ಬ್ರಿಸ್ಬೇನ್ ಮೈದಾನದಲ್ಲಿಂದು ಆಫ್ಘಾನಿಸ್ತಾನ-ಶ್ರೀಲಂಕಾ ಫೈಟ್ಸೆಮೀಸ್‌ ದೃಷ್ಠಿಯಿಂದ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯಈ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆ

ಬ್ರಿಸ್ಬೇನ್‌(ನ.01): ನೀರಸ ಪ್ರದರ್ಶನದೊಂದಿಗೆ ಐಸಿಸಿ ಟಿ20 ವಿಶ್ವಕಪ್‌ನ ಗುಂಪು 1ರಲ್ಲಿ ಕ್ರಮವಾಗಿ ಕೊನೆ 2 ಸ್ಥಾನಗಳನ್ನು ಹಂಚಿಕೊಂಡಿರುವ ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಸೋತವರು ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿಯಲಿದ್ದಾರೆ. ಹೀಗಾಗಿ ಇಂದು ನಡೆಯುವ ಪಂದ್ಯವು ಉಭಯ ತಂಡಗಳ ಪಾಲಿಗೆ ವರ್ಚುವಲ್ ನಾಕೌಟ್ ಪಂದ್ಯ ಎನಿಸಿಕೊಂಡಿದೆ.

ಇಂಗ್ಲೆಂಡ್‌ ವಿರುದ್ಧದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಆಫ್ಘನ್‌ಗೆ ಬಳಿಕ ಮಳೆರಾಯ ತೀವ್ರವಾಗಿ ಕಾಡಿದ್ದು, ನ್ಯೂಜಿಲೆಂಡ್‌ ಹಾಗೂ ಐರ್ಲೆಂಡ್‌ ವಿರುದ್ಧದ ಪಂದ್ಯ ರದ್ದಾಗಿದ್ದರಿಂದ ತಂಡ ಸದ್ಯ 2 ಅಂಕಗಳನ್ನಷ್ಟೇ ಹೊಂದಿದೆ. ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಎದುರು ಗೆಲುವು ಸಾಧಿಸಬೇಕಿದ್ದರೇ ಆಫ್ಘಾನಿಸ್ತಾನ ತಂಡವು ಸಂಘಟಿತ ಪ್ರದರ್ಶನ ತೋರಬೇಕಿದೆ.

T20 World Cup ಐರ್ಲೆಂಡ್ ಬಗ್ಗುಬಡಿದು ಸೆಮೀಸ್ ಕನಸು ಜೀವಂತವಾಗಿಟ್ಟುಕೊಂಡ ಆಸೀಸ್

ಮತ್ತೊಂದೆಡೆ ಅರ್ಹತಾ ಸುತ್ತಿನ ಮೂಲಕ ಸೂಪರ್‌ 12ಕ್ಕೇರಿದ್ದ ಲಂಕಾ ಐರ್ಲೆಂಡ್‌ ವಿರುದ್ಧ ಗೆದ್ದರೂ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ವಿರುದ್ಧ ಸೋತಿದೆ. ಕೇವಲ 2 ಅಂಕ ಹೊಂದಿರುವ ಲಂಕಾಕ್ಕೂ ಈ ಪಂದ್ಯದಲ್ಲಿ ಗೆದ್ದರಷ್ಟೇ ಸೆಮೀಸ್‌ ಆಸೆ ಜೀವಂತವಾಗಿರಲಿದೆ. ಪಂದ್ಯಕ್ಕೆ ಮಳೆ ಭೀತಿ ಇದ್ದು, ರದ್ದಾದರೆ ಆಫ್ಘನ್‌ಗೆ ಸತತ 3ನೇ ಪಂದ್ಯ ನಷ್ಟವಾದಂತಾಗಲಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ:

ಆಫ್ಘಾನಿಸ್ತಾನ: ಗುಲ್ಬದ್ದೀನ್ ನೈಬ್, ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹಮ್ಮದ್, ಫಜಲ್‌ಹಕ್ ಪಾರೂಕಿ.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ. ದಶುನ್ ಶನಕ, ವನಿಂದು ಹಸರಂಗ, ಚಮಿಕಾ ಕರುಣರತ್ನೆ ಮಹೀಶ್ ತೀಕ್ಷಣ, ಕುಸನ್ ರಜಿತಾ, ಲಹಿರು ಕುಮಾರ.

ಪಂದ್ಯ: ಬೆಳಗ್ಗೆ 9.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌