ದುಬೈ(ಜು.20): ತೀವ್ರ ಕುತೂಹಲ ಕೆರಳಿಸಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕೊನೆಗೂ ಮುಂದೂಡಲಾಗಿದೆ. ಕೊರೋನಾ ವೈರಸ್ ಕಾರಣ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಐಸಿಸಿ ಅಧಿಕೃತ ಪ್ರಕರಣೆ ಹೊರಡಿಸಿದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಇದೀಗ ಮುಂದೂಡಲಾಗಿದೆ.

ಸೆ.26 ರಿಂದ ನ.8ರ ವರೆಗೆ IPL ಟೂರ್ನಿ; BCCI ವೇಳಾಪಟ್ಟಿಗೆ ಸ್ಟಾರ್ ಸ್ಪೋರ್ಟ್ಸ್ ಅಸಮಾಧಾನ!. 

ಕೊರೋನಾ ವೈರಸ್ ಕಾರಣ ಕ್ರಿಕೆಟ್ ರಾಷ್ಟ್ರಗಳ ಒಟ್ಟೂಗೂಡಿ ಟೂರ್ನಿ ಆಡುವುದು ಕಷ್ಟವಾಗಿದೆ. ಆಟಗಾರರು, ಪ್ರೇಕ್ಷಕರು,ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಐಸಿಸಿ ಟೂರ್ನಿ ಮುಂದೂಡಲಾಗಿದೆ ಎಂದು ಐಸಿಸಿ ಹೇಳಿದೆ. ಇಷ್ಟೇ ಮುಂದೂಡಲ್ಪಟ್ಟಿರುವ ಟೂರ್ನಿ ದಿನಾಂಕವನ್ನು ಐಸಿಸಿ ಪ್ರಕಟಿಸಿದೆ.

ICC T20 ವಿಶ್ವಕಪ್  2021,  ಅಕ್ಟೋಬರ್ -ನವೆಂಬರ್ 2021 = ಫೈನಲ್ ಪಂದ್ಯ 14 ನವೆಂಬರ್ 2021
ICC T20 ವಿಶ್ವಕಪ್ 2022, ಅಕ್ಚೋಬರ್-ನವೆಂಬರ್ 2022 = ಫೈನಲ್ ಪಂದ್ಯ   13 ನವೆಂಬರ್ 2022
ICC ಏಕದಿನ ವಿಶ್ವಕಪ್ 2023, ಅಕ್ಟೋಬರ್ -ನವೆಂಬರ್ 2023= ಫೈನಲ್ ಪಂದ್ಯ   26 ನವೆಂಬರ್ 2023( ಭಾರತ ಆತಿಥ್ಯ)

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾಗುತ್ತಿದ್ದಂತೆ ಐಪಿಎಲ್ 2020 ಟೂರ್ನಿ ಆಯೋಜನೆ ಖಚಿತವಾಗಿದೆ. ಸೆಪ್ಟೆಂಬರ್ 26 ರಿಂದ ನವೆಂಬರ್ 8ರ ವೆರೆಗೆ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಇದೀಗ ಬಿಸಿಸಿಐನಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಚಟುವಟಿಕೆಗೆ ಗರಿಗೆದರಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಚಿಂತಿಸುತ್ತಿದೆ. ಆದರೆ ಈ ಕುರಿತು ಇನ್ನು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.