Asianet Suvarna News Asianet Suvarna News

ಇತಿಹಾಸ ಬರೆದ ಪಾಂಡ್ಯ ಬ್ರದರ್ಸ್‌: ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ..!

ನರೇಂದ್ರ ಮೋದಿ ಮೈದಾನದಲ್ಲಿ ಪಾಂಡ್ಯ ಬ್ರದರ್ಸ್‌ ಸವಾಲು
ಐಪಿಎಲ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಸಹೋದರರು ನಾಯಕರು
ಪಾಂಡ್ಯ ಬ್ರದರ್ಸ್‌ ಪಾಲಿಗಿದು ಭಾವನಾತ್ಮಕ ಕ್ಷಣ

Hardik Pandya Krunal Pandya Achieve Unique Feat In IPL 2023 kvn
Author
First Published May 7, 2023, 6:39 PM IST

ಅಹಮದಾಬಾದ್‌(ಮೇ.07): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 51ನೇ ಪಂದ್ಯವಾದ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ ನಡುವಿನ ಪಂದ್ಯವು ಹೊಸ ಇತಿಹಾಸ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಹೋದರರಿಬ್ಬರು ನಾಯಕರಾಗಿ ತಂಡವನ್ನು ಮುನ್ನಡೆಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಹೌದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದರೆ, ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಕೃನಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಿಂದಲೇ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಇನ್ನು ಗಾಯದ ಸಮಸ್ಯೆಯಿಂದಾಗಿ ಲಖನೌ ಸೂಪರ್ ಜೈಂಟ್ಸ್‌ ತಂಡದ ನಾಯಕ ಕೆ ಎಲ್ ರಾಹುಲ್, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಕೃನಾಲ್ ಪಾಂಡ್ಯ ಲಖನೌ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಲಖನೌ ತಂಡದ ನಾಯಕ ಕೃನಾಲ್ ಪಾಂಡ್ಯ, "ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ನಮ್ಮ ನಮ್ಮ ತಂಡಗಳನ್ನು ನಾವಿಬ್ಬರು ಮುನ್ನಡೆಸುತ್ತಿರುವುದು ನಿಜಕ್ಕೂ ಕನಸು ನನಸಾದ ಕ್ಷಣ. ನಮ್ಮದು ಒಳ್ಳೆಯ ಬ್ಯಾಟಿಂಗ್‌ ತಂಡ, ಹೀಗಾಗಿ ಗುಜರಾತ್ ನೀಡುವ ಸವಾಲು ಬೆನ್ನತ್ತಲು ರೆಡಿಯಿದ್ದೇವೆ. ನಾವು ಇಲ್ಲಿಯವರೆಗೆ ಒಳ್ಳೆಯ ಆಟವನ್ನು ಆಡಿದ್ದೇವೆ. ನಾವು ಅಂಕಪಟ್ಟಿಯಲ್ಲೂ ಒಳ್ಳೆಯ ಹಂತದಲ್ಲಿದ್ದೇವೆ. ನವೀನ್ ಉಲ್ ಹಕ್ ಬದಲಿಗೆ ಕ್ವಿಂಟನ್ ಡಿ ಕಾಕ್ ತಂಡ ಕೂಡಿಕೊಂಡಿದ್ದಾರೆ ಎಂದು ಕೃನಾಲ್ ಪಾಂಡ್ಯ ಹೇಳಿದರು 

'ನಮ್ಮ ತಂದೆ ಈಗ ಹೆಮ್ಮೆ ಪಡುತ್ತಿರಬಹುದು': ಸಹೋದರರ ಸವಾಲಿನ ಬಗ್ಗೆ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಮಾತು

ಟಾಸ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, "ನಾವೂ ಕೂಡಾ ಮೊದಲು ಬ್ಯಾಟ್ ಮಾಡಲು ಬಯಸಿದ್ದೆವು. ನಾನು ಅವರಿಗೆ ಹೇಳಿದ್ದೆ ಟಾಸ್ ಬಗ್ಗೆ ರಹಸ್ಯವಾಗಿಟ್ಟುಕೊ. ಸಹಜವಾಗಿಯೇ ಇದೊಂದು ರೀತಿಯ ಭಾವನಾತ್ಮಕ ದಿನ. ನನ್ನ ತಂದೆ ನಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿರಬಹುದು. ಅವರು ಈ ರೀತಿ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದರು. ನಮ್ಮ ಹುಡುಗರು ಈ ಪಂದ್ಯವನ್ನು ಗೆಲ್ಲಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ತಂಡಗಳು ಹೀಗಿವೆ ನೋಡಿ:

ಗುಜ​ರಾ​ತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್‌, ಹಾರ್ದಿಕ್‌ ಪಾಂಡ್ಯ(ನಾಯಕ), ವಿಜಯ್ ಶಂಕರ್‌, ಡೇವಿಡ್ ಮಿಲ್ಲರ್‌, ಅಭಿ​ನವ್‌ ಮನೋಹರ್, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್, ನೂರ್‌ ಅಹಮ್ಮದ್, ಮೊಹ್ಮಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಮೋಹಿತ್‌ ಶರ್ಮಾ.

ಲಖನೌ ಸೂಪರ್ ಜೈಂಟ್ಸ್‌: ಕೈಲ್ ಮೇಯರ್ಸ್‌, ಕ್ವಿಂಟನ್ ಡಿ ಕಾಕ್, ದೀಪಕ್ ​ಹೂ​ಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರ​ನ್‌, ಕೃನಾ​ಲ್‌ ಪಾಂಡ್ಯ​(​ನಾ​ಯ​ಕ), ಸ್ವಪ್ನಿಲ್ ಸಿಂಗ್, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್, ಆವೇ​ಶ್‌ ಖಾನ್.

Follow Us:
Download App:
  • android
  • ios