ಮ್ಯಾಚ್‌ ಫಿಕ್ಸಿಂಗ್‌ ಮಾಡಿದ ಆರೋಪದಡಿ ಇಬ್ಬರು ಯುಎಇ ಇಬ್ಬರು ಆಟಗಾರರನ್ನು ಐಸಿಸಿ 8 ವರ್ಷಗಳ ಕಾಲ ಬ್ಯಾನ್‌ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಮಾ.17): 2019ರ ಐಸಿಸಿ ಟಿ20 ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿದ್ದ ಆರೋಪದ ಮೇಲೆ ಯುಎಇ ಕ್ರಿಕೆಟ್‌ ತಂಡದ ಇಬ್ಬರು ಅನುಭವಿ ಆಟಗಾರರಾದ ಮೊಹಮದ್‌ ನವೀದ್‌, ಶೈಮನ್‌ ಅನ್ವರ್‌ ಬಟ್‌ರನ್ನು 8 ವರ್ಷ ಎಲ್ಲಾ ರೀತಿಯ ಕ್ರಿಕೆಟ್‌ ಚಟುವಟಿಕೆಗಳಿಂದ ಐಸಿಸಿ ನಿಷೇಧಿಸಿದೆ. ಇಬ್ಬರ ನಿಷೇಧ ಅವಧಿ 2019ರ ಅ.16ರಿಂದ ಆರಂಭಗೊಳ್ಳಲಿದೆ.

ತಂಡದ ಮಾಜಿ ನಾಯಕ 33 ವರ್ಷದ ನವೀದ್‌ ಯುಎಇ ಪರ 39 ಏಕದಿನ ಹಾಗೂ 31 ಟಿ20 ಪಂದ್ಯಗಳನ್ನು ಆಡಿದ್ದರು. ಇನ್ನು 42 ವರ್ಷದ ಬ್ಯಾಟ್ಸ್‌ಮನ್‌ ಅನ್ವರ್‌ ಬಟ್‌ 40 ಏಕದಿನ, 32 ಟಿ20 ಪಂದ್ಯಗಳಲ್ಲಿ ಆಡಿದ್ದರು. ಈ ಇಬ್ಬರ ಕ್ರಿಕೆಟ್‌ ವೃತ್ತಿ ಜೀವನ ಬಹುತೇಕ ಮುಕ್ತಾಯಗೊಳ್ಳಲಿದೆ.

ಟೀಂ ಇಂಡಿಯಾಗೆ ಶಾಕ್; 3ನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಸೈನ್ಯ!

Scroll to load tweet…

ನವೀದ್‌ ಯುಎಇ ತಂಡದ ನಾಯಕ ಮಾತ್ರವಲ್ಲದೇ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ ಎನ್ನುವ ಖ್ಯಾತಿಗೂ ಭಾಜನರಾಗಿದ್ದರು. ಇನ್ನು ಯುಎಇ ಆರಂಭಿಕ ಬ್ಯಾಟ್ಸ್‌ಮನ್‌ ಅನ್ವರ್ ಬಟ್‌ ಸುದೀರ್ಘ ವೃತ್ತಿ ಬದುಕು ಬಹುತೇಕ ಅಂತ್ಯವಾದಂತೆ ಆಗಿದೆ.