೆ (Mikyo Dorji) ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Former India captain Mahendra Singh Dhoni ) ಅವರು ಅಮೂಲ್ಯವಾದ ಸಲಹೆ ನೀಡಿದ್ದಾರೆ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಂಎಸ್ ಧೋನಿ,  ಇಂದಿಗೂ ಇಂಡಿಯನ್ ಪ್ರೀಮಿಯರ್‌ ಲೀಗ್ ನಲ್ಲಿ(IPL) ಯುವ ಆಟಗಾರರೊಂದಿಗೆ ಚಾಟ್ ಮಾಡುವುದು ಹಾಗೂ ಅಮೂಲ್ಯವಾದ ಸಲಹೆಗಳನ್ನು ನೀಡುವುದನ್ನು ಕಾಣಬಹುದು.

ಐಪಿಎಲ್ ನಲ್ಲಿ ಆಡುವುದು ತಮ್ಮ ಜೀವಮಾನದ ಅತೀದೊಡ್ಡ ಕನಸು ಎಂದಿರುವ ದೋರ್ಜಿ, ಇನ್ಸ್ ಟಾಗ್ರಾಮ್ ನಲ್ಲಿ (Instagram) ತಮ್ಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲಿ ದೋರ್ಜಿ ಅವರ ಕ್ರಿಕೆಟ್ ಜೀವನದಲ್ಲಿ ಯಶಸ್ಸು ಕಾಣುವ ನಿಟ್ಟಿನಲ್ಲಿ ಸಹಾಯವಾಗಬಲ್ಲ ಅಮೂಲ್ಯವಾದ ಸಲಹೆಯನ್ನು ನೀಡಿದ್ದಾರೆ.

ನಿಮ್ಮ ಪ್ರಕ್ರಿಯೆಗಳು ಆದಷ್ಟು ಸರಳವಾಗಿರಲಿ. ಫಲಿತಾಂಶದ ಮೇಲಲ್ಲ, ಪ್ರಕ್ರಿಯೆಯ ಮೇಲೆ ಹೆಚ್ಚಿನ ಗಮನ ನೀಡಿ. ನಿಮ್ಮ ಪ್ರಕ್ರಿಯೆ ಸರಿಯಾಗಿ ಇದ್ದಲ್ಲಿ ಖಂಡಿತವಾಗಿಯೂ ನಿಮಗೆ ಬೇಕಾದಂಥ ಫಲಿತಾಂಶ ಪಡೆಯುತ್ತೀರಿ. ಇಡೀ ಪ್ರಕ್ರಿಯೆಯನ್ನು ಆನಂದಿಸುವ ಮನಸ್ಸಿರಬೇಕು. ದಿಗ್ಗಜ ಎಂಎಸ್ ಧೋನಿ ನನಗೆ ಈ ಸಲಹೆ ನೀಡಿದ ದಿನದಿಂದ, ಈ ಸಲಹೆ ಯಾವಾಗಲೂ ನನ್ನ ಮನಸ್ಸಿನಲ್ಲಿಯೇ ಕುಳಿತುಕೊಂಡಿದೆ' ಎಂದು ದೋರ್ಜಿ ತಮ್ಮ ಇನ್ಸ್ ಟಾಗ್ರಾಮ್ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. 22ರ ಹರೆಯದ ಅವರು ಭಾರತದ ದಿಗ್ಗಜ ನಾಯಕನೊಂದಿಗಿನ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
 


ಹಾಗುದ್ದರೂ, ಐಪಿಎಲ್ ಹರಾಜಿನ ಮುಂದಿನ ಸುತ್ತಿಗೆ ಶಾರ್ಟ್‌ಲಿಸ್ಟ್ ಆಗುವ ಸಾಧ್ಯತೆಗಳು ಬಹಳ ಕಡಿಮೆ ಎಂದು ದೋರ್ಜೆ ಕೂಡ ಒಪ್ಪಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಆಡುವುದು ನನ್ನ ಬಹುದೊಡ್ಡ ಕನಸುಗಳಲ್ಲಿ ಒಂದು. ಭೂತಾನ್ ದೇಶದಿಂದ ಒಬ್ಬ ಪ್ಲೇಯರ್ ಐಪಿಎಲ್ ಹರಾಜಿನ ಲಿಸ್ಟ್ ನಲ್ಲಿದ್ದಾನೆ ಎಂದು ಇಲ್ಲಿನ ಜನ ಗಮನಿಸಿದ್ದರು. ಅದರ ಬೆನ್ನಲ್ಲಿಯೇ ನನ್ನ ಸ್ನೇಹಿತರೆಲ್ಲಾ ನನಗೆ ಕರೆ ಮಾಡಿದ್ದರು. ಆದರೆ, ಅವರಿಗೆ ಇದು ಕೇವಲ ಆರಂಭಿಕ ಸುತ್ತು ಎನ್ನುವುದು ಗೊತ್ತಿರಲಿಲ್ಲ. ಇಲ್ಲಿಂದ ಹೆಸರುಗಳು ಶಾರ್ಟ್ ಲಿಸ್ಟ್ ಆಗುತ್ತವೆ.  ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಶಾರ್ಟ್ ಲಿಸ್ಟ್ ಆದ ಬಳಿಕ ಪ್ರಧಾನ ಲಿಸ್ಟ್ ನಲ್ಲಿ ನನ್ನ ಹೆಸರು ಇರುವುದು ಬಹುತೇಕ ಅನುಮಾನ. ಆದರೆ, ಭೂತಾನ್ (Bhutan)ಮಟ್ಟಿಗೆ ಐಪಿಎಲ್ ಹರಾಜಿಗೆ ನನ್ನ ಹೆಸರು ನೋಂದಣಿ ಆಗಿರುವುದೇ ದೊಡ್ಡ ವಿಚಾರ' ಎಂದು ದೋರ್ಜಿ ಹೇಳಿದ್ದಾರೆ.

Ranji Trophy: ರಣಜಿ ಟ್ರೋಫಿ ಆರಂಭದ ಕುರಿತಂತೆ ಸುಳಿವು ಕೊಟ್ಟ ಸೌರವ್ ಗಂಗೂಲಿ
ದೇಶದ ಹೊರಗಿನ ಫ್ರಾಂಚೈಸಿ ಆಧಾರಿತ ಕ್ರಿಕೆಟ್ ಲೀಗ್ ನಲ್ಲಿ ಆಡಿದ ಮೊದಲ ಭೂತಾನ್ ಪ್ಲೇಯರ್ ಎನ್ನುವ ಹೆಮ್ಮೆಯೂ ದೋರ್ಜಿ ಅವರದಾಗಿದೆ. ಎವರೆಸ್ಟ್ ಪ್ರೀಮಿಯರ್ ಲೀಗ್ ನಲ್ಲಿ (Everest Premier League) ದೋರ್ಜಿ ಲಲಿತ್ ಪುರ ಪ್ಯಾಟ್ರಿಯಾಟ್ಸ್ (Lalitpur Patriots) ತಂಡದ ಪರವಾಗಿ ಆಡಿದ್ದರು.

IPL Auction 2022: ಈ ಮೂವರು ವಿಂಡೀಸ್ ಸ್ಟಾರ್ ಆಟಗಾರರು ಅನ್‌ಸೋಲ್ಡ್‌ ಆಗಬಹುದು..!
ಈ ನಡುವೆ,  ಧೋನಿ ಇತ್ತೀಚೆಗೆ 2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಈ ಟೂರ್ನಿಯಲ್ಲಿ ಆತಿಥೇಯ ಭಾರತ ಸೆಮಿಫೈನಲ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಧೋನಿ ಸಿದ್ಧವಾಗುತ್ತಿದ್ದಾರೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 12 ಕೋಟಿ ರೂಪಾಯಿ ಮೊತ್ತಕ್ಕೆ ಎಂಎಸ್ ಧೋನಿಯನ್ನು ತಂಡದಲ್ಲಿ ಉಳಿಸಿಕೊಂಡಿದೆ.

Follow Us:
Download App:
  • android
  • ios