ದುಬೈ(ಮಾ.27): ಜಾಗತಿಕ ಪಿಡುಗು ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನೇ ಒಂದು ವರ್ಷ ಮುಂದೂಡಲಾಗಿದೆ.

ಭಾರತ ಲಾಕ್‌ಡೌನ್: ಮನೆಯಲ್ಲೇ ಇರಿ, ರನೌಟ್ ಆಗ್ಬೇಡಿ, ಜಡ್ಡು ವಿಚಿತ್ರ ವಿಡಿಯೋ ಸಂದೇಶ..!

ಅಕ್ಟೋಬರ್, ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಬೇಕಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಚುಟುಕು ಕ್ರಿಕೆಟ್‌ ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡುವ ಸಾಧ್ಯತೆಯಿದೆ. ಇನ್ನು  2021ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಿಗಧಿಯಾಗಿದ್ದು, ಒಂದೇ ವರ್ಷದಲ್ಲಿ ಎರಡೆರಡು ಟಿ20 ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಗೆ ಐಸಿಸಿ ಒಳಗಾಗಬಹುದು ಎನ್ನಲಾಗಿದೆ.

ಟಿ20 ವಿಶ್ವಕಪ್ ಆಡದೆಯೇ ನಿವೃತ್ತಿಯಾಗ್ತಾರಾ ಧೋನಿ..?

ಗುರುವಾರ 2021ರ ಟಿ20 ವಿಶ್ವಕಪ್‌ನ್ ಅರ್ಹತಾ ಟೂರ್ನಿಗಳನ್ನು ಜೂನ್ 30 ರವರೆಗೆ ಐಸಿಸಿ ಮುಂದೂಡಿದೆ. ಒಟ್ಟಿನಲ್ಲಿ ಕೊರೋನಾ ಪಿಡುಗು ಬರೀ ಜನರನ್ನಷ್ಟೇ ಬಲಿ ಪಡೆದಿಲ್ಲ, ಮಹತ್ವದ ಕ್ರೀಡಾ ಟೂರ್ನಿಗಳ ಪಾಲಿಗೂ ಕಂಠಕವಾಗಿ ಪರಿಣಮಿಸಿದೆ.

ಶುಕ್ರವಾರ(ಮಾ.27) ಬೆಳಗಿನ ಅಂಕಿ-ಅಂಶದಂತೆ ಇದುವರೆಗೂ 5,32 ಲಕ್ಷ ಜನರಿಗೆ ಕೋವಿಡ್ 19 ಸೋಂಕು ತಗುಲಿದ್ದು, 24 ಸಾವಿರಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲಿ 727 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, 20 ಮಂದಿ ಜೀವ ಕಳೆದುಕೊಂಡಿದ್ದಾರೆ. ಈಗಾಗಲೇ ಹಲವು ಕ್ರೀಡಾ ತಾರೆಯರು ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.