ಈ ಐಪಿಎಲ್‌ನ ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ್ದ ಹಾರ್ದಿಕ್, 2ನೇ ಪಂದ್ಯದಲ್ಲಿ 4 ಓವರ್ ಕೋಟಾ ಪೂರ್ತಿಗೊಳಿಸಿದ್ದರು. ಆನಂತರ 2 ಪಂದ್ಯಗಳಲ್ಲಿ ಬೌಲ್ ಮಾಡದ ಅವರು, ಆರ್‌ಸಿಬಿ ವಿರುದ್ಧ ಕೇವಲ 1 ಓವ‌ರ್ ಎಸೆದಿದ್ದರು. ಗಾಯಗೊಂಡಿರುವ ಕಾರಣ ಅವರು ಹೆಚ್ಚು ಬೌಲ್ ಮಾಡುತ್ತಿಲ್ಲ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.

ಮುಂಬೈ: ಗಾಯದ ಸಮಸ್ಯೆಯಿಂದ ಹಲವು ದಿನಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಆಕ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಗಾಯಗೊಂಡಿದ್ದಾರಾ ಎನ್ನುವ ಚರ್ಚೆ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಗಾಯಗೊಂಡಂತೆ ಕಾಣುತ್ತಿದ್ದಾರೆ, ಗಾಯದ ವಿಷಯ ಮುಚ್ಚಿಡುತ್ತಿದ್ದಾರೆ ಎನಿಸುತ್ತಿದೆ ಎಂದು ನ್ಯೂಜಿಲೆಂಡ್‌ನ ವೀಕ್ಷಕ ವಿವರಣೆಗಾರ ಸೈಮನ್ ಡೂಲ್ ಹೇಳಿದ್ದಾರೆ. 

ಈ ಐಪಿಎಲ್‌ನ ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ್ದ ಹಾರ್ದಿಕ್, 2ನೇ ಪಂದ್ಯದಲ್ಲಿ 4 ಓವರ್ ಕೋಟಾ ಪೂರ್ತಿಗೊಳಿಸಿದ್ದರು. ಆನಂತರ 2 ಪಂದ್ಯಗಳಲ್ಲಿ ಬೌಲ್ ಮಾಡದ ಅವರು, ಆರ್‌ಸಿಬಿ ವಿರುದ್ಧ ಕೇವಲ 1 ಓವ‌ರ್ ಎಸೆದಿದ್ದರು. ಗಾಯಗೊಂಡಿರುವ ಕಾರಣ ಅವರು ಹೆಚ್ಚು ಬೌಲ್ ಮಾಡುತ್ತಿಲ್ಲ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.

ಮ್ಯಾಕ್ಸ್‌ವೆಲ್‌ಗೆ ಗಾಯ, ನಾಳಿನ ಪಂದ್ಯಕ್ಕಿಲ್ಲ?

ಬೆಂಗಳೂರು: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ಆರ್‌ಸಿಬಿಯ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್‌ರೈಸರ್ಸ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಮ್ಯಾಕ್ಸ್‌ವೆಲ್‌ ಲಯದ ಸಮಸ್ಯೆಯನ್ನೂ ಎದುರಿಸುತ್ತಿದ್ದು, 6 ಪಂದ್ಯಗಳಲ್ಲಿ ಕೇವಲ 32 ರನ್‌ ಗಳಿಸಿದ್ದಾರೆ.

IPL 2024 ಪಂಜಾಬ್ ಎದುರು ಕೊನೆ ಓವರ್‌ ಥ್ರಿಲ್ಲರ್‌ ಗೆದ್ದ ರಾಜಸ್ಥಾನ ರಾಯಲ್ಸ್‌!

2027ರ ವಿಶ್ವಕಪ್‌ ಆಡುವ ಇಚ್ಛೆ ಇದೆ: ರೋಹಿತ್‌!

ನವದೆಹಲಿ: ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ, 2027ರ ಏಕದಿನ ವಿಶ್ವಕಪ್‌ ಆಡುವ ಇಚ್ಛೆ ಇದೆ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. ಈ ವರ್ಷ ಟಿ20 ವಿಶ್ವಕಪ್‌ ಬಳಿಕ ರೋಹಿತ್‌ ಅಂ.ರಾ. ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. 

ಮುಂಬೈ ವಿರುದ್ದ ಆರ್‌ಸಿಬಿಗೆ ಟಾಸ್‌ನಲ್ಲೂ ಆಗಿತ್ತಾ ಮೋಸ? ವೈರಲ್ ವಿಡಿಯೋಗೆ ಫ್ಯಾನ್ಸ್ ಉತ್ತರ!

ಈ ಸಂಬಂಧ ಅವರು ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನಿವೃತ್ತಿ ಬಗ್ಗೆ ಯೋಚಿಸಿಲ್ಲ. ನಾನು ಎಲ್ಲಿಯ ತನಕ ಆಡ ಬಹುದು ಎಂದು ಗೊತ್ತಿಲ್ಲ. ಸದ್ಯಕ್ಕೆ ಉತ್ತಮವಾಗಿ ಆಡುತ್ತಿದ್ದೇನೆ. ಏಕದಿನ ವಿಶ್ವಕಪ್‌ ಗೆಲ್ಲಬೇಕು ಎನ್ನುವ ಕನಸಿದೆ’ ಎಂದು ರೋಹಿತ್‌ ಹೇಳಿದ್ದಾರೆ.