Asianet Suvarna News Asianet Suvarna News

ಬಿಸಿಸಿಐ ಜೊತೆಗೆ ಐಸಿಸಿಯಲ್ಲೂ ಜಯ್ ಶಾ ಕಾರುಬಾರು, ಪ್ರಮುಖ ಸ್ಥಾನಕ್ಕೆ ಆಯ್ಕೆ!

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಾರ್ಯವ್ಯಾಪ್ತಿ ಇದೀಗ ಕೇವಲ ಭಾರತೀಯ ಕ್ರಿಕೆಟ್ ಮಂಡಳಿಗೆ ಮಾತ್ರ ಸೀಮಿತವಾಗಿಲ್ಲ. ಐಸಿಸಿಯಲ್ಲೂ ಇನ್ಮುಂದೆ ಜಯ್ ಶಾ ಕಾರುಬಾರು ಶುರುವಾಗಲಿದೆ. ಐಸಿಸಿಯ ಪ್ರಮುಖ ಸ್ಥಾನಕ್ಕೆ ಜಯ್ ಶಾ ಆಯ್ಕೆಯಾಗಿದ್ದಾರೆ.

ICC Board Meeting BCCI secretary Jay Shah elected as head of powerful Finance and Commercial Affairs committee ckm
Author
First Published Nov 12, 2022, 6:45 PM IST

ದುಬೈ(ನ.12):  ವಿಶ್ವ ಕ್ರಿಕೆಟ್‌ನಲ್ಲಿ ಬಿಸಿಸಿಐ ಅತ್ಯಂತ ಬಲಿಷ್ಠ ಕ್ರಿಕೆಟ್ ಮಂಡಳಿ. ಈ ಶ್ರೀಮಂತ ಕ್ರಿಕೆಟ್ ಮಂಡಳಿಯ ಎಲ್ಲಾ ಕಾರ್ಯವ್ಯವಹಾರಗಳನ್ನು ಸದ್ಯ ಕಾರ್ಯದರ್ಶಿ ಜಯ್ ಶಾ ನೋಡಿಕೊಳ್ಳುತ್ತಿದ್ದಾರೆ. ನೂತನ ಅಧ್ಯಕ್ಷ ರೋಜರ್ ಬಿನ್ನಿ ಇದೀಗ ಸೇರಿಕೊಂಡಿದ್ದಾರೆ. ಇದೀಗ ಜಯ್ ಶಾ ಕಾರ್ಯವ್ಯಾಪ್ತಿ ಬಿಸಿಸಿಐಗೆ ಮಾತ್ರ ಸೀಮಿತವಾಗಿಲ್ಲ. ಇನ್ಮುಂದೆ ಐಸಿಸಿಯಲ್ಲೂ ಜಯ್ ಶಾ ಅಧಿಕಾರ ನಡೆಸಲಿದ್ದಾರೆ. ಐಸಿಸಿ ಪದಾಧಿಕಾರಿಗಳ ಚುನಾವಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಐಸಿಸಿ ಚೇರ್ಮೆನ್ ಸ್ಥಾನಕ್ಕೆ ನ್ಯೂಜಿಲೆಂಡ್‌ನ ಕ್ರೆಗ್ ಬಾರ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ಮತ್ತೆ ಎರಡು ವರ್ಷಗಳ ಅವಧಿಗೆ ಕ್ರೆಗ್ ಬಾರ್ಕಿ ಐಸಿಸಿ ಚೇರ್ಮೆನ್ ಆಗಿ ಮುಂದುವರಿಯಲಿದ್ದಾರೆ.

ಜಯ್ ಶಾ ಐಸಿಸಿಯ ಪ್ರಮುಖ ಅಧಿಕಾರ ಚಲಾಯಿಸಿದ್ದಾರೆ. ಐಸಿಸಿಯ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಹಣಕಾಸು ಮತ್ತು ವಾಣಿಜ್ಯ ವ್ಯವಹಾರ ಸಮಿತಿ ನೋಡಿಕೊಳ್ಳಲಿದೆ. ಈ ಸಮಿತಿಗೆ ಜಯ್ ಶಾ ಮುಖ್ಯಸ್ಥರಾಗಿದ್ದಾರೆ. ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಆದಾಯ ಹಂಚಿಕೆ, ಐಸಿಸಿ ಟೂರ್ನಿ ಆಯೋಜನೆಗೆ ಅನುದಾನ ಸೇರಿದಂತೆ ಎಲ್ಲಾ ವಾಣಿಜ್ಯ ವ್ಯವಹಾರಗಳನ್ನು ಈ ಸಮಿತಿ ನೋಡಿಕೊಳ್ಳಲಿದೆ. ಇದೀಗ ಈ ಸಮಿತಿಗೆ ಜಯ್ ಶಾ ಮುಖ್ಯಸ್ಥರಾಗಿದ್ದಾರೆ. 

BCCI ಐತಿಹಾಸಿಕ ತೀರ್ಮಾನ; ಭಾರತ ಪುರುಷ-ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ..!

ಐಸಿಸಿಯ ಆದಾಯದಲ್ಲಿ ಬಹುಪಾಲು ಬಿಸಿಸಿಐ ಪಡೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಐಸಿಸಿಗೆ ಅತೀ ಹೆಚ್ಚಿನ ಆದಾಯ ತಂದುಕೊಡುವ ಕ್ರಿಕೆಟ್ ಸಂಸ್ಥೆ ಬಿಸಿಸಿಐ. ಇದೀಗ ಜಯ್ ಶಾ ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥರಾಗಿರುವ ಕಾರಣ ಬಿಸಿಸಿಐಗೆ ಮತ್ತಷ್ಟು ಆದಾಯ ಹರಿದು ಬರುವ ಸಾಧ್ಯತೆ ಇದೆ ಅನ್ನೋ ಲೆಕ್ಕಾಚಾರಗಳು ಇದೀಗ ಶುರುವಾಗಿದೆ.

 

 

ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷರಾಗಿ ಎರಡು ವರ್ಷ ಅವಧಿ ಪೂರೈಸಿದ ಸೌರವ್ ಗಂಗೂಲಿ ಐಸಿಸಿಯ ಹೆಟ್ ಆಫ್ ಕ್ರಿಕೆಟ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ. ಕ್ರಿಕೆಟ್ ಆಪರೇಶನ್ ಕುರಿತು ಈ ಸಮಿತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. 

ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

ವಿಶ್ವಕಪ್‌: ಬಿಸಿಸಿಐಗೆ 955 ಕೋಟಿ ರು. ನಷ್ಟ?
ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ ಆಯೋಜನೆಗಾಗಿ ಐಸಿಸಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡದಿದ್ದರೆ ಬಿಸಿಸಿಐ 955 ಕೋಟಿ ರು. ನಷ್ಟಅನುಭವಿಸುವ ಸಾಧ್ಯತೆ ಇದೆ. ಸರ್ಕಾರ ಐಸಿಸಿಯ ಪ್ರಸಾರದ ಆದಾಯದ ಮೇಲೆ ಶೇ.21.84ರಷ್ಟುಹೆಚ್ಚುವರಿ ತೆರಿಗೆ ಶುಲ್ಕ ವಿಧಿಸುವ ನಿರ್ಧಾರ ಕೈಬಿಡದಿದ್ದರೆ ಬಿಸಿಸಿಐಗೆ ನಷ್ಟಖಚಿತ. ಐಸಿಸಿ ಆಯೋಜಿಸುವ ಟೂರ್ನಿಗಳಿಗೆ ಸ್ಥಳೀಯ ಸರ್ಕಾರ ತೆರಿಗೆ ವಿನಾಯಿತಿ ನೀಡುವ ರೂಢಿ ಮೊದಲಿನಿಂದಲೂ ಇದೆ. ಭಾರತದ ತೆರಿಗೆ ಕಾಯ್ದೆಯಂತೆ 2016ರ ಟಿ20 ವಿಶ್ವಕಪ್‌ ಆಯೋಜನೆಯಿಂದ ಈಗಾಗಲೇ 193 ಕೋಟಿ ರು. ನಷ್ಟಅನುಭವಿಸಿರುವ ಬಿಸಿಸಿಐ ಅದಕ್ಕಾಗಿ ಐಸಿಸಿ ಜೊತೆ ಹೋರಾಟ ನಡೆಸುತ್ತಿದೆ. ಮುಂಬರುವ ಟೂರ್ನಿಯ ಪ್ರಸಾರ ಆದಾಯದ ಮೇಲೆ ಐಸಿಸಿ ಶೇ.20ರಷ್ಟುತೆರಿಗೆಗೆ ಒಪ್ಪಿದೆ. ತೆರಿಗೆ ವಿನಾಯಿತಿ ದೊರೆತಲ್ಲಿ ನಷ್ಟಪ್ರಮಾಣ 430 ಕೋಟಿ ರು.ಗೆ ತಗ್ಗಲಿದ್ದು ಈ ನಿಟ್ಟಿನಲ್ಲಿ ಬಿಸಿಸಿಐ ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದೆ. 2023ರ ಏಕದಿನ ವಿಶ್ವಕಪ್‌ ಪ್ರಸಾರದಿಂದ ಐಸಿಸಿಯು 4400 ಕೋಟಿ ರು. ಆದಾಯ ನಿರೀಕ್ಷೆಯಲ್ಲಿದೆ.

Follow Us:
Download App:
  • android
  • ios