ICC ಏಕದಿನ ಬೌಲರ್‌ಗಳ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಅಗ್ರವೇಗಿಯಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ  ಪಟ್ಟ ಕಳೆದುಕೊಂಡಿದ್ದಾರೆ. ಇಂಜುರಿಯಿಂದ ವಾಪಸ್ ಆದ ಬಳಿಕ ಬೂಮ್ರಾ ಮೊನಚು ಕಳೆದುಕೊಂಡಿದ್ದಾರೆ ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ದುಬೈ(ಫೆ.13): : ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದೂ ವಿಕೆಟ್‌ ಕಬಳಿಸದ ಭಾರತದ ಮಂಚೂಣಿ ವೇಗಿ ಜಸ್‌ಪ್ರೀತ್‌ ಬೂಮ್ರಾ, ಬುಧವಾರ ಹೊಸದಾಗಿ ಪ್ರಕಟಗೊಂಡ ಐಸಿಸಿ ಏಕದಿನ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ನಂಬಿದ್ರೆ ನಂಬಿ, ವಿಶ್ವದ ನಂ.1 ಬೌಲರ್‌ಗೆ ಸಿಕ್ಕಿದ್ದು ಒಂದೇ ಒಂದು ವಿಕೆಟ್..!

719 ರೇಟಿಂಗ್‌ ಅಂಕಗಳೊಂದಿಗೆ ಬೂಮ್ರಾ 2ನೇ ಸ್ಥಾನಕ್ಕಿಳಿದಿದ್ದಾರೆ. ಸರಣಿಯಲ್ಲಿ ಆಡದಿದ್ದರೂ, ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ ಅಗ್ರಸ್ಥಾನಕ್ಕೇರಿದ್ದಾರೆ. ಕಿವೀಸ್‌ ವಿರುದ್ಧ ಸರಣಿಯಲ್ಲಿ 6 ವಿಕೆಟ್‌ ಕಿತ್ತ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ 13ನೇ ಸ್ಥಾನಕ್ಕೇರಿದರೆ, ಕುಲ್ದೀಪ್‌ ಯಾದವ್‌ 16ನೇ ಸ್ಥಾನಕ್ಕೆ ಕುಸಿದಿದ್ದಾರೆ. 

ಇದನ್ನೂ ಓದಿ: ICC ಟಿ20 ರ‍್ಯಾಂಕಿಂಗ್ ಪ್ರಕಟ; ಕರಿಯರ್ ಬೆಸ್ಟ್ ಸ್ಥಾನ ಪಡೆದ ರಾಹುಲ್ !.

ಇದೇ ವೇಳೆ ರವೀಂದ್ರ ಜಡೇಜಾ ಆಲೌಂಡರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದು, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.