ಚಿಕಾಗೋ(ಆ.17): ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿದ ಅಪ್ಪಟ ಎಂ.ಎಸ್.ಧೋನಿ ಅಭಿಮಾನಿ ಮೊಹಮ್ಮದ್ ಬಶೀರ್ ಬೊಜೈ ಅಂದರೆ ಧೋನಿಗೂ ಅಚ್ಚು ಮೆಚ್ಚು. ಹಲವು ಭಾರಿ ಚಾಚಾಗೆ ಸ್ವತಃ ಧೋನಿಯೇ ಪಂದ್ಯದ ಟಿಕೆಟ್ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಚಾಚಾ ಜನಪ್ರಿಯರಾಗಿದ್ದಾರೆ. ಭಾರತ ಪಾಕಿಸ್ತಾನ ಪಂದ್ಯದಲ್ಲಿ ಚಾಚಾ ಬೆಂಬಲ ಮಾತ್ರ ಧೋನಿಗೆ ಸಿಗುತ್ತಿತ್ತು. ಇದರಿಂದ ಪಾಕಿಸ್ತಾನ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದೀಗ ತನ್ನ ನೆಚ್ಚಿನ ಕ್ರಿಕೆಟಿಗ ಧೋನಿ ವಿದಾಯ ಹೇಳಿದ್ದಾರೆ ಎಂದು ತಿಳಿದಾಗ, ತಾನೂ ಕೂಡ ಕ್ರಿಕೆಟ್‌ಗಾಗಿ ಪ್ರಯಾಣ ಮಾಡುವುದನ್ನೇ ನಿಲ್ಲಿಸಲು ಮುಂದಾಗಿದ್ದಾರೆ.

ಡಿಫರೆಂಟ್ ಧೋನಿ.. ದಿಢೀರ್ ವಿದಾಯಕ್ಕೂ ಹೆಸರುವಾಸಿ..!

ಟೀಂ ಇಂಡಿಯಾ ಎಲ್ಲೇ ಪ್ರವಾಸ ಹೋದರೂ ಚಾಚಾ ಅಲ್ಲಿರುತ್ತಾರೆ. ಇದೀಗ ಧೋನಿ ವಿದಾಯ ಹೇಳಿದ ಮೇಲೆ ಪಂದ್ಯ ವೀಕ್ಷಿಸಲು ಇನ್ನೇನಿದೆ. ನಾನೂ ಕೂಡ ಕ್ರಿಕೆಟ್ ಪ್ರಯಾಣ ನಿಲ್ಲಿಸುವ ಯೋಚನೆಯಲ್ಲಿದ್ದೇನೆ ಎಂದಿದ್ದಾರೆ. 

ಧೋನಿ ಬ್ಯಾಟಿಂಗ್ ಬೆನ್ನೆಲುಬು, ವಿಕೆಟ್ ಹಿಂದಿನ ಮಾಂತ್ರಿಕ..!.

ಎಲ್ಲಾ ದಿಗ್ಗಜ ಕ್ರಿಕೆಟಿಗರೂ ಒಂದು ದಿನ ವಿದಾಯ ಹೇಳುತ್ತಾರೆ. ಆದರೆ ಧೋನಿ ವಿದಾಯ ಮಾತ್ರ ಇನ್ನಿಲ್ಲದಂತೆ ಕಾಡುತ್ತಿದೆ. ಧೋನಿ ಅತ್ಯುತ್ತಮ ವಿದಾಯದ ಪಂದ್ಯ ಬೇಕಿತ್ತು. ಆದರೆ ಧೋನಿ ಅದನ್ನೂ ಮೀರಿಸಿದ ವ್ಯಕ್ತಿತ್ವ ಎಂದು ಚಾಚಾ ಹೇಳಿದ್ದಾರೆ.

ಧೋನಿ ಜೊತೆಗನ ಸ್ಮರಣೀಯ ಕ್ಷಣಗಳನ್ನೂ ಚಾಚಾ ಹಂಚಿಕೊಂಡಿದ್ದಾರೆ. 2011ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಯಾರೂ ಮೆರೆಯಲು ಸಾಧ್ಯವಿಲ್ಲ. ಮೊಹಾಲಿಯಲ್ಲಿ ನಡೆದ ಭಾರತ ಪಾಕಿಸ್ತಾನ ಪಂದ್ಯ ಟಿಕೆಟ್ ಸಿಗುವುದು ದೂರದ ಮಾತು. ವಿಶ್ವಕಪ್ ಪಂದ್ಯ, ಭಾರತದಲ್ಲಿ ಆಯೋಜನೆ, ಇಂಡೋ-ಪಾಕ್ ಫೈಟ್ ಅಂದರೆ ಟಿಕೆಟ್ ಎಲ್ಲಿ ಸಿಗುತ್ತೆ. ಆದರೆ ಧೋನಿ ನನಗೆ ಟಿಕೆಟ್ ಕೊಟ್ಟಿದ್ದರು. ಹೀಗಾಗಿ ನಾನು ಮೊಹಾಲಿಗೆ ಬಂದು ಪಂದ್ಯ ನೋಡಿದ್ದೆ. ಜೊತೆಗೆ ಧೋನಿಗೆ ಬೆಂಬಲ ನೀಡಿದ್ದೆ ಎಂದು ಚಾಚಾ ಹಳೇ ನೆನಪನ್ನು ಬಿಚ್ಚಿಟ್ಟಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ನಾನು ರಾಂಚಿಗೆ ತೆರಳಿ ಧೋನಿಗೆ ಮನಗೆ ಭೇಟಿ ನೀಡಬೇಕು. ಧೋನಿಯನ್ನು ಭೇಟಿಯಾಗಬೇಕು ಎಂದು ಚಾಚಾ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಧೋನಿ ನೋಡಲು ನಾನು ಪ್ರಯಾಣ ಮಾಡಲು ಇಚ್ಚಿಸುತ್ತೇನೆ. ಆದರೆ ನನ್ನು ಆರೋಗ್ಯ ಸ್ಥಿತಿ ಹಾಗೂ ಪ್ರೇಕ್ಷಕರ ನಿರ್ಭಂಧ, ಪ್ರಯಾಣಕ್ಕೆ ಅನೂಕಲರ ವಾತಾವರಣವಿಲ್ಲ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ರಾಂಚಿಗೆ ತೆರಳುತ್ತೇನೆ ಎಂದು ಚಾಚಾ ಹೇಳಿದ್ದಾರೆ.