Asianet Suvarna News Asianet Suvarna News

2025ರ ಐಪಿಎಲ್‌ ಟೂರ್ನಿಗೂ ಮುನ್ನ ಒಂದು ತಂಡಕ್ಕೆ ಎಷ್ಟು ರೀಟೈನ್‌ಗೆ ಅವಕಾಶ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

2024ರ ಐಪಿಎಲ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಇದೀಗ 2025ರ ಐಪಿಎಲ್ ಟೂರ್ನಿಯತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ಬಿಸಿಸಿಐ ಆಡಳಿತ ಮಂಡಳಿಯು ಒಂದು ಫ್ರಾಂಚೈಸಿಗೆ ಎಷ್ಟು ಜನ ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ

How Many Retentions Will Be Allowed Ahead Of IPL 2025 Auction Here is What We Know kvn
Author
First Published Jun 2, 2024, 5:56 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮಣಿಸಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

2024ರ ಐಪಿಎಲ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಇದೀಗ 2025ರ ಐಪಿಎಲ್ ಟೂರ್ನಿಯತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ಬಿಸಿಸಿಐ ಆಡಳಿತ ಮಂಡಳಿಯು ಒಂದು ಫ್ರಾಂಚೈಸಿಗೆ ಎಷ್ಟು ಜನ ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ

ಇಲ್ಲಿಯವರೆಗಿನ ಐಪಿಎಲ್ ಆಟಗಾರರ ಮೆಗಾ ಹರಾಜಿಗೂ ಮುನ್ನ ಒಂದು ಫ್ರಾಂಚೈಸಿಯು ಗರಿಷ್ಠ 4 ಜನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಈ ನಾಲ್ವರು ಆಟಗಾರರನ್ನು ಇಟ್ಟುಕೊಂಡು ಬಲಿಷ್ಠ ತಂಡ ಕಟ್ಟಲು ಫ್ರಾಂಚೈಸಿಯು ಅವಕಾಶ ಮಾಡಿಕೊಟ್ಟಿತ್ತು. ಆದರೆ ಈ ಬಾರಿ ಕೆಲವು ಫ್ರಾಂಚೈಸಿಗಳು 4 ರೀಟೈನ್ ಬದಲಿಗೆ 8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಬಿಸಿಸಿಐ ಬಳಿ ಮನವಿ ಸಲ್ಲಿಸಿವೆ ಎಂದು ವರದಿಯಾಗಿದೆ 

3+1 ಸೂತ್ರ ಅಳವಡಿಸಲು ಮುಂದಾಯ್ತಾ ಬಿಸಿಸಿಐ?

ಹೌದು, ಇತ್ತೀಚಿಗಿನ ಕೆಲವು ಮಾಧ್ಯಮಗಳ ವರದಿಯ ಪ್ರಕಾರ, ಬಿಸಿಸಿಐ, ಮೆಗಾ ಹರಾಜಿಗೂ ಮುನ್ನ ಹಾಲಿ ಇರುವ 3+1 ರೀಟೈನ್‌ಗೆ ಅವಕಾಶ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಅಂದರೆ ಮೂವರು ಆಟಗಾರರನ್ನು ಮೊದಲಿಗೆ ರೀಟೈನ್ ಮಾಡಿಕೊಳ್ಳುವುದು ಹಾಗೂ ಒಂದು ರೈಟ್ ಟು ಮ್ಯಾಚ್ ಕಾರ್ಡ್(RTM Card) ಬಳಕೆಗೆ ಅವಕಾಶ ನೀಡಿದೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ 2025ರ ಐಪಿಎಲ್ ಟೂರ್ನಿಗೆ ಇನ್ನೂ 10 ತಿಂಗಳು ಕಾಲಾವಕಾಶ ಇದ್ದರೂ ಈಗಿನಿಂದಲೇ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಸಿದ್ದತೆಗಳು ಆರಂಭವಾಗಿವೆ.
 

Latest Videos
Follow Us:
Download App:
  • android
  • ios