ಗಾಯದ ಮೇಲೆ ಬರೆ.! ಪಾಕಿಸ್ತಾನದಿಂದ ಗಡಿಪಾರಾಗಿರುವ ಆಫ್ಘನ್ ಜನರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಜದ್ರಾನ್.!
" ಇಂತಹ ದೊಡ್ಡ ಟೂರ್ನಿಯಲ್ಲಿ ನಾನು ಚೆನ್ನಾಗಿ ಆಡಿದ್ದಕ್ಕೆ ಆ ದೇವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಮೈದಾನಕ್ಕಿಳಿಯುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ದೀರ್ಘ ಸಮಯದ ಕಾಲ ಕ್ರೀಸ್‌ನಲ್ಲಿದ್ದ ರನ್ ಗಳಿಸಬೇಕು ಅಂದುಕೊಂಡೇ ಮೈದಾನಕ್ಕಿಳಿದೆ. ನನ್ನ ದೇಶದ ಗೆಲುವಿನ ನನ್ನಿಂದ ಕಿರುಕಾಣಿಕೆ ನೀಡಿದ್ದು, ಧನ್ಯತಾಭಾವ ಮೂಡಿಸುತ್ತಿದೆ ಎಂದು' ಇಬ್ರಾಹಿಂ ಜದ್ರಾನ್ ತಿಳಿಸಿದ್ದಾರೆ.
ಚೆನ್ನೈ(ಅ.24): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಎದುರಾಗಿದೆ. ಮಾಜಿ ಚಾಂಪಿಯನ್ ಪಾಕಿಸ್ತಾನ ಎದುರು ಆಫ್ಘಾನಿಸ್ತಾನ ತಂಡವು 8 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಆಕರ್ಷಕ ಅರ್ಧ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಆಫ್ಘಾನಿಸ್ತಾನ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್, ಇದೀಗ ಪಾಕ್ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಜದ್ರಾನ್, ಈ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಗಡಿಪಾರಾಗಿರುವ ಆಫ್ಘಾನಿಗರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಜದ್ರಾನ್, ಈ ಗೆಲುವು ತಮಗೆ ಹಾಗೂ ತಮ್ಮ ತಂಡಕ್ಕೆ ಸಾಕಷ್ಟು ಖುಷಿ ಕೊಟ್ಟಿದೆ ಎಂದಿದ್ದಾರೆ. ಇದು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಆಫ್ಘಾನಿಸ್ತಾನ ದಾಖಲಿಸಿದ ಮೂರನೇ ಗೆಲುವು ಎನಿಸಿಕೊಂಡಿದೆ.
" ಇಂತಹ ದೊಡ್ಡ ಟೂರ್ನಿಯಲ್ಲಿ ನಾನು ಚೆನ್ನಾಗಿ ಆಡಿದ್ದಕ್ಕೆ ಆ ದೇವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಮೈದಾನಕ್ಕಿಳಿಯುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ದೀರ್ಘ ಸಮಯದ ಕಾಲ ಕ್ರೀಸ್‌ನಲ್ಲಿದ್ದ ರನ್ ಗಳಿಸಬೇಕು ಅಂದುಕೊಂಡೇ ಮೈದಾನಕ್ಕಿಳಿದೆ. ನನ್ನ ದೇಶದ ಗೆಲುವಿನ ನನ್ನಿಂದ ಕಿರುಕಾಣಿಕೆ ನೀಡಿದ್ದು, ಧನ್ಯತಾಭಾವ ಮೂಡಿಸುತ್ತಿದೆ ಎಂದು' ಇಬ್ರಾಹಿಂ ಜದ್ರಾನ್ ತಿಳಿಸಿದ್ದಾರೆ.
ಪಾಕ್ ಬಗ್ಗುಬಡಿದ ಆಫ್ಘಾನ್: ಎಕೆ-47ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಫ್ಯಾನ್ಸ್
ಇನ್ನು ಇದೇ ವೇಳೆ ತಮ್ಮ ಈ ಪ್ರದರ್ಶನದ ಹಿಂದೆ ರೆಹಮನುಲ್ಲಾ ಗುರ್ಬಾಜ್ ಅವರ ಸಹಕಾರವನ್ನು ಜದ್ರಾನ್ ಸ್ಮರಿಸಿಕೊಂಡಿದ್ದಾರೆ. "ಸಾಕಷ್ಟು ಬಾರಿ ನಾನು ಹಾಗೂ ಗುರ್ಬಾಜ್ ದೊಡ್ಡ ಇನಿಂಗ್ಸ್ ಜತೆಯಾಟವಾಡಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ನಾವು ಅಂಡರ್ 16 ಹಂತದಿಂದಲೂ ಒಟ್ಟಾಗಿಯೇ ಹಲವು ಪಂದ್ಯಗಳನ್ನು ಆಡಿದ್ದೇವೆ. ಅವರೊಬ್ಬ ಒಳ್ಳೆಯ ಮೋಟಿವೇಟರ್" ಎಂದು ಜದ್ರಾನ್ ಹೇಳಿದ್ದಾರೆ.
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಇಲ್ಲಿನ ಚೆಪಾಕ್ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಅಬ್ದುಲ್ ಶಫೀಕ್(58), ನಾಯಕ ಬಾಬರ್ ಅಜಂ(74) ಬಾರಿಸಿದ ಸಮಯೋಚಿತ ಅರ್ಧಶತಕ, ಶದಾಬ್ ಖಾನ್(40) ಹಾಗೂ ಇಫ್ತಿಕಾರ್ ಅಹಮ್ಮದ್(40) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು 282 ರನ್ ಕಲೆಹಾಕಿತು.
ಪಾಕ್ ವಿರುದ್ದ ಆಫ್ಘಾನಿಸ್ತಾನ ಗೆಲುವು ಸಂಭ್ರಮಿಸಿದ ಭಾರತ, ರಶೀದ್ - ಇರ್ಫಾನ್ ಭರ್ಜರಿ ಸ್ಟೆಪ್ಸ್!
ಪಾಕಿಸ್ತಾನ ಎದುರು ಕೆಚ್ಚೆದೆಯ ಪ್ರದರ್ಶನ ತೋರಿದ ಜದ್ರಾನ್, 113 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 87 ರನ್ ಸಿಡಿಸಿದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. "ಈ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು, ತಾವು ಪಾಕಿಸ್ತಾನದಿಂದ ಆಫ್ಘಾನಿಸ್ತಾನಕ್ಕೆ ಗಡಿಪಾರಾದ ನಮ್ಮ ಸಹೋದರರಿಗೆ ಅರ್ಪಿಸುತ್ತಿದ್ದೇನೆ" ಎಂದು ಹೇಳುವ ಮೂಲಕ ಪಾಕಿಸ್ತಾನದ ಸೋಲಿನ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ.