ಲಾಹೋರ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವು ಒಂದೂ ಪಂದ್ಯ ಗೆಲ್ಲದೆ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯಿತು. ಆದರೂ, ಐಸಿಸಿಯಿಂದ 2.31 ಕೋಟಿ ರೂಪಾಯಿ ಬಹುಮಾನವನ್ನು ಪಡೆದುಕೊಂಡಿದೆ. ಭಾರತ ಮತ್ತು ನ್ಯೂಜಿಲೆಂಡ್ 'ಎ' ಗುಂಪಿನಿಂದ ಸೆಮಿಫೈನಲ್ ತಲುಪಿದ್ದು, ಇಂಗ್ಲೆಂಡ್ 'ಬಿ' ಗುಂಪಿನಿಂದ ಹೊರಬಿದ್ದಿದೆ. ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ನಡುವೆ ಸೆಮಿಫೈನಲ್ ಸ್ಥಾನಕ್ಕಾಗಿ ಪೈಪೋಟಿ ಇದೆ.

ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನ ತಂಡವು ಒಂದೂ ಪಂದ್ಯ ಗೆಲ್ಲದೇ ಟೂರ್ನಿಯಿಂದ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು 'ಎ' ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದು ತನ್ನ ಅಭಿಯಾನ ಮುಗಿಸಿದೆ. 

ಇನ್ನು ಒಂದೂ ಪಂದ್ಯ ಗೆಲ್ಲದೇ ತನ್ನ ಹೋರಾಟ ಮುಗಿಸಿದ ಪಾಕಿಸ್ತಾನ ತಂಡಕ್ಕೆ ಐಸಿಸಿಯಿಂದ ಬಹುಮಾನದ ರೂಪದಲ್ಲಿ ಹಣದ ಹೊಳೆಯೇ ಹರಿದು ಬಂದಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಹೊರತಾಗಿಯೂ ಪಾಕಿಸ್ತಾನ ತಂಡಕ್ಕೆ ಐಸಿಸಿಯಿಂದ ಸಿಕ್ಕ ನಗದು ಬಹುಮಾನ ಎಷ್ಟು ನೋಡೋಣ ಬನ್ನಿ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಗೆಲ್ಲುತ್ತಿದ್ದಂತೆ ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ! ಗ್ರೂಪ್ ಹಂತದಲ್ಲೇ ಹೊರಬೀಳುತ್ತಾ ಆಸೀಸ್?

ಪಾಕಿಸ್ತಾನ ಪಾಲಾದ ಕೋಟಿಗಟ್ಟಲೇ ಹಣ:

ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. ಇದಾದ ಬಳಿಕ ದುಬೈನಲ್ಲಿ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಭಾರತದ ಎದುರು ಮುಗ್ಗರಿಸಿಬಿದ್ದಿತ್ತು. ಇನ್ನು ಇದೂ ಸಾಲದೆಂಬಂತೆ ಬಾಂಗ್ಲಾದೇಶ ಎದುರಿನ ಪಂದ್ಯವು ಮಳೆಯಿಂದ ರದ್ದಾಯಿತು. ಹೀಗಾಗಿ ಒಟ್ಟಾರೆ 8 ತಂಡಗಳು ಪಾಲ್ಗೊಂಡಿರುವ ಈ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು 7 ಅಥವಾ 8ನೇ ಸ್ಥಾನ ಪಡೆಯಲಿದೆ. ಹೀಗಾಗಿ ಕೊನೆಯ ಸ್ಥಾನ ಪಡೆಯುವ ತಂಡಕ್ಕೆ ಐಸಿಸಿಯು 1.40 ಲಕ್ಷ ಡಾಲರ್ ಜತೆಗೆ ಖಚಿತ ನಗದು 1.25 ಲಕ್ಷ ಡಾಲರ್ ಮೊತ್ತವನ್ನು ಪಾಕಿಸ್ತಾನ ತಂಡವು ಪಡೆದುಕೊಂಡಿದೆ. ಹೀಗಾಗಿ ಒಟ್ಟಾರೆ ಪಾಕಿಸ್ತಾನ ತಂಡಕ್ಕೆ 2.65 ಲಕ್ಷ ಡಾಲರ್ ಬಹುಮಾನ ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 2.31 ಕೋಟಿ ರುಪಾಯಿ ಬಹುಮಾನ ಪಾಕಿಸ್ತಾನ ಪಾಲಾಗಿದೆ.

Scroll to load tweet…

ಚಾಂಪಿಯನ್ಸ್ ಟ್ರೋಫಿಯಲ್ಲಿ ಬಹುಮಾನ ಹಂಚಿಕೆ ಹೇಗಿದೆ?

ಚಾಂಪಿಯನ್ ತಂಡಕ್ಕೆ: 19.46 ಕೋಟಿ ರುಪಾಯಿ
ರನ್ನರ್ ಅಪ್ ತಂಡಕ್ಕೆ: 9.73 ಕೋಟಿ ರುಪಾಯಿ
ಸೆಮಿಫೈನಲ್‌ ತಂಡಗಳಿಗೆ ತಲಾ: 4.86 ಕೋಟಿ ರುಪಾಯಿ
5&6ನೇ ಸ್ಥಾನ ಪಡೆಯುವ ತಂಡಗಳಿಗೆ: 3.04 ಕೋಟಿ ರುಪಾಯಿ
7&8ನೇ ಸ್ಥಾನ ಪಡೆಯುವ ತಂಡಗಳಿಗೆ: 1.22 ಕೋಟಿ ರುಪಾಯಿ
ಗ್ರೂಪ್ ಹಂತದಲ್ಲಿ ಪ್ರತಿ ಗೆಲುವಿಗೆ: 1.22 ಕೋಟಿ ರುಪಾಯಿ
ಗ್ಯಾರಂಟಿ ಮೊತ್ತ: 1.09 ಕೋಟಿ ರುಪಾಯಿ

ಇದನ್ನೂ ಓದಿ: ಮುಗ್ಗರಿಸಿ ಬಿದ್ರೂ ಸೊಕ್ಕು ಅಡಗಿಲ್ಲ; ಚಾಂಪಿಯನ್ಸ್ ಟ್ರೋಫಿ ಸೋತ್ರೂ ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್!

ಇಲ್ಲಿಯವರೆಗಿನ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಪ್‌ಡೇಟ್ ಏನು?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ತಲಾ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನು ಈ ಗುಂಪಿನಲ್ಲಿ ಎರಡು ಪಂದ್ಯ ಸೋತು, ಒಂದು ಪಂದ್ಯ ರದ್ದಾಗಿದ್ದರಿಂದ ತಲಾ ಒಂದೊಂದು ಅಂಕ ಪಡೆದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಅಧಿಕೃತವಾಗಿ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿವೆ.

ಇನ್ನೊಂದೆಡೆ 'ಬಿ' ಗುಂಪಿನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಸತತ ಎರಡು ಪಂದ್ಯ ಸೋತು ಚಾಂಪಿಯನ್ಸ್ ಟ್ರೋಫಿ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದೆ. ಇನ್ನೊಂದೆಡೆ ಇನ್ನುಳಿದ ಎರಡು ಸ್ಥಾನಗಳಿಗಾಗಿ ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪೈಪೋಟಿ ಇದೆ. ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯವು ಒಂದು ರೀತಿಯಲ್ಲಿ ವರ್ಚುವಲ್ ನಾಕೌಟ್ ಪಂದ್ಯ ಎನಿಸಿಕೊಂಡಿದ್ದು ಗೆದ್ದ ತಂಡ ಸೆಮಿಫೈನಲ್ ಪ್ರವೇಶ ಪಡೆಲಿದೆ. ಇನ್ನು ಸೋತ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ.