ICC ODI Rankings: ಬರೋಬ್ಬರಿ 117 ಸ್ಥಾನ ಜಿಗಿದ ದ್ವಿಶತಕ ವೀರ ಇಶಾನ್ ಕಿಶನ್!
ಐಸಿಸಿ ಏಕದಿನ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೇರಿದ ಇಶಾನ್ ಕಿಶನ್
ಬಾಂಗ್ಲಾದೇಶ ಎದುರು ದ್ವಿಶತಕ ಚಚ್ಚಿದ್ದ ಇಶಾನ್ ಕಿಶನ್‌ಗೆ ಜಾಕ್‌ಪಾಟ್
117 ಸ್ಥಾನ ಜಿಗಿತ ಕಂಡ ಎಡಗೈ ಬ್ಯಾಟರ್ ಇಶಾನ್ ಕಿಶನ್
ದುಬೈ(ಡಿ.15): ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಬುಧವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ 2 ಸ್ಥಾನ ಜಿಗಿತ ಕಂಡರು. ಇನ್ನು ಬಾಂಗ್ಲಾ ವಿರುದ್ಧ ದ್ವಿಶತಕ ಬಾರಿಸಿದ್ದ ಯುವ ಬ್ಯಾಟರ್ ಇಶಾನ್ ಕಿಶನ್ ಬರೋಬ್ಬರಿ 117 ಸ್ಥಾನ ಪ್ರಗತಿ ಸಾಧಿಸಿದ್ದು, 37ನೇ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 20ರಿಂದ 15ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಬೌಲಿಂಗ್ ಪಟ್ಟಿಯಲ್ಲಿ ಮೊಹಮದ್ ಸಿರಾಜ್ 4 ಸ್ಥಾನ ಮೇಲೇರಿ 22ನೇ ಸ್ಥಾನ ಪಡೆದಿದ್ದು, ಜಸ್ಪ್ರೀತ್ ಬುಮ್ರಾ 18ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ರಿಷಭ್ ಪಂತ್ 5, ರೋಹಿತ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ.
ವನಿತಾ ಟಿ20: ಆಸೀಸ್ ವಿರುದ್ಧ ಭಾರತಕ್ಕೆ ಸೋಲು
ಮುಂಬೈ: ಆಸ್ಪ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮಹಿಳಾ ತಂಡ 21 ರನ್‌ಗಳ ವಿರೋಚಿತ ಸೋಲು ಕಂಡಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು ಪ್ರವಾಸಿ ಆಸೀಸ್ 2-1ರಿಂದ ಮುನ್ನಡೆ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಪ್ರೇಲಿಯಾ 8 ವಿಕೆಟ್‌ಗೆ 172 ರನ್ ಕಲೆ ಹಾಕಿತು. ಪೆರ್ರಿ 47 ಎಸೆತಗಳಲ್ಲಿ 75 ರನ್ ಸಿಡಿಸಿದರೆ, ಗ್ರೇಸ್ ಹ್ಯಾರಿಸ್ ಕೇವಲ 18 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಒಳಗೊಂಡ 41 ರನ್ ಬಾರಿಸಿದರು. ಮೂನಿ 30 ರನ್ ಕೊಡುಗೆ ನೀಡಿದರು. ರೇಣುಕಾ, ಅಂಜಲಿ, ದೀಪ್ತಿ, ದೇವಿಕಾ ತಲಾ 2 ವಿಕೆಟ್ ಕಿತ್ತರು.
Ind vs Ban ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದ ಪಂತ್..! ಸಿಕ್ಸರ್‌ನಲ್ಲೂ ಹೊಸ ದಾಖಲೆ
ಬೃಹತ್ ಮೊತ್ತ ಬೆನ್ನತ್ತಿದ ಭಾರತ ತೀವ್ರ ಹೋರಾಟ ಪ್ರದರ್ಶಿಸಿದರೂ 7 ವಿಕೆಟ್‌ಗೆ 151 ಗಳಿಸಿ ಸೋಲೊಪ್ಪಿಕೊಂಡಿತು. ಸ್ಮೃತಿ ಮಂಧನಾ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಶಫಾಲಿ ವರ್ಮಾ 52, ನಾಯಕಿ ಹರ್ಮನ್‌ಪ್ರೀತ್ ಕೌರ್ 37 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಬ್ಬರು ಕ್ರೀಸ್‌ನಲ್ಲಿರುವ ವರೆಗೆ ಭಾರತ ಗೆಲ್ಲುವ ನಿರೀಕ್ಷೆ ಇತ್ತು. ಕೊನೆಯಲ್ಲಿ ದೀಪ್ತಿ ಶರ್ಮಾ 17 ಎಸೆತಗಳಲ್ಲಿ 25 ರನ್ ಸಿಡಿಸಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ.
ಅ-19 ಮಹಿಳಾ ವಿಶ್ವಕಪ್: ಡಿ ಗುಂಪಿನಲ್ಲಿ ಭಾರತ
ಬೆನೋನಿ(ದ.ಆಫ್ರಿಕಾ): ಚೊಚ್ಚಲ ಆವೃತ್ತಿಯ ಮಹಿಳಾ ಅಂಡರ್-19 ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಆತಿಥೇಯ ದ.ಆಫ್ರಿಕಾದ ಜೊತೆಗೆ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಟೂರ್ನಿ ದ.ಆಫ್ರಿಕಾದಲ್ಲಿ 2023ರ ಜ.14ರಿಂದ 29ರ ವರೆಗೆ ನಡೆಯಲಿದ್ದು, ಇದೇ ಗುಂಪಿನಲ್ಲಿ ಸ್ಕಾಟ್ಲೆಂಡ್, ಯುಎಇ ತಂಡಗಳೂ ಇವೆ.
16 ತಂಡಗಳ ನಡುವೆ ನಡೆಯುವ ಟೂರ್ನಿಯನ್ನು ತಲಾ 4 ತಂಡಗಳ 4 ಗುಂಪುಗಳನ್ನಾಡಿಗ ವಿಂಗಡಿಸಲಾಗಿದೆ. ಆಸ್ಪ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ, ಯುಎಸ್‌ಎ ‘ಎ’ ಗುಂಪಿನಲ್ಲಿದ್ದರೆ, ಇಂಗ್ಲೆಂಡ್, ಪಾಕಿಸ್ತಾನ, ರವಾಂಡ ಹಾಗೂ ಜಿಂಬಾಬ್ವೆ ತಂಡಗಳು ‘ಬಿ’ ಗುಂಪಿನಲ್ಲಿವೆ. ‘ಸಿ’ ಗುಂಪಿನಲ್ಲಿ ನ್ಯೂಜಿಲೆಂಡ್, ಇಂಡೋನೇಷ್ಯಾ, ಐರ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳಿವೆ. ಪ್ರತೀ ಗುಂಪಿನ ಅಗ್ರಸ್ಥಾನಿ ತಂಡ ಸೆಮೀಸ್‌ಗೇರಲಿದೆ ಎಂದು ಐಸಿಸಿ ತಿಳಿಸಿದೆ.
ಭೀಕರ ಕಾರು ಅಪಘಾತ: ಫ್ಲಿಂಟಾಫ್ ಆಸ್ಪತ್ರೆಗೆ ದಾಖಲು
ಲಂಡನ್: ಇಂಗ್ಲೆಂಡ್ ಮಾಜಿ ನಾಯಕ ಆ್ಯಂಡ್ರ್ಯೂ ಫ್ಲಿಂಟಾಫ್ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದು, ಏರ್‌ಲಿಫ್‌್ಟಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಬುಧವಾರ ಬಿಬಿಸಿಯ ‘ಟಾಪ್ ಗೇರ್’ ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣವೇ ಅವರಿಗೆ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಮಾನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ಬಿಬಿಸಿ ತಿಳಿಸಿದೆ. ಈ ಹಿಂದೆ 2019ರಲ್ಲೂ ಕೂಡಾ ಫ್ಲಿಂಟಾಫ್ ಇದೇ ರೀತಿ ಕಾರು ಅಪಘಾತಕ್ಕೆ ಒಳಗಾಗಿದ್ದರು. ಆದರೆ ಸಣ್ಣಪುಟ್ಟಗಾಯಗಳಿಂದ ಪಾರಾಗಿದ್ದರು.