Asianet Suvarna News Asianet Suvarna News

ಟಿ20 ರ‍್ಯಾಂಕಿಂಗ್‌: ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿ ಭಾರತೀಯರಿಗಿಲ್ಲ ಸ್ಥಾನ..!

ICC ಬೌಲರ್‌ಗಳ ಟಿ20 ಶ್ರೇಯಾಂಕದಲ್ಲಿ ಆಫ್ಘಾನಿಸ್ತಾನ ತಂಡದ ಸ್ಟಾರ್ ಬೌಲರ್‌ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಮೊದಲೆರಡು ಸ್ಥಾನ ಪಡೆದಿದ್ದಾರೆ. ಆದರೆ ಭಾರತದ ಯಾವೊಬ್ಬ ಬೌಲರ್‌ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ICC T20I Rankings Mujeeb Ur Rahman Jumps Second Place
Author
Dubai - United Arab Emirates, First Published Nov 18, 2019, 4:46 PM IST

ದುಬೈ(ನ.18): ವೆಸ್ಟ್ ಇಂಡೀಸ್-ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ ಪ್ರಕಟಿಸಿದ್ದು, ಆಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಸ್ಥಾನ ಉಳಿಸಿಕೊಂಡರೆ, ಮತ್ತೋರ್ವ ಸ್ಪಿನ್ನರ್ ಮುಜೀಬ್ ಉರ್-ರೆಹಮಾನ್ 6 ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೇರಿದ್ದಾರೆ. ಆದರೆ ಭಾರತದ ಯಾವೊಬ್ಬ ಬೌಲರ್ ಕೂಡಾ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ.

ಹೌದು, ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ 13ನೇ ಸ್ಥಾನ ಪಡೆದಿದ್ದು, ಟೀಂ ಇಂಡಿಯಾ ಪರ ಗರಿಷ್ಠ ಶ್ರೇಯಾಂಕ ಹೊಂದಿದ ಬೌಲರ್ ಎನಿಸಿದ್ದಾರೆ. ಇನ್ನುಳಿದಂತೆ ಮತ್ತೆ ಯಾವ ಭಾರತೀಯ ಬೌಲರ್ ಟಾಪ್ 10 ಪಟ್ಟಿಯ ಸಮೀಪ ಬಂದಿಲ್ಲ.

ಟೆಸ್ಟ್ ರ‍್ಯಾಂಕಿಂಗ್‌: ಟಾಪ್‌ 10ಗೆ ಲಗ್ಗೆಯಿಟ್ಟ ಶಮಿ..!

ರಶೀದ್ ಖಾನ್, ಮುಜೀಬ್ ಉರ್-ರೆಹಮಾನ್, ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್, ಪಾಕ್ ಸ್ಪಿನ್ನರ್ ಇಮಾದ್ ವಾಸೀಂ, ಆಸೀಸ್’ನ ಆ್ಯಡಂ ಜಂಪಾ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಗ್ರ ಐವರು ಬೌಲರ್’ಗಳು ಸ್ಪಿನ್ನರ್’ಗಳು ಎನ್ನುವುದು ವಿಶೇಷ. ಇನ್ನು ಆ್ಯಂಡಿಲೆ ಫೆಹ್ಲುಕ್ವಾಯೋ, ಆದಿಲ್ ರಶೀದ್ ಹಾಗೂ ಶಾದಾಬ್ ಖಾನ್ ಟಾಪ್ 8 ಸ್ಥಾನದಲ್ಲಿದ್ದು, ರಶೀದ್ ಹಾಗೂ ಮುಜೀಬ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್’ಗಳು ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ. ಆಸ್ಟನ್ ಅಗರ್ ಹಾಗೂ ಕ್ರಿಸ್ ಜೋರ್ಡನ್ ಕ್ರಮವಾಗಿ 9 ಹಾಗೂ 10ನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಹೊಡಿಬಡಿಯಾದ ಕ್ರಿಕೆಟ್’ನಲ್ಲಿ ಸ್ಪಿನ್ನರ್’ಗಳೇ ಮೇಲುಗೈ ಸಾಧಿಸಿದ್ದು, ಫೆಹ್ಲುಕ್ವಾಯೋ ಹಾಗೂ ಕ್ರಿಸ್ ಜೋರ್ಡನ್ ಹೊರತು ಪಡಿಸಿ ಉಳಿದೆಲ್ಲಾ ಬೌಲರ್’ಗಳು ಸ್ಪಿನ್ನರ್’ಗಳಾಗಿದ್ದಾರೆ. ಇನ್ನುಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಬಾಬರ್ ಅಜಂ ಮೊದಲ ಸ್ಥಾನದಲ್ಲಿದ್ದರೆ, ಆಲ್ರೌಂಡರ್ ವಿಭಾಗದಲ್ಲಿ ಮೊಹಮ್ಮದ್ ನಬೀ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Follow Us:
Download App:
  • android
  • ios