ಹೇಜಲ್‌ ಕೀಚ್‌ಗೆ ಸುಂದರ ಗಿಫ್ಟ್ ನೀಡಿದ ಕ್ರಿಕೆಟಿಗ ಯುವರಾಜ್ ಸಿಂಗ್ಮೊದಲ ಮಗುವಿನ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡ ಹೇಜಲ್ ಕೀಚ್2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ

ಮುಂಬೈ(ಮಾ.01): ಹೇಜಲ್‌ ಕೀಚ್ ಅವರ 36ನೇ ಹುಟ್ಟುಹಬ್ಬನ್ನು ಮತ್ತಷ್ಟು ಸ್ಮರಣೀಯವಾಗಿಸುವಲ್ಲಿ ಪತಿ ಯುವರಾಜ್ ಸಿಂಗ್ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಪತಿ ಯುವರಾಜ್ ಸಿಂಗ್ ಅವರಿಂದ ತಮಗೆ ಸಿಕ್ಕ ಉಡುಗೊರೆಯನ್ನು ಬಾಲಿವುಡ್‌ ನಟಿ ಹೇಜಲ್‌ ಕೀಚ್‌ ಸಾಮಾಜಿಕ ಜಾಲತಾಣದ ಮೂಲಕ ಅನಾವರಣ ಮಾಡಿದ್ದಾರೆ.

ತಮಗೆ ಸಿಕ್ಕ ಫೋಟೋಗಳ ಕೊಲ್ಯಾಜ್‌ ಹಾಗೂ ಬೊಕ್ಕೆಯ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಹೇಜಲ್‌ ಕೀಚ್, " ಥ್ಯಾಂಕ್ಯೂ ಪತಿದೇವ, ನೀವು ನನಗೆ ಮಾಡಿದ ಅತ್ಯುತ್ತಮ ಕಾರ್ಡ್‌ ಇದು. ಈ ಹೂವುಗಳನ್ನು ನೀಡಿದ್ದಕ್ಕೆ ಥ್ಯಾಂಕ್ಯೂ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಯುವರಾಜ್ ಸಿಂಗ್ ಕೂಡಾ, ತಮ್ಮ ಪತ್ನಿಗೆ ವಿಶೇಷ ಸಂದೇಶದ ಮೂಲಕ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಓರಿಯನ್‌ ತಾಯಿಯಾಗಿ ಮೊದಲ ಹುಟ್ಟುಹಬ್ಬ ಆಚರಿಸುತ್ತಿರುವುದು ನಿಮಗಷ್ಟೇ ಅಲ್ಲ ನನಗೂ ಅಷ್ಟೇ ವಿಶೇಷವಾದ ದಿನ ಹೇಜಲ್. ಓರಿಯನ್‌ಗೆ ನಿನಗಿಂತ ಒಳ್ಳೆಯ ತಾಯಿ ಸಿಗಲಾರಳು. ಹುಟ್ಟುಹಬ್ಬದ ಶುಭಾಶಯಗಳು ಹೇಜಲ್‌ ಕೀಚ್. ಮಗ ಓರಿ ಹಾಗೂ ಪತಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಯುವರಾಜ್ ಸಿಂಗ್ ಶುಭ ಕೋರಿದ್ದಾರೆ.

ಹೀಗಿತ್ತು ನೋಡಿ ಹೇಜಲ್‌ ಕೀಚ್ ಹಂಚಿಕೊಂಡ ಫೋಸ್ಟ್‌:

View post on Instagram

ಹೀಗಿತ್ತು ನೋಡಿ ಯುವರಾಜ್ ಸಿಂಗ್ ಪತ್ನಿಗೆ ಶುಭ ಕೋರಿದ ರೀತಿ:

View post on Instagram

ಬರ್ತ್‌ ಡೇ ಗರ್ಲ್‌ ಹೇಜಲ್ ಕೀಚ್, ಇದಷ್ಟೇ ಅಲ್ಲದೇ ತಾವು ಹಾಗೂ ತಮ್ಮ ಮಗ ಒರಿಯನ್ ತೋಳ ತೆಕ್ಕೆಯಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದು, "ಇದೇ ಸಮಯ, ಕಳೆದ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ದೇವರು ನನಗೆ ಸಣ್ಣ ಮಗುವಾದ ಓ ಅನ್ನು ಅತ್ಯುತ್ತಮ ಗಿಫ್ಟ್ ಆಗಿ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ.

View post on Instagram

ಹೇಜಲ್‌ ಕೀಚ್‌ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು 2016ರಲ್ಲಿ ವರಿಸಿದ್ದರು. ಕಳೆದ ವರ್ಷದ ಜನವರಿಯಲ್ಲಿ ಈ ಜೋಡಿಯು ಒರಿಯನ್ ಎನ್ನುವ ಮುದ್ದಾದ ಮಗನನ್ನು ತಮ್ಮ ಸುಂದರ ಕುಟುಂಬಕ್ಕೆ ಸ್ವಾಗತಿಸಿದ್ದರು.

ಹೇಜಲ್‌ ಕೀಚ್‌ ಈ ಮೊದಲು ಸಲ್ಮಾನ್ ಖಾನ್‌ ಹಾಗೂ ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಬಾಡಿಗಾರ್ಡ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜತೆಗೆ ತೆಲುಗು ಚಿತ್ರಗಳಾದ ಬಿಲ್ಲಾ, ಮ್ಯಾಕ್ಸಿಮಮ್ ಚಿತ್ರದಲ್ಲಿಯೂ ನಟಿಸಿ ಗಮನ ಸೆಳೆದಿದ್ದರು. ಇದಷ್ಟೇ ಅಲ್ಲದೇ ಹೇಜಲ್‌ ಕೀಚ್‌ ಏಳನೇ ಆವೃತ್ತಿಯ ಬಿಗ್‌ ಬಾಸ್‌ ಟಿವಿ ಶೋನಲ್ಲಿಯೂ ಭಾಗವಹಿಸಿದ್ದರು.