ಭಾರತದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಬಿಂದಾಸ್ ಆಗಿ ಹೋಳಿ ಆಚರಿಸಿ ಗಮನ ಸೆಳೆದಿದ್ದಾರೆ. ಅವರು ಮಕ್ಕಳೊಂದಿಗೆ ಕುಣಿದು ಕುಪ್ಪಳಿಸಿ ಬಣ್ಣ ಹಚ್ಚಿದ್ದಾರೆ. ಈ ಆಚರಣೆಯ ಬಗ್ಗೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಮಿ ಮತ್ತು ಹಸೀನ್ 2014ರಲ್ಲಿ ವಿವಾಹವಾಗಿ, ನಂತರ ವಿಚ್ಛೇದನ ಪಡೆದರು.

ಬೆಂಗಳೂರು: ಇಂದು ಭಾರತದಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಣ್ಣಗಳ ಹಬ್ಬವನ್ನು ಭಾರತದಲ್ಲಿ ಜಾತಿ-ಧರ್ಮಗಳನ್ನು ಮೀರಿ ಆಚರಿಸಲಾಗುತ್ತಿದೆ. ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಖುಷಿ ಖುಷಿಯಿಂದ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಇದೀಗ ಬಿಂದಾಸ್ ಆಗಿ ಹೋಳಿ ಹಬ್ಬ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹಸೀನ್ ಜಹಾನ್ ಹೋಳಿ ಹಬ್ಬ ಆಚರಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನವನ್ನೇ ಮೂಡಿಸಿದೆ. ಹೋಳಿ ಹಬ್ಬದ ಆಚರಣೆಯ ವೇಳೆಯಲ್ಲಿ ಹಸೀನ್ ಜಹಾನ್ ಮೈಚಳಿ ಬಿಟ್ಟು ಬಿಂದಾಸ್ ಆಗಿ ಡ್ಯಾನ್ಸ್ ಮಾಡುತ್ತಾ, ಮಕ್ಕಳಿಗೆ ಬಣ್ಣ ಬಳಿದಿದ್ದಾರೆ. ಈ ಸಂದರ್ಭದಲ್ಲಿ ಶಮಿ ಪುತ್ರಿಯೂ ಹಸೀನ್ ಜತೆ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಏಕಕಾಲದಲ್ಲಿ 3 ಮಾದರಿಯ ತಂಡ ಆಡಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದ ಆಸೀಸ್ ಮಾರಕ ವೇಗಿ!

ಹಸೀನ್ ಮೈ ಮೇಲೆ ಬಣ್ಣದ ಓಕುಳಿ: ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಸೀನ್ ಜಹಾನ್ ಮೈಮೇಲೆ ಗುಲಾಬಿ ಬಣ್ಣವು ಮೆತ್ತಲಾಗಿದೆ. ತಮ್ಮ ನೆರೆಹೊರೆಯವರ ಜತೆ ಹಸೀನ್ ಜಹಾನ್ ಬಿಂದಾಸ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.

View post on Instagram

ಹಸೀನ್ ಕಾಲೆಳೆದ ನೆಟ್ಟಿಗರು: ಇನ್ನು ಹಸೀನ್ ಜಹಾನ್ ಹೋಳಿ ಹಬ್ಬ ಆಚರಿಸುವುದರ ಬಗ್ಗೆ ನೆಟ್ಟಿಗರು ಇನ್‌ಸ್ಟಾಗ್ರಾಂನಲ್ಲಿ ಪರ ವಿರೋಧ ಚರ್ಚೆಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಹಸೀನ್ ಈ ರೀತಿ ಮಾಡುತ್ತಿರುವುದನ್ನು ನೋಡಿದರೆ, ಆಕೆಯನ್ನು ಕೈಬಿಟ್ಟಿದ್ದೇ ಒಳ್ಳೆಯದಾಯ್ತು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ವಿರಾಟ್ ಕೊಹ್ಲಿಯ ಐಪಿಎಲ್ 973 ರನ್ ದಾಖಲೆ ಈ ಐವರಲ್ಲಿ ಯಾರು ಮುರಿಯಬಹುದು?

ಹಸೀನ್ ಜಹಾನ್-ಮೊಹಮ್ಮದ್ ಶಮಿ ಸಂಬಂಧ:

ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್ ಅವರ ಮೊದಲ ಭೇಟಿಯು 2012ರ ಐಪಿಎಲ್ ವೇಳೆ ನಡೆಯಿತು. ಆಗ ಹಸೀನ್ ಜಹಾನ್ ಚಿಯರ್‌ ಲೀಡರ್ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದಾಗಿ ಕೆಲ ವರ್ಷಗಳ ಕಾಲ ಸಂಸಾರ ನಡೆಸಿದರು. ಆದರೆ ಕಳೆದ ಕೆಲ ವರ್ಷಗಳಿಂದ ಶಮಿ ಹಾಗೂ ಅವರ ಕುಟುಂಬದ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಸಾಕಷ್ಟು ಕಾನೂನು ಹೋರಾಟದ ಬಳಿಕ ವಿಚ್ಛೇದನ ಪಡೆದುಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿದ್ದ ಶಮಿ:

2023ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಗಾಯದ ಸಮಸ್ಯೆಯಿಂದ ಸ್ಪರ್ಧಾತ್ಮಕ ದೂರವೇ ಉಳಿದಿದ್ದರು. ಇನ್ನು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಕೂಡಿಕೊಂಡಿದ್ದರು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್ ಶಮಿ 5 ಪಂದ್ಯಗಳನ್ನಾಡಿ 9 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.