ನೀ ಎಲ್ಲೋ ಇರ್ಬೇಕಿತ್ತು ಗುರು... ಪೊಲೀಸ್ ಪೇದೆಯ ಸೂಪರ್ ಬೌಲಿಂಗ್‌ಗೆ ಕ್ಲೀನ್‌ಬೌಲ್ಡ್ ಆದ ನೋಡುಗರು
ಈಗ ಪೊಲೀಸ್ ಪೇದೆಯೊಬ್ಬರ ಸೂಪರ್ ಬೌಲಿಂಗ್‌ನ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಇವರೆಲ್ಲೋ ಇರಬೇಕಿತ್ತು ಎಂದು ಉದ್ಘರಿಸುತ್ತಿದ್ದಾರೆ.
ಜೈಸಲ್ಮೇರ್: ನಮ್ಮ ಭಾರತದ ಕ್ರೀಡಾಲೋಕದಲ್ಲಿ ಸಾವಿರಾರು ಜನ ಪ್ರತಿಭೆಗಳಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ಇರುವುದಿಲ್ಲ, ಕೆಲವರಿಗೆ ಪ್ರತಿಭೆ ಇರುತ್ತೆ ಅದೃಷ್ಟ ಇರಲ್ಲ, ಕೆಲವರಿಗೆ ಪ್ರತಿಭೆಯ ಜೊತೆ ಜೊತೆಗೆ ಅದೃಷ್ಟವೂ ಕೈಗೂಡುತ್ತದೆ. ಅಂತವರು ಕ್ರೀಡಾ ಲೋಕದಲ್ಲಿ ಸ್ಟಾರ್‌ಗಳಾಗಿ ಮಿಂಚುತ್ತಾರೆ. ಪ್ರಬಲ ಪೈಪೋಟಿ ಇರುವ ಕ್ರಿಕೆಟ್ ಲೋಕದಲ್ಲಿ ಮಿಂಚುವುದು ಅಷ್ಟೊಂದು ಸುಲಭವಲ್ಲ, ಹೀಗಾಗಿ ಪ್ರತಿಭೆ ಇರುವವರು ಕೂಡ ಅವಕಾಶ ಸಿಗದೇ ಕೇವಲ ಗಲ್ಲಿ ಕ್ರಿಕೆಟ್‌ಗೆ ಸೀಮಿತವಾಗಿ ಬಿಡುತ್ತಾರೆ. ಗಲ್ಲಿ ಕ್ರಿಕೆಟ್‌ನ ಕೆಲವು ಆಕರ್ಷಕ ಪ್ರತಿಭೆಗಳ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಪೊಲೀಸ್ ಪೇದೆಯೊಬ್ಬರ ಸೂಪರ್ ಬೌಲಿಂಗ್‌ನ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಇವರೆಲ್ಲೋ ಇರಬೇಕಿತ್ತು ಎಂದು ಉದ್ಘರಿಸುತ್ತಿದ್ದಾರೆ.
ಅಂದಹಾಗೆ ರಾಜಸ್ತಾನದ ಪೊಲೀಸ್ ಪೇದೆಯೊಬ್ಬರ ವೀಡಿಯೋ ಇದಾಗಿದ್ದು, ಮುಂಬೈ ಇಂಡಿಯನ್ಸ್ ಕೂಡ ಈ ರೋಚಕ ಬೌಲಿಂಗ್ ವೀಡಿಯೋಗೆ ಪ್ರತಿಕ್ರಿಯಿಸಿದೆ. ಈ ವೀಡಿಯೋದಲ್ಲಿರುವ ಪೊಲೀಸ್ ಪೇದೆಯ ಹೆಸರು ದುರ್ಜನ್ ಸಿಂಗ್, ರಾಜಸ್ಥಾನದ ಜೈಸಲ್ಮೇರ್ (Jaisalmer) ಬಳಿ ಬಾರ್ಡರ್ ಹೋಮ್ ಡಿಫೆನ್ಸ್ ಟೀಮ್‌ನಲ್ಲಿ ಅವರು ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಪಿಎಲ್ ಮುಂಬೈ ಇಂಡಿಯನ್ಸ್ ಟೀಮ್ ಈ ವೀಡಿಯೋವನ್ನು ಶೇರ್ ಮಾಡಿದೆ. ಹೆಲೋ ನಾವು ಫೈರಿ ಪೇಸ್ ಕೇಸ್ ಬಗ್ಗೆ ವರದಿ ಮಾಡಬೇಕೆಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಗಲ್ಲಿ ಕ್ರಿಕೆಟ್ ವೇಳೆ ಔಟ್ ಮಾಡಿದ್ದಕ್ಕೆ 14 ವರ್ಷದ ಬಾಲಕನ ಹೊಡೆದು ಕೊಂದ17 ವರ್ಷದ ತರುಣ
ಭಾರತೀಯರ ಕ್ರಿಕೆಟ್ ಪ್ರೇಮಕ್ಕೆ ಮಿತಿ ಎಂಬುದೇ ಇಲ್ಲ, ಗಲ್ಲಿ ಗಲ್ಲಿಗಳಲ್ಲಿ ಆಡಿ ಬೆಳೆದ ಪ್ರತಿಭೆಗಳು ಇಂದು ಐಪಿಎಲ್‌ನಂತಹ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೀಡಿಯೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ದುರ್ಜನ್ ಸಿಂಗ್ ವೇಗದ ಬೌಲಿಂಗ್‌ಗೆ ಬ್ಯಾಟರ್ ಕ್ಲೀನ್ ಬೌಲ್ಡ್ ಆಗಿದ್ದಾನೆ. ಅನೇಕರು ಆತನ ಸೂಪರ್ ಬೌಲಿಂಗ್‌ಗೆ ಹೃದಯದ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತ ಮಹಾರಾಷ್ಟ್ರ ಪೊಲೀಸ್ ತಂಡದವ ಎಂದು ಹೇಳಿದ್ದಾರೆ ಕೆಲವರು ಅಲ್ಲ ಆತ ರಾಜಸ್ಥಾನ್ ಪೊಲೀಸ್ ಎಂದು ಚರ್ಚೆ ಶುರು ಮಾಡಿದ್ದಾರೆ. ಬಹುಶಃ ಈತ ತನ್ನ ಬಾಲ್ಯದಲ್ಲಿ ಪಕ್ಕ ಕ್ರಿಕೆಟರ್ ಆಗುವ ಕನಸು ಕಂಡಿರುತ್ತಾನೆ ಆದರೆ ಬದುಕಿನ ಜವಾಬ್ದಾರಿಗಳು ಆತನನ್ನು ಬೇರೆಡೆ ಸೆಳೆದಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ತಮ್ಮ ಸೂಪರ್ ಎನಿಸುವ ಕ್ರಿಕೆಟ್ ಪ್ರತಿಭೆಯಿಂದಾಗಿ ದುರ್ಜನ್ ಸಿಂಗ್ (Durjan Singh) ವೀಡಿಯೋ ಫುಲ್ ವೈರಲ್ ಆಗಿದೆ. ಜುಲೈ 31 ರಂದು ವೈರಲ್ ಆದ ಈ ವೀಡಿಯೋವನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಬೆಂಗಳೂರಿನ ಗಲ್ಲಿ ಕ್ರಿಕೆಟ್‌ಗೆ ಸಂಸ್ಕೃತದಲ್ಲಿ ಕಮೆಂಟರಿ, ಸಂಚಲನ ಸೃಷ್ಟಿಸಿದ ವೈರಲ್ ವಿಡಿಯೋ!
ಸ್ಥಳೀಯ ರಾಜಕಾರಣಿ ರವೀಂದ್ರ ಭಟಿ (Ravindar Bhati) ಅವರು ತಮ್ಮ ಪೋಸ್ಟೊಂದರಲ್ಲಿ ಈ ದುರ್ಜನ್ ಸಿಂಗ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅವರು ಈ ವೀಡಿಯೋವನ್ನು ಕೆಲ ದಿನಗಳ ಹಿಂದೆ ಜೈಪುರದ ಸ್ವಾಮಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸೆರೆ ಹಿಡಿಯಲಾಗಿದೆ ಎಂದು ಬರೆದುಕೊಂಡಿದ್ದಾರೆ. ಆ ಸ್ಟೇಡಿಯಂನಲ್ಲಿ ಕ್ರಿಕೆಟ್ ನೆಟ್ ಪ್ರಾಕ್ಟೀಸ್ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ದುರ್ಜನ್ ಸಿಂಗ್‌ಗೆ ಬೌಲಿಂಗ್ ಮಾಡುವ ಮನಸಾಯ್ತು, ಆಗ ಸೆರೆಯಾದ ವೀಡಿಯೋ ಇದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ರಾಜಸ್ಥಾನದ (Rajasthan) ಥಾರ್ (Thar) ಪ್ರದೇಶದಲ್ಲಿ ಇಂತಹ ಸಾಕಷ್ಟು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿದ್ದು, ಸಂಪನ್ಮೂಲದ ಕೊರತೆಯಿಂದಾಗಿ ಅವರಿಗೆ ವೇದಿಕೆ ಸಿಗುತ್ತಿಲ್ಲ ಎಂದೂ ಅವರು ಬರೆದುಕೊಂಡಿದ್ದಾರೆ.