Asianet Suvarna News Asianet Suvarna News

ICC Test Rankings‌: ಟೀಂ ಇಂಡಿಯಾಗಿದೆ ವಿಶ್ವ ನಂ.1 ಸ್ಥಾನಕ್ಕೇರುವ ಅವಕಾಶ..!

* ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವ ಗುರಿ ಹೊಂದಿರುವ ಟೀಂ ಇಂಡಿಯಾ

* ಲಂಕಾ ಎದುರು ಟೆಸ್ಟ್ ಸರಣಿ ಕ್ಲೀನ್ ಸ್ವೀಪ್‌ ಮಾಡಿದರೆ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಲಿರುವ ಭಾರತ

*  ರೋಹಿತ್‌ ಶರ್ಮಾ ಪಡೆಗೆ ವಿಶ್ವ ನಂ.1 ತಂಡ ಆಗುವ ಅವಕಾಶವೂ ಇದೆ

ICC Test Team Rankings Team India has better Chance to grab Number 1 Position kvn
Author
Bengaluru, First Published Mar 3, 2022, 11:53 AM IST

ಮೊಹಾಲಿ(ಮಾ.03): ಶ್ರೀಲಂಕಾ ಎದುರು ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿ ಬೀಗುತ್ತಿರುವ ಟೀಂ ಇಂಡಿಯಾ(Team India), ಶುಕ್ರವಾರ(ಮಾ.4)ದಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಸರಣಿಯನ್ನು 2-0ಯಲ್ಲಿ ಗೆದ್ದರೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ (ICC Test Rankings) ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 2ನೇ ಸ್ಥಾನ ತಲುಪಲಿದೆ. ಇದೇ ವೇಳೆ ರೋಹಿತ್‌ ಶರ್ಮಾ (Rohit Sharma) ಪಡೆಗೆ ವಿಶ್ವ ನಂ.1 ತಂಡ ಆಗುವ ಅವಕಾಶವೂ ಇದೆ. 

ಮಾರ್ಚ್‌ 4ರಿಂದಲೇ ಪಾಕಿಸ್ತಾನ ಹಾಗೂ ಆಸ್ಪ್ರೇಲಿಯಾ (Pakistan vs Australia) ನಡುವೆ 3 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಪ್ರೇಲಿಯಾ, ಸರಣಿಯಲ್ಲಿ ಒಂದೇ ಒಂದು ಪಂದ್ಯ ಸೋತರೂ, ಅಗ್ರಸ್ಥಾನ ಕಳೆದುಕೊಳ್ಳಲಿದೆ. ಹೀಗಾಗಿ ಭಾರತ, ಲಂಕಾ ವಿರುದ್ಧ 2-0ಯಲ್ಲಿ ಗೆದ್ದು, ಆಸೀಸ್‌ ಒಂದು ಪಂದ್ಯ ಸೋತರೆ ಭಾರತ ವಿಶ್ವ ನಂ.1 ಆಗಲಿದೆ.

ಆಸೀಸ್‌-ಪಾಕ್‌ ಸರಣಿಗೆ ಬೆನೌ-ಖಾದಿರ್‌ ಹೆಸರು

ರಾವಲ್ಪಿಂಡಿ: ಶುಕ್ರವಾರದಿಂದ ಆರಂಭವಾಗಲಿರುವ ಪಾಕಿಸ್ತಾನ-ಆಸ್ಪ್ರೇಲಿಯಾ ನಡುವಿನ ಕ್ರಿಕೆಟ್‌ ಸರಣಿಗೆ ದಿಗ್ಗಜ ಸ್ಪಿನ್ನರ್‌ಗಳಾದ ಆಸೀಸ್‌ನ ರಿಚೀ ಬೆನೌ ಹಾಗೂ ಪಾಕ್‌ನ ಅಬ್ದುಲ್‌ ಖಾದಿರ್‌ ಹೆಸರಿಡಲಾಗಿದೆ. ಬೆನೌ-ಖಾದಿರ್‌ ಸರಣಿ ಎಂದು ನಾಮಕರಣ ಮಾಡಲಾಗಿರುವ ಟ್ರೋಫಿಯನ್ನು ಬುಧವಾರ ಪಾಕ್‌ ನಾಯಕ ಬಾಬರ್‌ ಆಜಂ ಹಾಗೂ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಅನಾವರಣಗೊಳಿಸಿದರು. 

IPL 2022: ಮಾರ್ಚ್‌ 14ರಿಂದ ಮುಂಬೈನಲ್ಲಿ ಐಪಿಎಲ್‌ ತಂಡಗಳಿಂದ ಅಭ್ಯಾಸ ಆರಂಭ..!

ಪಾಕ್‌ ವಿರುದ್ಧ ಆಸ್ಪ್ರೇಲಿಯಾ 1956ರಲ್ಲಿ ಮೊದಲ ಟೆಸ್ಟ್‌ ಆಡಿತ್ತು. ಆಗ ಆಸೀಸ್‌ ತಂಡದಲ್ಲಿ ಬೆನೌ ಇದ್ದರು. ಅವರು ಒಟ್ಟು 63 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 248 ವಿಕೆಟ್‌ ಕಿತ್ತಿದ್ದಾರೆ. ಆಸೀಸ್‌ ವಿರುದ್ಧ 11 ಟೆಸ್ಟ್‌ ಆಡಿರುವ ಖಾದಿರ್‌ ಒಟ್ಟಾರೆ 67 ಟೆಸ್ಟ್‌ಗಳಲ್ಲಿ ಪಾಕ್‌ ತಂಡವನ್ನು ಪ್ರತಿನಿಧಿಸಿದ್ದಾರೆ.

ಟಿ20 ರ‍್ಯಾಂಕಿಂಗ್‌: ಅಗ್ರ 10ರಿಂದ ಹೊರಬಿದ್ದ ಕೊಹ್ಲಿ

ದುಬೈ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ವರ್ಷದ ಬಳಿಕ ಟಿ20 ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ ಅವರು 5 ಸ್ಥಾನ ಕುಸಿತ ಕಂಡು 15ನೇ ಸ್ಥಾನ ಪಡೆದಿದ್ದಾರೆ. 

ರೋಹಿತ್‌ ಶರ್ಮಾ 12ನೇ ಸ್ಥಾನಕ್ಕೆ ಕುಸಿದಿದ್ದು, 10ನೇ ಸ್ಥಾನದಲ್ಲಿರುವ ಕೆ.ಎಲ್‌.ರಾಹುಲ್‌ (KL Rahul) ಅಗ್ರ 10ರಲ್ಲಿರುವ ಏಕೈಕ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಲಂಕಾ ಸರಣಿಯಲ್ಲಿ ಸತತ 3 ಅರ್ಧಶತಕ ಸಿಡಿಸಿದ್ದ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ (Shreyas Iyer) ಬರೋಬ್ಬರಿ 27 ಸ್ಥಾನ ಮೇಲಕ್ಕೇರಿ 18ನೇ ಸ್ಥಾನ ತಲುಪಿದ್ದಾರೆ. ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ 3 ಸ್ಥಾನ ಮೇಲಕ್ಕೇರಿ 17ನೇ ಸ್ಥಾನ ಪಡೆದಿದ್ದಾರೆ.

ಮಹಿಳಾ ಏಕದಿನ ರ‍್ಯಾಂಕಿಂಗ್‌‌: 20ನೇ ಸ್ಥಾನಕ್ಕೇರಿದ ಹರ್ಮನ್‌ಪ್ರೀತ್ ಕೌರ್‌

ದುಬೈ: ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ತಾರಾ ಬ್ಯಾಟರ್‌ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) 20ನೇ ಸ್ಥಾನಕ್ಕೆ ಏರಿದ್ದಾರೆ. ನೂತನವಾಗಿ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಅವರು 3 ಸ್ಥಾನ ಪ್ರಗತಿ ಸಾಧಿಸಿದ್ದಾರೆ. 

ನಾಯಕಿ ಮಿಥಾಲಿ ರಾಜ್‌ (Mithali Raj) 2ನೇ ಹಾಗೂ ಸ್ಮೃತಿ ಮಂಧಾನ 8ನೇ ಸ್ಥಾನ ಕಾಯ್ದಕೊಂಡಿದ್ದಾರೆ. ದೀಪ್ತಿ ಶರ್ಮಾ ಆಲ್ರೌಂಡರ್‌ ಪಟ್ಟಿಯಲ್ಲಿ 1 ಸ್ಥಾನ ಕುಸಿದು 5ನೇ ಸ್ಥಾನದಲ್ಲಿದ್ದು, ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ 1 ಸ್ಥಾನ ಮೇಲೇರಿ 12 ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ 4ನೇ ಸ್ಥಾನದಲ್ಲಿದ್ದು, ಅಗ್ರ 10ರಲ್ಲಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.

Follow Us:
Download App:
  • android
  • ios