Asianet Suvarna News Asianet Suvarna News

Wimbledon 2022: ರೋಚಕವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್

* ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂನಲ್ಲಿ ಸೆಮಿಫೈನಲ್‌ಗೆ ನಡಾಲ್ ಲಗ್ಗೆ
* ಟೇಲರ್ ಫ್ರಿಡ್ಜ್‌ ಎದುರು ರೋಚಕ ಗೆಲುವು ಸಾಧಿಸುದ ಸ್ಪೇನ್ ಟೆನಿಸಿಗ
* 2010ರ ಬಳಿಕ ವಿಂಬಲ್ಡನ್ ಗೆಲ್ಲುವತ್ತ ನಡಾಲ್ ದಿಟ್ಟ ಹೆಜ್ಜೆ

Wimbledon 2022 Tennis Legend Rafael Nadal Overcomes Taylor Fritz In 5 Sets To Enter Semi Final kvn
Author
Bengaluru, First Published Jul 7, 2022, 9:42 AM IST

ಲಂಡನ್(ಜು.07): ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಟೇಲರ್ ಫ್ರಿಡ್ಜ್‌ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ರಾಫೆಲ್ ನಡಾಲ್ ಯಶಸ್ವಿಯಾಗಿದ್ದಾರೆ. ಎರಡನೇ ಶ್ರೇಯಾಂಕಿತ ನಡಾಲ್‌, ತಮ್ಮ ಟೆನಿಸ್ ವೃತ್ತಿಜೀವನದ ಮೂರನೇ ವಿಂಬಲ್ಡನ್‌ ಗ್ರ್ಯಾನ್ ಸ್ಲಾಂ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

ಬುಧವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯವು ಟೆನಿಸ್ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡಿತು. ಸುಮಾರು 4 ಗಂಟೆಗಳ ಕಾಲ ನಡೆದ ಕಾದಾಟದಲ್ಲಿ 3-6, 7-5, 3-6, 7-5,7-6(10/4) ಸೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ರಾಫೆಲ್ ನಡಾಲ್ (Rafael Nadal) ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯನ್ ಓಪನ್ (Australian Open) ಹಾಗೂ ಫ್ರೆಂಚ್ ಓಪನ್ (French Open) ಟ್ರೋಫಿ ಜಯಿಸಿರುವ ನಡಾಲ್‌, ಈ ಸೀಸನ್‌ನಲ್ಲಿ ಮೂರನೇ ಗ್ರ್ಯಾನ್‌ ಸ್ಲಾಂ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ರಾಫೆಲ್ ನಡಾಲ್‌, ಕೊನೆಯ ಬಾರಿಗೆ 2010ರಲ್ಲಿ ವಿಂಬಲ್ಡನ್‌ ಟ್ರೋಫಿಗೆ (Wimbledon) ಮುತ್ತಿಕ್ಕಿದ್ದರು.

2019ರ ಚಾಂಪಿಯನ್‌ ಸಿಮೋನಾ ಹಾಲೆಪ್‌ ಹಾಗೂ ವಿಶ್ವ ನಂ.3 ಟ್ಯುನೀಶಿಯಾದ ಒನ್ಸ್‌ ಜಬುರ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 16ನೇ ಶ್ರೇಯಾಂಕಿತೆ ರೊಮೇನಿಯಾದ ಹಾಲೆಪ್‌ ಬುಧವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ಅಮಂಡಾ ಅನಿಸಿಮೋವಾ ವಿರುದ್ಧ 6-2, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮತ್ತೊಂದೆಡೆ ಮಂಗಳವಾರ ಮೊದಲ ಕ್ವಾರ್ಟರ್‌ನಲ್ಲಿ ಜಬುರ್‌, ಚೆಕ್‌ ಗಣರಾಜ್ಯದ ಮರಿಯಾ ಬೌಜ್ಕೋವಾ ಎದುರು 3​-6, 6-​1, 6​-1 ಸೆಟ್‌ಗಳಿಂದ ಗೆದ್ದು, ಗ್ರ್ಯಾನ್‌ಸ್ಲಾಂ ಸೆಮೀಸ್‌ ತಲುಪಿದ ಮೊದಲ ಅರಬ್‌ ಆಟಗಾರ್ತಿ ಎನಿಸಿಕೊಂಡರು.

Wimbledon: ಜೋಕೋವಿಚ್ 11ನೇ ಬಾರಿಗೆ ವಿಂಬಲ್ಡನ್‌ ಸೆಮೀಸ್‌ಗೆ ಲಗ್ಗೆ

ಹಾಲೆಪ್‌ ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಎಲೆನಾ ರೈಬಕಿನಾ ವಿರುದ್ಧ ಸೆಣಸಾಡಲಿದ್ದಾರೆ. ಕಳೆದ ವರ್ಷ ಕ್ವಾರ್ಟರ್‌ನಲ್ಲಿ ಸೋತಿದ್ದ 23ರ ಎಲೆನಾ ಈ ಬಾರಿ ಕ್ವಾರ್ಟರ್‌ನಲ್ಲಿ ಆಸ್ಪ್ರೇಲಿಯಾದ ಆಲಾ ಟಾಮ್ಲನೋವಿಚ್‌ ವಿರುದ್ಧ ಜಯಿಸಿದರು. ಇನ್ನು ಜರ್ಮನಿಯವರೇ ಆದ ಜೂಲ್‌ ನೀಮಿಯರ್‌ ವಿರುದ್ಧ ಕ್ವಾರ್ಟರ್‌ನಲ್ಲಿ ಗೆದ್ದಿದ್ದ ವಿಶ್ವ ನಂ.103 ಟಾಟನ ಮರಿಯಾ ಅವರನ್ನು ಸೆಮೀಸ್‌ನಲ್ಲಿ ಜಬುರ್‌ ಎದುರಿಸಲಿದ್ದಾರೆ. ಈ ನಾಲ್ವರ ಪೈಕಿ ಹಾಲೆಪ್‌ ಮಾತ್ರ ಗ್ರ್ಯಾನ್‌ಸ್ಲಾಂ ಗೆದ್ದಿದ್ದು, ಉಳಿದ ಮೂವರೂ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ನಲ್ಲಿ ಆಡುತ್ತಿದ್ದಾರೆ.

ಮಲೇಷ್ಯಾ ಮಾಸ್ಟ​ರ್ಸ್‌: ಸಿಂಧು, ಪ್ರಣಯ್‌ ಶುಭಾರಂಭ

ಕೌಲಾಲಂಪುರ: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌, ಪಾರುಪಳ್ಳಿ ಕಶ್ಯಪ್‌ ಹಾಗೂ ಸಾಯಿ ಪ್ರಣೀತ್‌ ಮಲೇಷ್ಯಾ ಮಾಸ್ಟ​ರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು 21-​13, 17​-21, 21-​15 ಗೇಮ್‌ಗಳಿಂದ ಚೀನಾದ ಹೆ ಬಿಂಗ್‌ ಜಿಯಾವೊ ವಿರುದ್ಧ ಗೆಲುವು ಸಾಧಿಸಿದರು. 

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌, ಫ್ರಾನ್ಸ್‌ನ ಲೆವೆರೆಡ್ಜ್‌ ವಿರುದ್ಧ 21-19, 21-14ರಲ್ಲಿ ಗೆದ್ದರೆ, ಪ್ರಣೀತ್‌ 21-8, 21-9 ಗೇಮ್‌ಗಳಿಂದ ಗ್ವಾಟುಮಾಲಾದ ಕೆವಿನ್‌ ಕಾರ್ಡನ್‌ ವಿರುದ್ಧ ಗೆದ್ದರು. ಕಶ್ಯಪ್‌ ಇಂಡೋನೇಷ್ಯಾದ ಟಾಮಿ ಸುಗರ್ಟೊರನ್ನು ಸೋಲಿಸಿ 2ನೇ ಸುತ್ತು ತಲುಪಿದರು. ಆದರೆ ಸೈನಾ ಸೆಹ್ವಾಲ್‌, ಸಮೀರ್‌ ವರ್ಮಾ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.

Follow Us:
Download App:
  • android
  • ios