Asianet Suvarna News Asianet Suvarna News

'ಯಾರ ಕಾಲಿಗೂ ಬೀಳಲ್ಲ ಎಂದು ಶಪಥ ಮಾಡಿದ್ದೆ': ಜೀವನದ ಕಹಿ ಘಟನೆ ಬಿಚ್ಚಿಟ್ಟ ಟೀಂ ಇಂಡಿಯಾ ವಿಶ್ವಕಪ್ ಹೀರೋ

ಐಪಿಎಲ್ ಮಾತ್ರವಲ್ಲ ಭಾರತ ಕ್ರಿಕೆಟ್ ತಂಡಕ್ಕೂ ಗೌತಮ್ ಗಂಭೀರ್ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. 2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು.

I Did Not Touch Selector Feet So Got Rejected Gautam Gambhir Mega Reveal On Career kvn
Author
First Published May 21, 2024, 5:59 PM IST

ಅಹಮದಾಬಾದ್‌: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮೆಂಟರ್ ಆಗಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಮೊದಲ ಕ್ವಾಲಿಫೈಯರ್ ಆಡಲು ಸಜ್ಜಾಗಿದೆ. ಇನ್ನು ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿಯೇ ಕೋಲ್ಕತಾ ನೈಟ್ ರೈಡರ್ಸ್ ತಂಡವು ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತೇ ಇದೆ.

ಐಪಿಎಲ್ ಮಾತ್ರವಲ್ಲ ಭಾರತ ಕ್ರಿಕೆಟ್ ತಂಡಕ್ಕೂ ಗೌತಮ್ ಗಂಭೀರ್ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. 2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಗೌತಮ್ ಗಂಭೀರ್, ತಾವು ಬಾಲ್ಯದ ದಿನಗಳಲ್ಲಿ ವಯೋಮಿತಿ ಕ್ರಿಕೆಟ್ ಟೂರ್ನಮೆಂಟ್‌ ಆಯ್ಕೆಯ ವೇಳೆ ಅನುಭವಿಸಿದ್ದ ಸವಾಲುಗಳನ್ನು ಇದೀಗ ಮೆಲುಕು ಹಾಕಿದ್ದಾರೆ.

I Did Not Touch Selector Feet So Got Rejected Gautam Gambhir Mega Reveal On Career kvn

ರಾಜಸ್ಥಾನ ರಾಯಲ್ಸ್ ಎದುರಿನ IPL ಎಲಿಮಿನೇಟರ್ ಪಂದ್ಯಕ್ಕೆ ಬಲಿಷ್ಠ RCB ಸಂಭಾವ್ಯ ತಂಡ ಪ್ರಕಟ..!

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. "ನನ್ನ ಆರಂಭಿಕ ಕ್ರಿಕೆಟ್ ಜೀವನದಲ್ಲಿ, ಬಹುಶಃ 12 ಅಥವಾ 13ನೇ ವರ್ಷದವನಿದ್ದಾಗ ನಾನು 14 ವರ್ಷದೊಳಗಿನ ವಯೋಮಿತಿ ಕ್ರಿಕೆಟ್ ಟೂರ್ನಿಗೆ ಸೆಲೆಕ್ಟ್ ಆಗಲಿಲ್ಲ. ಯಾಕೆಂದರೆ ನಾನು ಸೆಲೆಕ್ಟರ್ ಕಾಲಿಗೆ ಬೀಳಲಿಲ್ಲ. ನಾನು ನನ್ನಲ್ಲೇ ಅಂದೇ ಶಪಥ ಮಾಡಿದೆ, ನಾನು ಇನ್ನು ಯಾವತ್ತೂ ಯಾರ ಕಾಲಿಗೂ ಬೀಳಬಾರದೆಂದು. ಅದೇ ರೀತಿ ನಾನು ಕೂಡಾ ಯಾರೂ ನನ್ನ ಕಾಲಿಗೆ ಬೀಳಿಸಿಕೊಳ್ಳಬಾರದೆಂದು ತೀರ್ಮಾನಿಸಿದೆ" ಎಂದು ಎಡಗೈ ಬ್ಯಾಟರ್ ಗೌತಿ ಹೇಳಿದ್ದಾರೆ.

RCB ಗೆ ಚೊಚ್ಚಲ IPL ಕಪ್ ಗೆಲ್ಲಿಸಲು ಪಣತೊಟ್ಟು ಮದುವೆಯನ್ನೇ ಮುಂದೂಡಿದ ರಜತ್ ಪಾಟೀದಾರ್..! ಸೆಲ್ಯೂಟ್
 
"ನನಗೆ ಇನ್ನೂ ನೆನಪಿದೆ, ಅಂಡರ್-16, ಅಂಡರ್-19, ರಣಜಿ ಟ್ರೋಫಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನ ಆರಂಭಿಕ ದಿನಗಳಲ್ಲಿ ನಾನು ವೈಪಲ್ಯ ಅನುಭವಿಸಿದಾಗ, ಜನರು ನೀವೇನು ಬಿಡಿ, ಒಳ್ಳೆಯ ಸ್ಥಿತಿವಂತ ಕುಟುಂಬದಿಂದ ಬಂದಿದ್ದೀರ. ನೀವು ಕ್ರಿಕೆಟ್ ಆಡಿಯೇ ಬದುಕು ಕಟ್ಟಿಕೊಳ್ಳಬೇಕು ಎಂದೇನಿಲ್ಲ. ನಿಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ. ಬೇಕಿದ್ದರೇ ನೀವು ಕ್ರಿಕೆಟ್ ಬಿಟ್ಟು ನಿಮ್ಮ ತಂದೆಯ ಜತೆ ಬ್ಯುಸಿನೆಸ್ ಮಾಡಬಹುದು ಎಂದೆಲ್ಲ ಹೇಳುತ್ತಿದ್ದರು" ಎಂದು ಗಂಭೀರ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
 

Latest Videos
Follow Us:
Download App:
  • android
  • ios