Asianet Suvarna News Asianet Suvarna News

T20 World Cup: ಇಂದು ಭಾರತ-ನ್ಯೂಜಿಲೆಂಡ್‌ ಅಭ್ಯಾಸ ಪಂದ್ಯ

ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಕಿವೀಸ್ ಸವಾಲು
ಮೊದಲ ಅಭ್ಯಾಸ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದ ಭಾರತ
ಫಾರ್ಮ್‌ ಮರಳಲು ಹಾತೊರೆಯುತ್ತಿರುವ ರೋಹಿತ್ ಶರ್ಮಾ

ICC T20 World Cup 2022 Team India take on New Zealand in 2nd Warm Up Match kvn
Author
First Published Oct 19, 2022, 9:50 AM IST

ಬ್ರಿಸ್ಬೇನ್‌(ಅ.19): ಐಸಿಸಿ ಟಿ20 ವಿಶ್ವಕಪ್‌ ಅಂತಿಮ ಹಂತದ ತಯಾರಿಯಲ್ಲಿರುವ ಭಾರತ, ಬುಧವಾರ 2ನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಾಡಲಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಮತ್ತೊಂದು ಗೆಲುವಿಗೆ ಕಾತರಿಸುತ್ತಿದೆ.

ಆಸೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತ ನಿರೀಕ್ಷೆಯಂತೆಯೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತ್ತು. ಆದರೆ ನಾಯಕ ರೋಹಿತ್‌ ಶರ್ಮಾ ಇನ್ನೂ ಲಯಕ್ಕೆ ಮರಳಲು ಹೆಣಗಾಡುತ್ತಿದ್ದು, ಕಿವೀಸ್‌ ದೊಡ್ಡ ಇನ್ನಿಂಗ್‌್ಸ ನಿರೀಕ್ಷೆಯಲ್ಲಿದ್ದಾರೆ. ತಂಡದ ಚಿಂತೆಗೆ ಕಾರಣವಾಗಿದ್ದ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಕಳೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಅದೇ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ ಬುಮ್ರಾ ಬದಲಿಗೆ ತಂಡಕ್ಕೆ ಆಯ್ಕೆಯಾಗಿರುವ ಮೊಹಮದ್‌ ಶಮಿ ಆಯ್ಕೆಯನ್ನು ಸಮರ್ಥಿಸುವ ರೀತಿ ಪ್ರದರ್ಶನ ನೀಡಬೇಕಿದೆ. ಮತ್ತೊಂದೆಡೆ ಆರಂಭಿಕ ಅಭ್ಯಾಸ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ 9 ವಿಕೆಟ್‌ ಹೀನಾಯ ಸೋಲು ಕಂಡಿರುವ ಕಿವೀಸ್‌ ಗೆಲುವಿನ ಲಯಕ್ಕೆ ಮರಳುವ ಕಾತರದಲ್ಲಿದೆ.

ಪಂದ್ಯ: ಮಧ್ಯಾಹ್ನ 1.30ಕ್ಕೆ, 
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

ಟಿ20 ವಿಶ್ವಕಪ್‌ ಅರ್ಹತಾ ಸುತ್ತು: ಶ್ರೀಲಂಕಾಗೆ ಮೊದಲ ಗೆಲುವು

ಗೀಲಾಂಗ್‌: ಐಸಿಸಿ ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ಮೊದಲ ಗೆಲುವು ಸಾಧಿಸಿದ್ದು, ಪ್ರಧಾನ ಸುತ್ತಿಗೇರುವ ಕನಸು ಜೀವಂತವಾಗಿರಿಸಿಕೊಂಡಿದೆ. ಮಂಗಳವಾರ ‘ಎ’ ಗುಂಪಿನ ಪಂದ್ಯದಲ್ಲಿ ಲಂಕಾ, ಯುಎಇ ವಿರುದ್ಧ 79 ರನ್‌ ಭರ್ಜರಿ ಜಯಗಳಿಸಿತು. ಸತತ 2ನೇ ಸೋಲುಂಡ ಯುಎಇ ಟೂರ್ನಿಯಿಂದ ಹೊರಬಿತ್ತು.

IND vs PAK ಏಷ್ಯಾಕಪ್ 2023 ಟೂರ್ನಿಗಾಗಿ ಭಾರತ ತಂಡದ ಪಾಕ್ ಪ್ರವಾಸ, ಬಿಸಿಸಿಐ ಮಹತ್ವದ ಹೇಳಿಕೆ!

ಮೊದಲು ಬ್ಯಾಟ್‌ ಮಾಡಿದ ಲಂಕಾ 20 ಓವರಲ್ಲಿ 8 ವಿಕೆಟ್‌ಗೆ 152 ರನ್‌ ಕಲೆ ಹಾಕಿತು. ಪಥುಮ್‌ ನಿಸ್ಸಂಕ(74) ಏಕಾಂಗಿ ಹೋರಾಟ ನಡೆಸಿದರು. ಕಾರ್ತಿಕ್‌ ಮೇಯಪ್ಪನ್‌ 18ಕ್ಕೆ 3 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯುಎಇ 17.1 ಓವರಲ್ಲಿ 73ಕ್ಕೆ ಆಲೌಟಾಯಿತು. ಅಫ್ಜಲ್‌ ಖಾನ್‌(19), ಜುನೈದ್‌ ಸಿದ್ದೀಕ್‌(18) ಮಾತ್ರ ಪ್ರತಿರೋಧ ತೋರಿದರು. ಹಸರಂಗ 4 ಓವರಲ್ಲಿ 1 ಮೇಡನ್‌ ಸಹಿತ 8 ರನ್‌ಗೆ 3 ವಿಕೆಟ್‌ ಕಿತ್ತರೆ, ಚಮೀರ 15ಕ್ಕೆ 3 ವಿಕೆಟ್‌ ಪಡೆದರು.

ಸ್ಕೋರ್‌: ಶ್ರೀಲಂಕಾ 20 ಓವರಲ್ಲಿ 152/8 (ನಿಸ್ಸಂಕ 74, ಮೇಯಪ್ಪನ್‌ 3-19)

ಯುಎಇ 17.1 ಓವರಲ್ಲಿ 73/10 (ಅಫ್ಜಲ್‌ 19, ಹಸರಂಗ 3-8, ಚಮೀರ 3-15)

ಡಚ್‌ಗೆ 2ನೇ ಜಯ

ಮಂಗಳವಾರದ ಮತ್ತೊಂದು ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನೆದರ್ಲೆಂಡ್‌್ಸ 5 ವಿಕೆಟ್‌ ಜಯಗಳಿಸಿತು. ಸತತ 2ನೇ ಗೆಲುವಿನೊಂದಿಗೆ ನೆದರ್ಲೆಂಡ್‌್ಸ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲು ಬ್ಯಾಟ್‌ ಮಾಡಿದ ನಮೀಬಿಯಾ20 ಓವರಲ್ಲಿ 6 ವಿಕೆಟ್‌ಗೆ 121 ರನ್‌ ಕಲೆ ಹಾಕಿತು. ಜಾನ್‌ ಫ್ರೈಲಿಂಕ್‌ 43 ರನ್‌ ಗಳಿಸಿದರು. ಲೀಡೆ 2 ವಿಕೆಟ್‌ ಕಿತ್ತರು. ಗುರಿ ಬೆನ್ನತ್ತಿದ ನೆದರ್ಲೆಂಡ್‌್ಸ 3 ಎಸೆತ ಬಾಕಿ ಇರುವಂತೆ ಜಯಗಳಿಸಿತು. ವಿಕ್ರಂಜಿತ್‌ 39 ರನ್‌ ಗಳಿಸಿದರು. ಸ್ಮಿಟ್‌ 2 ವಿಕೆಟ್‌ ಪಡೆದರು.
 

Follow Us:
Download App:
  • android
  • ios