Asianet Suvarna News Asianet Suvarna News

T20 World Cup: ನಮೀಬಿಯಾ ಎದುರ ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ

* ಅಬುಧಾಬಿಯಲ್ಲಿಂದು ಆಫ್ಘಾನಿಸ್ತಾನಕ್ಕೆ ನಮೀಬಿಯಾ ಸವಾಲು

* ಸೆಮೀಸ್‌ ಪ್ರವೇಶಿಸುವ ದೃಷ್ಟಿಯಲ್ಲಿ ಉಭಯ ತಂಡಗಳ ಪಾಲಿಗೆ ಮಹತ್ವದ ಪಂದ್ಯ

* ಸ್ಕಾಟ್ಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿರುವ ನಮೀಬಿಯಾ

ICC T20 World Cup Afghanistan Won toss and Elected to Bat First Against Namibia in Abu Dhabi kvn
Author
Abu Dhabi - United Arab Emirates, First Published Oct 31, 2021, 3:09 PM IST

ಅಬುಧಾಬಿ(ಅ.31): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಆಫ್ಘಾನಿಸ್ತಾನ ಹಾಗೂ ನಮೀಬಿಯಾ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆಪ್ಘಾನಿಸ್ತಾನ ಕ್ರಿಕೆಟ್ ತಂಡವು (Afghanistan Cricket Team) ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಈ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯವನ್ನು ವಹಿಸಿದೆ. ಆಪ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮುಜೀಬ್‌ ಉರ್ ರೆಹಮಾನ್ (Mujeeb Ur Rahman) ಬದಲಿಗೆ ಹಮೀದ್ ಹಸನ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ನಮೀಬಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಈಗಾಗಲೇ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ನಮೀಬಿಯಾ ತಂಡವು (Namibia Cricket Team), ಆಫ್ಘಾನಿಸ್ತಾನಕ್ಕೆ ಶಾಕ್ ನೀಡುವ ಮೂಲಕ ತನ್ನ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ಇನ್ನೊಂದೆಡೆ ಪಾಕಿಸ್ತಾನ ವಿರುದ್ದ ರೋಚಕ ಸೋಲು ಅನುಭವಿಸಿರುವ ಮೊಹಮ್ಮದ್ ನಬಿ ಪಡೆ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 

T20 World Cup: ಇಂದು ಅಫ್ಘಾನಿಸ್ತಾನ, ನಮೀಬಿಯಾ ಕದನ!

ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ಸೂಪರ್ 12 ಹಂತದಲ್ಲಿ ಎರಡು ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಗ್ರೂಪ್ 2ನಲ್ಲಿ ಸೆಮೀಸ್‌ ಕನಸು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೆಬೇಕಾದ ಒತ್ತಡಕ್ಕೆ ಸಿಲುಕಿದೆ. ಸ್ಕಾಟ್ಲೆಂಡ್ ವಿರುದ್ದ 130 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದ ಆಫ್ಘಾನ್‌, ಪಾಕಿಸ್ತಾನ ವಿರುದ್ದ ರೋಚಕ ಸೋಲು ಕಂಡಿತ್ತು.

ಆಫ್ಘಾನಿಸ್ತಾನ ಪರ ಕೊನೆಯ ಪಂದ್ಯವನ್ನಾಡುತ್ತಿರುವ ಅಸ್ಗರ್‌ ಅಫ್ಘಾನ್‌: ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಜಿ ಅಸ್ಗರ್ ಅಫ್ಘಾನ್ (Asghar Afghan) ನಮೀಬಿಯಾ ವಿರುದ್ದದ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ವಿದಾಯ ಘೋಷಿಸಿದ್ದಾರೆ. ಅಸ್ಗರ್ ಆಫ್ಘಾನಿಸ್ತಾನ 6 ಟೆಸ್ಟ್‌, 114 ಏಕದಿನ ಹಾಗೂ 75 ಟಿ20 ಪಂದ್ಯಗಳನ್ನಾಡಿದ್ದರು. ಮೂರು ಮಾದರಿಯಲ್ಲಿ ಅಸ್ಗರ್ 4,215 ರನ್‌ ಬಾರಿಸಿದ್ದಾರೆ. ಇನ್ನು 115 ಪಂದ್ಯಗಳಲ್ಲಿ ನಾಯಕನಾಗಿ ಆಫ್ಘಾನಿಸ್ತಾನ ತಂಡವನ್ನು ಮುನ್ನಡೆಸಿದ್ದರು.

IPL Auction: BCCI ನಿಂದ ಐಪಿಎಲ್ ಹರಾಜಿನ ಅಧಿಕೃತ ರೂಲ್ಸ್‌ ಪ್ರಕಟ..!

2018ರಲ್ಲಿ ಟೀಂ ಇಂಡಿಯಾ (Team India) ಎದುರು ಆಫ್ಘಾನಿಸ್ತಾನ ತಂಡವು ಮೊದಲ ಟೆಸ್ಟ್‌ ಪಂದ್ಯವನ್ನಾಡಿದಾಗ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 59 ಪಂದ್ಯಗಳನ್ನು ಮುನ್ನಡೆಸಿದ್ದರು. ಇದರಲ್ಲಿ ಆಫ್ಘಾನ್‌ 34 ಪಂದ್ಯಗಳಲ್ಲಿ ಗೆಲುವು 21 ಸೋಲು ಕಂಡಿದೆ. ಇನ್ನು 52 ಟಿ20 ಪಂದ್ಯಗಳಲ್ಲಿ 42 ಪಂದ್ಯಗಳಲ್ಲಿ ಆಫ್ಘಾನ್‌ ಗೆಲುವಿನ ನಗೆ ಬೀರಿದೆ.

ತಂಡಗಳು ಹೀಗಿವೆ ನೋಡಿ

ಆಫ್ಘಾನಿಸ್ತಾನ ಕ್ರಿಕೆಟ್ ತಂಡ:
ಹಜರತ್ತುಲ್ಲಾ ಝಝೈ, ಮೊಹಮ್ಮದ್ ಶೆಹಜಾದ್ (ವಿಕೆಟ್ ಕೀಪರ್), ರೆಹಮತುಲ್ಲಾ ಗುರ್ಬಾಜ್, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ (ನಾಯಕ), ಅಸ್ಗರ್ ಅಫ್ಘಾನ್‌, ಗುಲ್ಬದ್ದೀನ್ ನೈಬ್, ರಶೀದ್ ಖಾನ್, ಕರೀಮ್ ಜನ್ನತ್-, ನವೀನ್ ಉಲ್ ಹಕ್, ಹಮೀದ್ ಹಸನ್.
 
ನಮೀಬಿಯಾ ಕ್ರಿಕೆಟ್ ತಂಡ 
ಕ್ರೆಗ್ ವಿಲಿಯಮ್ಸ್‌, ಜೇನ್ ಗ್ರೀನ್‌ (ವಿಕೆಟ್ ಕೀಪರ್), ಗೆಹಾರ್ಡ್‌ ಎರಾಮಸ್ (ನಾಯಕ), ಡೇವಿಡ್ ವೀಸಾ, ಮಿಚೆಲ್‌ ವ್ಯಾನ್ ಲಿಂಗನ್, ಜೆಜೆ ಸ್ಮಿತ್, ಜೇನ್‌ ಪ್ರಿಲಿಂಕ್, ಜಾನ್ ನಿಕೋಲ್ ಈಟನ್, ರುಬೆನ್‌ ಟ್ರಂಪ್ಲೆಮನ್, ಬ್ರೆನಾರ್ಡ್ ಸ್ಕಾಲೆಟ್ಜ್.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌


 

Follow Us:
Download App:
  • android
  • ios