ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು 2019ರ ಮೇ 7ರಿಂದಲೂ ಅಗ್ರಸ್ಥಾನದಲ್ಲಿದ್ದರು. ಅಫ್ಘಾನಿಸ್ತಾನದ ಮೊಹಮದ್ ನಬಿ ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಅತಿ ಹಿರಿಯ ಎನಿಸಿಕೊಂಡಿದ್ದಾರೆ. 

ದುಬೈ(ಫೆ.15): ಕಳೆದ 5 ವರ್ಷಗಳಿಂದಲೂ ಏಕದಿನ ಕ್ರಿಕೆಟ್‌ನ ಆಲ್ರೌಂಡರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಶಕೀಬ್‌ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು 2019ರ ಮೇ 7ರಿಂದಲೂ ಅಗ್ರಸ್ಥಾನದಲ್ಲಿದ್ದರು. ಅಫ್ಘಾನಿಸ್ತಾನದ ಮೊಹಮದ್ ನಬಿ ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಅತಿ ಹಿರಿಯ ಎನಿಸಿಕೊಂಡಿದ್ದಾರೆ. 

ಟೆಸ್ಟ್‌: ನಂ.1 ಸ್ಥಾನದಲ್ಲೇ ಮುಂದುವರಿದ ಬುಮ್ರಾ

ದುಬೈ: ಕಳೆದ ವಾರ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ, ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಬುಮ್ರಾ 881 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ದ.ಆಫ್ರಿಕಾದ ರಬಾಡ 842 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅಶ್ವಿನ್‌ 2, ಅಕ್ಷರ್‌ ಪಟೇಲ್‌ 5ನೇ ಸ್ಥಾನದಲ್ಲಿದ್ದಾರೆ. 

ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ: 2024ರ ಐಪಿಎಲ್‌ ಬಗ್ಗೆ ಮಹತ್ವದ ಅಪ್‌ಡೇಟ್‌ ಕೊಟ್ಟ ಅರುಣ್ ಧುಮಾಲ್‌..!

ಏಕದಿನ: ಆಫ್ಘನ್‌ ವಿರುದ್ಧ ಲಂಕಾ 3-0 ಕ್ಲೀನ್‌ಸ್ವೀಪ್‌

ಪಲ್ಲೆಕೆಲೆ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸಿದೆ. ಬುಧವಾರ ನಡೆದ ಕೊನೆ ಪಂದ್ಯದಲ್ಲಿ ಲಂಕಾ 7 ವಿಕೆಟ್‌ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್‌, ರಹ್ಮತಾ ಶಾ(65), ಅಜ್ಮತುಲ್ಲಾ(54) ಹಾಗೂ ಗುರ್ಬಾಜ್‌ ಹೋರಾಟದ ಹೊರತಾಗಿಯೂ 48.2 ಓವರ್‌ಗಳಲ್ಲಿ 266ಕ್ಕೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿಯನ್ನು ಶ್ರೀಲಂಕಾ ಸುಲಭದಲ್ಲಿ ಬೆನ್ನತ್ತಿ ಜಯಗಳಿಸಿತು. ಪಥುಂ ನಿಸ್ಸಾಂಕ(118), ಆವಿಷ್ಕಾ ಫೆರ್ನಾಂಡೊ(91) ಆಕರ್ಷಕ ಆಟದಿಂದಾಗಿ ತಂಡಕ್ಕೆ 35.2 ಓವರ್‌ಗಳಲ್ಲಿ ಗೆಲುವು ಲಭಿಸಿತು.

ಲಿಸ್ಟ್‌ ‘ಎ’ ಇನ್ನಿಂಗ್ಸ್‌ನಲ್ಲಿ 8 ಕ್ಯಾಚ್‌ ಪಡೆದ ಅಲೆಕ್ಸ್‌ ಕೇರ್ರಿ!

ಅಡಿಲೇಡ್‌: ಆಸ್ಟ್ರೇಲಿಯಾದ ವಿಕೆಟ್‌ ಕೀಪರ್‌ ಅಲೆಕ್ಸ್‌ ಕೇರಿ ದೇಸಿ ಲಿಸ್ಟ್‌ ‘ಎ’ ಕ್ರಿಕೆಟ್‌ ಪಂದ್ಯವೊಂದರಲ್ಲಿ 8 ಕ್ಯಾಚ್‌ ಪಡೆದಿದ್ದು, ಅಂತಾರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾ ಪರ ಆಡುತ್ತಿರುವ ಕೇರ್ರಿ ಬುಧವಾರ ಕ್ವೀನ್ಸ್‌ಲೆಂಡ್‌ ವಿರುದ್ಧ ಈ ಸಾಧನೆ ಮಾಡಿದರು. 

ರಾಜ್‌ಕೋಟ್‌ ಕದನಕ್ಕೆ ಭಾರತ vs ಇಂಗ್ಲೆಂಡ್ ಸನ್ನದ್ಧ..!

ಈ ಮೊದಲು ಇಂಗ್ಲೆಂಡ್‌ನ ಇಬ್ಬರು ವಿಕೆಟ್‌ ಕೀಪರ್‌ಗಳು ಲಿಸ್ಟ್‌ ‘ಎ’ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ತಲಾ 8 ಕ್ಯಾಚ್‌ಗಳನ್ನು ಪಡೆದಿದ್ದರು. 1982ರಲ್ಲಿ ಸೋಮರ್‌ಸೆಟ್‌ ಪರ ಡೆರೆಕ್‌ ಟೇಲರ್‌, 2021ರಲ್ಲಿ ವೊರ್ಚೆಸ್ಟೈರ್‌ಶೈರ್‌ ಪರ ಜೇಮ್ಸ್‌ ಪೈಪ್‌ ಈ ಸಾಧನೆ ಮಾಡಿದ್ದರು.