Asianet Suvarna News Asianet Suvarna News

T20 World Cup: Eng vs SL ಸೆಮೀಸ್‌ಗೇರುವ ಹುಮ್ಮಸ್ಸಲ್ಲಿ ಇಂಗ್ಲೆಂಡ್‌

* ಶಾರ್ಜಾದಲ್ಲಿಂದು ಇಂಗ್ಲೆಂಡ್‌ಗೆ ಲಂಕಾ ಸವಾಲು

* ಆಡಿದ 3 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್

* ಮಾಡು ಇಲ್ಲವೇ ಮಡಿ ಮಡಿ ಪಂದ್ಯಕ್ಕೆ ಸಜ್ಜಾದ ಶ್ರೀಲಂಕಾ

ICC T20 World Cup England take on Sri Lanka England eyes on Semi Final in Sharjah kvn
Author
Bengaluru, First Published Nov 1, 2021, 1:56 PM IST

ಶಾರ್ಜಾ(ನ.01): ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಚಾಂಪಿಯನ್‌ ಆಗುವ ಫೇವರಿಟ್‌ ಎನಿಸಿಕೊಂಡಿರುವ ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಸೋಮವಾರ ಶ್ರೀಲಂಕಾ (Sri Lanka Cricket) ಸವಾಲನ್ನು ಎದುರಿಸಲಿದೆ. ಸೂಪರ್‌-12ರ ಹಂತದಲ್ಲಿ ಆಡಿರುವ ಎಲ್ಲಾ 3 ಪಂದ್ಯಗಳಲ್ಲಿ ಗೆದ್ದಿರುವ ಇಯಾನ್‌ ಮೊರ್ಗನ್‌ (Eoin Morgan) ಪಡೆ ಈ ಪಂದ್ಯದಲ್ಲೂ ಗೆದ್ದು ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.

ಆಡಿದ 3 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಕಂಡಿರುವ ಲಂಕಾ ಸೆಮೀಸ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಗುಂಪು 1ರಲ್ಲಿ ಇಂಗ್ಲೆಂಡ್‌ 6 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾ 2 ಅಂಕ ಪಡೆದು 4ನೇ ಸ್ಥಾನದಲ್ಲಿದೆ. ಶ್ರೀಲಂಕಾ ತಂಡವು ಬಾಂಗ್ಲಾದೇಶ ವಿರುದ್ದ 5 ವಿಕೆಟ್‌ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ದ 7 ವಿಕೆಟ್‌ಗಳ ಅಂತರದ ಸೋಲು ಕಂಡಿತ್ತು. ಇನ್ನು ದಕ್ಷಿಣ ಆಫ್ರಿಕಾ ವಿರುದ್ದ ಕೂಡಾ 4 ವಿಕೆಟ್‌ಗಳ ಅಂತರದ ಸೋಲು ಕಂಡು ಹ್ಯಾಟ್ರಿಕ್ ಸೋಲಿನ ಭೀತಿಗೆ ಸಿಲುಕಿದೆ.

T20 World Cup: ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಸೋಲಿಗೆ ಕಾರಣವೇನು..?

ಎದುರಾಳಿ ಬಲಾಬಲವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ, ವ್ಯವಸ್ಥಿತವಾಗಿ ರಣತಂತ್ರ ಹೂಡುತ್ತಿರುವ ಇಂಗ್ಲೆಂಡ್‌ ಕ್ರಿಕೆಟ್ ತಂಡ (Sri Lanka Cricket) ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸುತ್ತಿದೆ. ಆಸೀಸ್‌ ನಾಯಕ ಆ್ಯರೋನ್‌ ಫಿಂಚ್‌ (Aaron Finch) ಲೆಗ್‌ ಸ್ಪಿನ್ನ​ರ್ಸ್‌ ವಿರುದ್ಧ ಪರದಾಡಲಿದ್ದಾರೆ ಎನ್ನುವ ಉದ್ದೇಶದಿಂದ ಶನಿವಾರ ಮೋಯಿನ್‌ ಅಲಿ (Moeen Ali) ಬದಲಿಗೆ ಆದಿಲ್‌ ರಶೀದ್‌ (Adil Rashid) ಬೌಲಿಂಗ್‌ ಆರಂಭಿಸಿದ್ದರು. ಇದೇ ರೀತಿ ಬಹಳ ಲೆಕ್ಕಾಚಾರದೊಂದಿಗೆ ಇಂಗ್ಲೆಂಡ್‌ ತನ್ನ ಎದುರಾಳಿಗಳನ್ನು ಕಟ್ಟಿಹಾಕುತ್ತಿದೆ. ಈ ಪಂದ್ಯದಲ್ಲಿ ಗೆಲ್ಲಬೇಕು ಎಂದರೆ ಶ್ರೀಲಂಕಾ ತನ್ನ ಶಕ್ತಿಮೀರಿ ಪ್ರಯತ್ನಿಸಬೇಕಿದೆ.

ದಕ್ಷಿಣ ಆಫ್ರಿಕಾ (South Africa Cricket) ವಿರುದ್ಧ ಕೊನೆ ಓವರಲ್ಲಿ ಸೋತ ಶ್ರೀಲಂಕಾ, 3 ಪಂದ್ಯಗಳಲ್ಲಿ 2ನೇ ಸೋಲು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತು. ತಂಡ ಈ ಪಂದ್ಯದಲ್ಲಿ ಸೋತರೆ ಸೆಮೀಸ್‌ ಆಸೆ ಬಹುತೇಕ ಭಗ್ನಗೊಳ್ಳಲಿದೆ. ಮೂರೂ ಪಂದ್ಯಗಳಲ್ಲಿ ಲಂಕಾ ಸಾಂಘಿಕ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ.

Kannada Rajyotsava| ರೋಹನ್ ಬೋಪಣ್ಣ ಸೇರಿ ನಾಲ್ವರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಟಿ20 ಕ್ರಿಕೆಟ್‌ನಲ್ಲಿ (T20 Cricket) ಇದುವರೆಗೂ ಉಭಯ ತಂಡಗಳು ಒಟ್ಟು 12 ಮುಖಾಮುಖಿಯಾಗಿದ್ದು, ಈ ಪೈಕಿ ಇಂಗ್ಲೆಂಡ್ ಕೊಂಚ ಮೇಲುಗೈ ಸಾಧಿಸಿದೆ. ಈ 12 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇನ್ನು ಶ್ರೀಲಂಕಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 

ಸಂಭವನೀಯ ಆಟಗಾರರ ಪಟ್ಟಿ

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಡೇವಿಡ್ ಮಲಾನ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮೊರ್ಗನ್‌(ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಮೋಯಿನ್ ಅಲಿ‌, ಕ್ರಿಸ್‌ ವೋಕ್ಸ್‌, ಕ್ರಿಸ್‌ ಜೊರ್ಡನ್‌, ಆದಿಲ್‌ ರಶೀದ್‌, ಟೈಮಲ್‌ ಮಿಲ್ಸ್‌

ಶ್ರೀಲಂಕಾ: ಪತುಮ ನಿಸ್ಸಂಕಾ, ಕುಸಾಲ್‌ ಪೆರೆರಾ, ಚರಿತ್ ಅಸಲಂಕ, ಆವಿಷ್ಕಾ ರಾಜಪಕ್ಸೆ, ಆವಿಷ್ಕಾ ಫೆರ್ನಾಂಡೊ, ವನಿಂದು ಹಸರಂಗ, ದಸುನ್‌ ಶನಕ(ನಾಯಕ), ಚಮಿಕ ಕರುಣಾರತ್ನೆ, ದುಸ್ಮಂತ ಚಮೀರ, ಮಹೀಶ್ ತೀಕ್ಷಣ, ಲಹಿರು ಕುಮಾರ

ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌


 

Follow Us:
Download App:
  • android
  • ios