ಟೀಂ ಇಂಡಿಯಾ ಮಾಜಿ ನಾಯಕನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಕನ್ನಡಿಗನ ಸಾಧನೆ ಪರಿಗಣಿಸಿ ಕುಂಬ್ಳೆಗೆ ವಿಶೇಷ ಗೌರವ

ದುಬೈ(ಮೇ.20): ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಸಾಧನೆ ಪರಿಗಣಿಸಿ ಐಸಿಸಿ, ಈ ವಿಶೇಷ ಗೌರವ ನೀಡಿ ಸನ್ಮಾನಿಸಿದೆ. ಕುಂಬ್ಳೆ ಸಾಧನೆ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಐಸಿಸಿ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೌರವದ ಸಂಭ್ರಮಾಚರಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!.

ಅನಿಲ್ ಕುಂಬ್ಳೆ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ಗರಿಷ್ಠ ವಿಕೆಟ್ ಪಡೆದ ಹೆಗ್ಗಳಿಕೆಗೆ ಕುಂಬ್ಳೆ ಪಾತ್ರರಾಗಿದ್ದಾರೆ. ಇವರೆ ಮುಂದಿನ #ICCHallOfFame ಎಂದು ಪೋಸ್ಟ್ ಮಾಡಿದೆ.

View post on Instagram

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಪರ 132 ಟೆಸ್ಟ್‌ ಆಡಿದ್ದಾರೆ. ಈ ಮೂಲಕ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 35 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂಬ್ಳೆ 30.89 ರ ಸರಾಸರಿಯಲ್ಲಿ 337 ವಿಕೆಟ್ ಗಳಿಸಿದ್ದಾರೆ

ಇತ್ತೀಚೆಗೆ ಐಸಿಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇ್ ತಿಂಗಳ ಸಂಭ್ರಮ ಆಚರಿಸಲು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಅಭಿಯಾನ ಆರಂಭಿಸಿದೆ.