ಆತಿಥೇಯ ಶ್ರೀಲಂಕಾ ತಂಡವನ್ನು ಮೂರನೇ ಏಕದಿನ ಪಂದ್ಯದಲ್ಲಿ 39 ರನ್‌ಗಳಿಂದ ಸೋಲಿಸಿದ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0ಯಿಂದ ಜಯಿಸಿದೆ. ಆ ಮೂಲಕ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ಪಲ್ಲೆಕೆಲೆ (ಜುಲೈ 8): ಶ್ರೀಲಂಕಾ (Sri Lanka) ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ (ODI Match) 39 ರನ್‌ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ (India womens Cricket Team) ಸರಣಿಯನ್ನು 3-0ಯಲ್ಲಿ ಕ್ಲೀನ್‌ ಸ್ವೀಪ್‌ (Cleansweep) ಮಾಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ, ನಾಯಕಿ ಹರ್ಮನ್‌ಪ್ರೀತ್‌(75) ಮತ್ತು ಪೂಜಾ ವಸ್ತ್ರಾಕರ್‌(ಔಟಾಗದೆ 56)ರ ಅರ್ಧಶತಕಗಳ ನೆರವಿನಿಂದ 50 ಓವರಲ್ಲಿ 9 ವಿಕೆಟ್‌ಗೆ 255 ರನ್‌ ಕಲೆಹಾಕಿತು. 

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ, 47.3 ಓವರಲ್ಲಿ 216 ರನ್‌ಗೆ ಆಲೌಟ್‌ ಆಯಿತು. ನಿಲಾಕ್ಷಿ ಡಿ ಸಿಲ್ವಾ(ಔಟಾಗದೆ 48), ನಾಯಕಿ ಚಾಮರಿ ಅಟಪಟ್ಟು(44) ಹೋರಾಟ ಫಲ ನೀಡಲಿಲ್ಲ. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್‌ 36 ರನ್‌ಗೆ 3 ವಿಕೆಟ್‌ ಕಿತ್ತರು. ಟಿ20 ಸರಣಿಯನ್ನು ಭಾರತ 2-1ರಲ್ಲಿ ಗೆದ್ದಿತ್ತು.


ಮಲೇಷ್ಯಾ ಮಾಸ್ಟ​ರ್ಸ್: ಸಿಂಧು, ಪ್ರಣಯ್‌ ಕ್ವಾರ್ಟರ್‌ಗೆ ಪ್ರವೇಶ
ಕೌಲಾಲಂಪುರ:
ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಮಲೇಷ್ಯಾ ಮಾಸ್ಟ​ರ್‍ಸ್ ಟೂರ್ನಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಂಧು ಚೀನಾದ ಝಾಂಗ್‌ ಯೀ ವಿರುದ್ಧ 21-12, 21-10 ಗೇಮ್‌ಗಳಲ್ಲಿ ಜಯಿಸಿದರು. ಪ್ರಣಯ್‌ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಚೈನೀಸ್‌ ತೈಪೆಯ ತ್ಸು ವಾಂಗ್‌ ವಿರುದ್ಧ 21-19, 21-16 ಗೇಮ್‌ಗಳಲ್ಲಿ ಗೆದ್ದರು. ಇದೇ ವೇಳೆ ಸಾಯಿಪ್ರಣೀತ್‌, ಪಿ.ಕಶ್ಯಪ್‌ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರು.

ಕಾಮನ್ವೆಲ್ತ್‌ ಗೇಮ್ಸ್‌ ಸಿದ್ಧತೆ ಪರಿಶೀಲಿಸಿದ ಅನುರಾಗ್‌
ನವದೆಹಲಿ:
ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಗುರುವಾರ ಇಲ್ಲಿ ನಡೆದ ಮಿಷನ್‌ ಒಲಿಂಪಿಕ್‌ ಸೆಲ್‌(ಎಂಒಸಿ) ಸಭೆಯಲ್ಲಿ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತದ ಸಿದ್ಧತೆಯನ್ನು ಪರಿಶೀಲಿಸಿದರು. ಸಭೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ ಬಳಿಕ ಭಾರತದ ತರಬೇತಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಿದ್ಧತಾ ಶಿಬಿರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ‘ಕ್ರೀಡಾಪಟುಗಳ ತಯಾರಿ ಭರದಿಂದ ಸಾಗುತ್ತಿದೆ.

ಹಾರ್ದಿಕ್‌ ಪಾಂಡ್ಯ ಆಲ್ರೌಂಡ್ ಆಟ, ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 50 ರನ್‌ ಗೆಲುವು

ಒಲಿಂಪಿಕ್ಸ್‌ ನಂತರ ತರಬೇತಿ ಮತ್ತು ಸ್ಪರ್ಧೆಯ ವೇಗ ಹೆಚ್ಚಿಸಿರುವುದು ತುಂಬಾ ಖುಷಿ ತಂದಿದೆ. ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಯಶಸ್ಸನ್ನು ನಮ್ಮ ಅಥ್ಲೀಟ್‌ಗಳು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಮುಂದುವರಿಸುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾಜಿ ಲಾಂಗ್‌ ಜಂಪ್‌ ಪಟು ಅಂಜು ಬಾಬಿ ಜಾಜ್‌ರ್‍, ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿ ಪಟು ಯೋಗೇಶ್ವರ್‌ ದತ್‌ ಸೇರಿದಂತೆ ಹಲವರಿದ್ದರು.

Wimbledon 2022: ರೋಚಕವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್

ವಿಂಡೀಸ್‌ ಟಿ20 ಸರಣಿ ವಿರಾಟ್‌ಗೆ ವಿಶ್ರಾಂತಿ?
ನವದೆಹಲಿ:
ಈ ತಿಂಗಳಾಂತ್ಯದಲ್ಲಿ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್‌ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ವಿಂಡೀಸ್‌ ವಿರುದ್ಧ ಏಕದಿನ ಸರಣಿಗೆ ವಿಶ್ರಾಂತಿ ಪಡೆದಿರುವ ರೋಹಿತ್‌, ಪಂತ್‌, ಬೂಮ್ರಾ, ಹಾರ್ದಿಕ್‌ ಟಿ20 ಸರಣಿಗೆ ವಾಪಸಾಗಲಿದ್ದು, ಕೊಹ್ಲಿ ಮಾತ್ರ ತಮ್ಮನ್ನು ಆಯ್ಕೆಗೆ ಪರಿಗಣಿಸದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್‌ ವಿರುದ್ಧ ಟಿ20, ಏಕದಿನ ಸರಣಿ ಬಳಿಕ ಅವರು ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.