Asianet Suvarna News Asianet Suvarna News

T20 World Cup: ಫಿಟ್ನೆಸ್ ಸೀಕ್ರೇಟ್ ಬಿಚ್ಚಿಟ್ಟ 39ರ ಚಿರಯುವಕ ಶೋಯೆಬ್ ಮಲಿಕ್..!

* 39ನೇ ವಯಸ್ಸಿನಲ್ಲೂ ಚಿರಯುವಕನಂತೆ ಅಬ್ಬರಿಸುತ್ತಿರುವ ಶೋಯೆಬ್ ಮಲಿಕ್

* ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ದ ದಾಖಲೆಯ ಅರ್ಧಶತಕ ಚಚ್ಚಿದ ಮಲಿಕ್

* ಸ್ಕಾಟ್ಲೆಂಡ್ ಎದುರು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಶೋಯೆಬ್ ಮಲಿಕ್

ICC T20 World Cup Pakistan Cricketer Shoaib Malik reveals secret behind his Fitness kvn
Author
Bengaluru, First Published Nov 10, 2021, 1:43 PM IST
  • Facebook
  • Twitter
  • Whatsapp

ದುಬೈ(ನ.10): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಅಮೋಘ ಪ್ರದರ್ಶನ ತೋರುವ ಮೂಲಕ ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಸೂಪರ್ 12 ಹಂತದಲ್ಲಿ ಪಾಕಿಸ್ತಾನ ಪಾಲಿನ ಕೊನೆಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ 39 ವರ್ಷದ ಶೋಯೆಬ್ ಮಲಿಕ್ (Shoaib Malik) ಕೇವಲ 18 ಎಸೆತಗಳಲ್ಲಿ ಅರ್ಧಶತಕ ಚಚ್ಚುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, 39ರ ಹರೆಯದ ಶೋಯೆಬ್ ಮಲಿಕ್ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೆ.ಎಲ್. ರಾಹುಲ್ (KL Rahul) ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ಮೂಲಕ ತಾವಿನ್ನು ಬಲಿಷ್ಠ ಬ್ಯಾಟರ್‌ ಎನ್ನುವುದನ್ನು ಜಗತ್ತಿನ ಮುಂದೆ ಸಾರಿ ಹೇಳಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಫಿಟ್ನೆಸ್‌ ಗುಟ್ಟನ್ನು ಸಾನಿಯಾ ಮಿರ್ಜಾ (Sania Mirza) ಪತಿ ಮಲಿಕ್‌ ಬಿಚ್ಚಿಟ್ಟಿದ್ದಾರೆ.

ಶೋಯೆಬ್ ಮಲಿಕ್ 1999ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಲಿಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ, ಈಗಿನ ಕೆಲವು ಪಾಕ್‌ ಆಟಗಾರರು ಇನ್ನು ಹುಟ್ಟಿಯೇ ಇರಲಿಲ್ಲ. ಆದರೆ ಈಗಲೂ ಸಹ ಯುವಕರು ನಾಚುವಂತೆ ಬ್ಯಾಟ್‌ ಬೀಸುವ ಮೂಲಕ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಕ್ಷಮತೆ ಶೋಯೆಬ್ ಮಲಿಕ್‌ಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ದ ಮಲಿಕ್‌ ಕೇವಲ 18 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು. ಈ ಮೂಲಕ ಪಾಕ್ 72 ರನ್‌ಗಳ ಭರ್ಜರಿ ಜಯ ಸಾಧಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟಿದೆ.

T20 World Cup: Ind vs Pak ದಾಖಲೆಯ ಸಂಖ್ಯೆಯಲ್ಲಿ ಇಂಡೋ-ಪಾಕ್ ಟಿ20 ಪಂದ್ಯ ವೀಕ್ಷಣೆ..!

ಟೀಂ ಇಂಡಿಯಾ (Team India) ಆರಂಭಿಕ ಬ್ಯಾಟರ್‌ ಕೆ.ಎಲ್. ರಾಹುಲ್ ಕೂಡಾ ಸ್ಕಾಟ್ಲೆಂಡ್ ವಿರುದ್ದವೇ 18 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ್ದರು. ಇದೀಗ ಮಲಿಕ್ ಕೂಡಾ 18 ಎಸೆತಗಳಲ್ಲಿ ಅರ್ಧಶತಕ ಚಚ್ಚುವ ಮೂಲಕ 2021ನೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್‌ ಎನ್ನುವ ದಾಖಲೆ ಬರೆದಿದ್ದಾರೆ.

ಇದೀಗ ತಮ್ಮ ಫಿಟ್ನೆಸ್ ಕುರಿತಂತೆ ಶೋಯೆಬ್ ಮಲಿಕ್ ಮನಬಿಚ್ಚಿ ಮಾತನಾಡಿದ್ದಾರೆ. ನಿಜ ಹೇಳಬೇಕೆಂದರೆ, ಕನ್ನಡಿ ಮುಂದೆ ನಿಂತಾಗ ನಾನು ಯಾವಾಗಲೂ ಫಿಟ್ ಆಗಿ ಕಾಣಲು ಇಷ್ಟಪಡುತ್ತೇನೆ. ಅದಕ್ಕಿಂತ ಹೆಚ್ಚಾಗಿ ನಾನೀಗಲೂ ಕ್ರಿಕೆಟ್ ಆಡುವುದನ್ನು ಎಂಜಾಯ್ ಮಾಡುತ್ತೇನೆ. ಕ್ರಿಕೆಟ್ ಅಡುತ್ತಿರುವುದರಿಂದಲೇ ನಾನಿನ್ನು ಫಿಟ್ ಆಗಿದ್ದೇನೆ ಎಂದು ಮಲಿಕ್ ಹೇಳಿದ್ದಾರೆ.

T20 World Cup 2021: ಸೋಲಿಲ್ಲದ ಸರದಾರನಾಗಿ ಸೆಮೀಸ್ ಪ್ರವೇಶಿಸಿದ ಪಾಕಿಸ್ತಾನ!

ನೀವೆಲ್ಲರೂ ಫಿಟ್ ಆಗಿರಬೇಕೆಂದಿದ್ದರೇ, ಪ್ರತಿದಿನ ಅಭ್ಯಾಸ/ವ್ಯಾಯಾಮ ನಡೆಸಿ. ನಾನೂ ಕೂಡಾ ಪ್ರತಿನಿತ್ಯ ಅದನ್ನೇ ಮಾಡುತ್ತಿದ್ದೇನೆ. ಇನ್ನೂ ನಾನು ಎರಡು ವರ್ಷಗಳ ಕಾಲ ಕ್ರಿಕೆಟ್‌ ಆಡುತ್ತೇನೆ ಎನ್ನುವ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಸದ್ಯ ಈಗಿನ ಟೂರ್ನಿಯತ್ತ ಹೆಚ್ಚು ಗಮನ ಹರಿಸಿದ್ದೇನೆ ಎಂದು ಮಲಿಕ್ ತಮ್ಮ ಫಿಟ್ನೆಸ್ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ. 

ಶೋಯೆಬ್ ಮಲಿಕ್ ಈ ಮೊದಲು ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ತಂಡ ಪ್ರಕಟವಾದಾಗ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಸೋಯೆಬ್ ಮಕ್ಸೂದ್‌ ಬೆನ್ನು ನೋವಿನಿಂದಾಗಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿ ಅನುಭವಿ ಆಟಗಾರ ಶೋಯೆಬ್ ಮಲಿಕ್‌ಗೆ ಮಣೆ ಹಾಕಿತು.

Follow Us:
Download App:
  • android
  • ios