T20 World Cup ಸೂಪರ್ 12: ಇಂದು 2 ಬ್ಲಾಕ್‌ಬಸ್ಟರ್ ಪಂದ್ಯ..!
ಇಂದಿನಿಂದ ಟಿ20 ವಿಶ್ವಕಪ್ ಸೂಪರ್ 12 ಹಂತದ ಪಂದ್ಯಗಳು ಆರಂಭ
ಮೊದಲ ಸೂಪರ್ 12 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಕಾದಾಟ
ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ
ಸಿಡ್ನಿ(ಅ.22): ಟಿ20 ವಿಶ್ವಕಪ್ ಸೂಪರ್-12 ಹಂತದ ಮೊದಲ ಪಂದ್ಯವೇ ಭಾರೀ ಕುತೂಹಲ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಬದ್ಧವೈರಿಗಳಾದ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸೆಣಸಲಿವೆ. ಕಳೆದ ವರ್ಷ ಫೈನಲ್‌ನಲ್ಲಿ ಈ ಎರಡು ತಂಡಗಳು ಸೆಣಸಿದ್ದವು. ಕಿವೀಸ್‌ಗೆ ಸೋಲುಣಿಸಿ ಆಸ್ಪ್ರೇಲಿಯಾ ಚಾಂಪಿಯನ್ ಆಗಿತ್ತು.
ಆ ಸೋಲಿನ ಸೇಡಿಗೆ ವಿಲಿಯಮ್ಸನ್ ಪಡೆ ಕಾಯುತ್ತಿದೆ. ಆಸ್ಪ್ರೇಲಿಯಾ ತವರಿನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದು ಶುಭಾರಂಭದ ನಿರೀಕ್ಷೆಯಲ್ಲಿದ್ದರೆ, ನ್ಯೂಜಿಲೆಂಡ್ ಈ ಸಲವಾದರೂ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಸಿಡ್ನಿಯಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅವಕೃಪೆ ತೋರುವ ಸಾಧ್ಯತೆ ಇದೆ. ಪಂದ್ಯ ಒಂದೂ ಎಸೆತ ಕಾಣದೆ ರದ್ದಾದರೂ ಆಗಬಹುದು.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಆರೋನ್ ಫಿಂಚ್(ನಾಯಕ), ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್
ನ್ಯೂಜಿಲೆಂಡ್:
ಡೆವೊನ್ ಕಾನ್‌ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್(ನಾಯಕ), ಮಿಚೆಲ್ ಬ್ರಾಸ್‌ವೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯೂಸನ್, ಇಶ್ ಸೋಧಿ
ಪಂದ್ಯ: ಮಧ್ಯಾಹ್ನ 12.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇಂಗ್ಲೆಂಡ್‌ಗೆ ಆಫ್ಘನ್ ಸವಾಲು
ಪರ್ತ್: ಸೂಪರ್-12 ಹಂತದ ಮೊದಲ ದಿನದ 2ನೇ ಪಂದ್ಯದಲ್ಲಿ ಆಕ್ರಮಣಕಾರಿ ಆಟಗಾರರನ್ನು ಹೊಂದಿರುವ ಇಂಗ್ಲೆಂಡ್ ಹಾಗೂ ಅಷ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಆಫ್ಘನ್‌ನ ತಾರಾ ಸ್ಪಿನ್ನರ್‌ಗಳ ಎದುರು ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್‌ಗಳ ಆಟ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಬಟ್ಲರ್, ಲಿವಿಂಗ್‌ಸ್ಟೋನ್, ಬ್ರೂಕ್, ಅಲಿ, ಸ್ಟೋಕ್ಸ್, ಹೇಲ್ಸ್‌ರಂತಹ ಪ್ರಚಂಡ ಬ್ಯಾಟರ್‌ಗಳನ್ನು ಇಂಗ್ಲೆಂಡ್ ಹೊಂದಿದೆ. ಆದರೆ ತಂಡದ ಬೌಲಿಂಗ್ ಪಡೆ ಸ್ವಲ್ಪ ದುರ್ಬಲವಾಗಿರುವಂತೆ ತೋರುತ್ತಿದೆ. ಮತ್ತೊಂದೆಡೆ ಆಫ್ಘನ್ ತಂಡದಲ್ಲಿ ರಶೀದ್, ಮುಜೀಬ್, ನಬಿಯಂತಹ ಅನುಭವಿ ಸ್ಪಿನ್ನರ್‌ಗಳಿದ್ದಾರೆ. ರಹಮಾನುಲ್ಲಾ, ನಜೀಬುಲ್ಲಾ, ಹಝ್ರತ್ ಝಝಾಯಿ ತಂಡದ ಪ್ರಮುಖ ಬ್ಯಾಟರ್‌ಗಳು.
T20 World Cup ಎರಡು ಬಾರಿ ಚಾಂಪಿಯನ್ ವಿಂಡೀಸ್ ಹೊರದಬ್ಬಿ ಸೂಪರ್ 12 ಪ್ರವೇಶಿಸಿದ ಐರ್ಲೆಂಡ್..!
ಸಂಭಾವ್ಯ ತಂಡಗಳು
ಆಫ್ಘಾನಿಸ್ತಾನ
ಹಝ್ರತ್ ಝಝಾಯಿ, ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಡ್ರಾವಿಸ್ ರಸೋಲಿ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ(ನಾಯಕ), ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಉಸ್ಮಾನ್ ಘನಿ, ಫಜಲ್‌ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್.
ಇಂಗ್ಲೆಂಡ್
ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಮಾರ್ಕ್ ವುಡ್.
ಪಂದ್ಯ: ಸಂಜೆ 4.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಿ20 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ