ಬುಕ್ಕಿಗಳ ಮಾಹಿತಿ ಗೌಪ್ಯವಾಗಿಟ್ಟ ಶಕೀಬ್; ICCಯಿಂದ ನಿಷೇಧದ ಭೀತಿ!
ಫಿಕ್ಸಿಂಗ್ ಹಾಗೂ ಬುಕ್ಕಿಗಳ ಮಾಹಿತಿಯನ್ನು ಗೌಪ್ಯವಾಗಿಟ್ಟ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಐಸಿಸಿಯಿಂದ ನಿಷೇದದ ಭೀತಿ ಎದುರಿಸುತ್ತಿದ್ದಾರೆ.
ಢಾಕ(ಅ.29): ಭಾರತ ಪ್ರವಾಸದಕ್ಕೆ ಬಾಂಗ್ಲಾದೇಶ ತಂಡ ಕಸರತ್ತು ಆರಂಭಿಸಿದೆ. ಆದರೆ ಹಿರಿಯ ಕ್ರಿಕೆಟಿಗ, ನಾಯಕ ಶಕೀಬ್ ಅಲ್ ಹಸನ್ ಮಾತ್ರ ಯಾವುದೇ ತರಬೇತಿ, ಅಭ್ಯಾಸದಲ್ಲಿದಲ್ಲಿ ಪಾಲ್ಗೊಂಡಿಲ್ಲ. ಇದಕ್ಕೆ ಶಕೀಬ್ ಅಲ್ ಹಸನ್ ಮೇಲೆ ನಿಷೇಧದ ತೂಗು ಗತ್ತಿ ನೇತಾಡುತ್ತಿರುವುದೇ ಕಾರಣ ಎಂದು ಬಾಂಗ್ಲಾದೇಶದ ಪ್ರಮುಖ ಪತ್ಕಿಕೆ ಸಮಕಾಲ್ ವರದಿ ಮಾಡಿದೆ.
ಇದನ್ನೂ ಓದಿ: ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಭಾರತ vs ಬಾಂಗ್ಲಾದೇಶ ಪಂದ್ಯ
2017ರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬುಕ್ಕಿಗಳಿಬ್ಬರು ಶಕೀಬ್ ಅಲ್ ಹಸನ್ ಸಂಪರ್ಕಿಸಿದ್ದರು. ಸ್ಫಾಟ್ ಫಿಕ್ಸಿಂಗ್‌ಗಾಗಿ ದೊಡ್ಡ ಮೊತ್ತವನ್ನು ಆಫರ್ ಮಾಡಿದ್ದರು. ಆದರೆ ಬುಕ್ಕಿ ಆಫರ್ ನಿರಾಕರಿಸಿದ್ದ ಶಕೀಬ್, ಐಸಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ACSU) ಮಾಹಿತಿ ನೀಡದೇ ಸುಮ್ಮನಿದ್ದರು. ಇತ್ತೀಚೆಗೆ ACSU ತನಿಖೆಯಲ್ಲಿ ಈ ವಿಚಾರ ಬಹಿರಂಗವಾಗಿತ್ತು.
ಇದನ್ನೂ ಓದಿ: ಭಾರತ ಪ್ರವಾಸ ವಿರುದ್ಧ ಪಿತೂರಿ: ಬಿಸಿಬಿ ಅಧ್ಯಕ್ಷ
ಬುಕ್ಕಿ ಸಂಪರ್ಕದ ಮಾಹಿತಿ ನೀಡದ ಗೌಪ್ಯವಾಗಿಟ್ಟು ನಿಯಮ ಉಲ್ಲಂಘಿಸಿದ ಶಕೀಬ್ ಮೇಲೆ ಕ್ರಮಕ್ಕೆ ಐಸಿಸಿ ಮುಂದಾಗಿದೆ. ಶಕೀಬ್ ಮೇಲಿನ ಆರೋಪ ಸಾಬೀತಾದರೆ ಕನಿಷ್ಠ 18 ತಿಂಗಳು ಕ್ರಿಕೆಟ್‌ನಿಂದ ಬ್ಯಾನ್ ಆಗಲಿದ್ದಾರೆ. ಇದೇ ಕಾರಣಕ್ಕೆ ಶಕೀಬ್ ಅಲ್ ಹಸನ್‌ನ್ನು ಭಾರತ ಪ್ರವಾಸದ ತರಬೇತಿ ಹಾಗೂ ಅಭ್ಯಾಸದಿಂದ ದೂರವಿಡಲಾಗಿದೆ ಎಂದು ಸಮಕಾಲ್ ಹೇಳಿದೆ.
ಇದನ್ನೂ ಓದಿ: ಶಕಿಬ್ ವಿರುದ್ಧ ಬಿಸಿಬಿ ಕಾನೂನು ಕ್ರಮ
ಶಕೀಬ್ ಭಾರತ ವಿರುದ್ಧದ ಸರಣಿಯಿಂದ ಹೊರಗುಳಿಯವ ಸಾಧ್ಯತೆ ಹೆಚ್ಚು. ಹೀಗಾದಲ್ಲಿ ತಂಡದ ಮತ್ತೊರ್ವ ಹಿರಿಯ ಕ್ರಿಕೆಟಿಗ ಮುಷ್ಫಿಕರ್ ರಹೀಮ್ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ತಂಡವನ್ನು ಮೊಸಾದೆಕ್ ಹುಸೈನ್ ಮುನ್ನಡೆಸುವ ಸಾಧ್ಯತೆ ಇದೆ.