ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗಂಭೀರ್ ವಿರುದ್ದ ಟೀಕೆ ಐಪಿಎಲ್‌ನಲ್ಲಿ ಕೆಲಸ ಮಾಡಿ ಸಂಪಾದನೆ ಮಾಡುವುದೇಕೆ? ಟೀಕೆಗೆ ಉತ್ತರಿಸಿದ ಗಂಭೀರ್, ಪ್ರತಿ ವರ್ಷ ಜನರಿಗಾಗಿ 2.75 ಕೋಟಿ ರೂ ಖರ್ಚು
ನವದೆಹಲಿ(ಜೂ.05): ಪ್ರತಿ ತಿಂಗಳು 5,000 ಮಂದಿಗೆ ಊಟ ಹಾಕುತ್ತೇನೆ. ಇದಕ್ಕಾಗಿ ಪ್ರತಿ ವರ್ಷ 2.75 ಕೋಟಿ ರೂಪಾಯಿ ಖರ್ಚು ಮಾಡುತ್ತೇನೆ. ಇದು ಸರ್ಕಾರದ ಹಣವಲ್ಲ, ಬದಲಿಗೆ ನನ್ನ ಸ್ವಂತ ಹಣ. ಇದಕ್ಕಾಗಿ ಐಪಿಎಲ್ ಟೂರ್ನಿಯಲ್ಲೂ ಕೆಲಸ ಮಾಡುತ್ತೇನೆ ಎಂದು ದೆಹಲಿ ಸಂಸದ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕೆಗೆ ಉತ್ತರ ನೀಡಿದ್ದಾರೆ.
ನೇರ ನುಡಿಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಹೀಗಾಗಿ ಹಲವು ಬಾರಿ ಟೀಕೆಗೂ ಒಳಗಾಗಿದ್ದಾರೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಗಂಭೀರ್ ವಿರುದ್ಧ ಟೀಕೆಗಳು ಕೇಳಿಬಂದಿದೆ. ಸಕ್ರೀಯ ರಾಜಕಾರಣಿಯಾಗಿ, ದೆಹಲಿ ಸಂಸದನಾಗಿರುವ ಗಂಭೀರ್, ಐಪಿಎಲ್ ಮೂಲಕ ಆದಾಯಗಳಿಸುತ್ತಿರುವುದೇಕೆ ಎಂಬ ಪ್ರಶ್ನೆಗಳು ಎದ್ದಿತ್ತು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲೂ ಇದೇ ಪ್ರಶ್ನೆಯನ್ನು ಗಂಭೀರ್‌ಗೆ ಕೇಳಲಾಗಿತ್ತು. ಇದಕ್ಕೆ ಗಂಭೀರ್ ತಮ್ಮ ಖಡಕ್ ಉತ್ತರ ನೀಡಿದ್ದಾರೆ.
ಇದು ಫೋಟೋ ಶಾಪ್ ಖಂಡಿತ ಅಲ್ಲ, ಧೋನಿ-ಗಂಭೀರ್ ಸಂಗಮಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ..!
ನಾನು ಯಾಕೆ ಐಪಿಎಲ್ ಕಮೆಂಟ್ರಿ, ಮೆಂಟರ್ ಆಗಿ ಕೆಲಸ ಮಾಡುತ್ತೇನೆ ಎಂದು ಹಲವರು ಪ್ರಶ್ನೆ ಕೇಳುತ್ತಲೇ ಇದ್ದಾರೆ. ನಾನು ಪ್ರತಿ ತಿಂಗಳು 5,000 ಮಂದಿಗೆ ಆಹಾರ ನೀಡುತ್ತಿದ್ದೇನೆ. ಇದಕ್ಕಾಗಿ ಪ್ರತಿ ತಿಂಗಳು 25 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ವಾರ್ಷಿಕವಾಗಿ 2.75 ಕೋಟಿ ರೂಪಾಯಿ ಮೀಸಲಿಡಬೇಕು. ಇನ್ನು 25 ಲಕ್ಷ ರೂಪಾಯಿಯಲ್ಲಿ ಲೈಬ್ರರಿ ನಿರ್ಮಿಸಿದ್ದೇನೆ. ಈ ಹಣ ಸಂಸದ ನಿಧಿಯಿಂದ, ಸರ್ಕಾರದಿಂದ ಬಳಕೆ ಮಾಡುತ್ತಿಲ್ಲ. ಇತ್ತ ನನ್ನ ಮನೆಯಲ್ಲಿ ಹಣ ಉತ್ಪತ್ತಿ ಮಾಡುವ ಯಾವುದೇ ಮರಗಳಿಲ್ಲ. ಹೀಗಾಗಿ ಐಪಿಎಲ್ ಟೂರ್ನಿಯಲ್ಲೂ ಕೆಲಸ ಮಾಡುತ್ತೇನೆ. ಬಂದ ಆದಾಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕೆಲಸ ಮಾಡಿ ಆದಾಯಗಳಿಸುತ್ತಿರುವನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ನಾನು ಮಾಡುಲ ಕೆಲಸದಲ್ಲಿ ತೃಪ್ತಿ ಕಂಡಿದ್ದೇನೆ. ಬಡವರಿಗೆ, ನಿರ್ಗತಿಕರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇದೆಲ್ಲದಕ್ಕೂ ಹಣ ಬೇಕು. ಇದನ್ನು ಸರ್ಕಾರದ ಖಜಾನೆಯಿಂದ ಪಡೆಯುತ್ತಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ನಿರ್ಗತಿಕರು, ಬಡವರಿಗೆ ಗೌತಮ್ ಗಂಭೀರ್ ಜನ್ ರಸೋಯಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇಲ್ಲಿ ಹೊಟ್ಟೆ ತುಂಬಾ ಊಟ ಮಾಡಲು ಕೇವಲ 1 ರೂಪಾಯಿ ಮಾತ್ರ. ಅತ್ಯುತ್ತಮ ಪೋಷಕಾಂಶದ ಆಹಾರವನ್ನೇ ನೀಡುತ್ತಿದ್ದಾರೆ. ಇನ್ನು ಹುತಾತ್ಮರಾದ ಹಲವು ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಗಂಭೀರ್ ಹೊತ್ತುಕೊಂಡಿದ್ದಾರೆ.
Delhi Policeರಿಂದ ಏನೂ ಮಾಡೋಕಾಗಲ್ಲ: ಗೌತಮ್ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ ಇ-ಮೇಲ್!
2022ರ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರು. ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದ್ಲಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿತ್ತು.
ಸ್ಟಾರ್ ಸ್ಪೋರ್ಸ್ಟ್ ವಾಹಿನಿಯಲ್ಲಿ ಗೌತಮ್ ಗಂಭೀರ್ ವೀಕ್ಷಕ ವಿವರಣೆಗಾರ ಹಾಗೂ ಕ್ರಿಕೆಟ್ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಾರೆ. ಹಲವು ಸಾಮಾಜಿಕ ಕಾರ್ಯಗಳಲ್ಲು ಗಂಭೀರ್ ತೊಡಗಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಗೌತಮ್ ಗಂಭೀರ್ ಭರ್ಜರಿ ಗೆಲುವು ದಾಖಲಿಸಿದ್ದರು.
