Asianet Suvarna News Asianet Suvarna News

ಮುಂಬೈ ವಿರುದ್ದ ಆರ್‌ಸಿಬಿಗೆ ಟಾಸ್‌ನಲ್ಲೂ ಆಗಿತ್ತಾ ಮೋಸ? ವೈರಲ್ ವಿಡಿಯೋಗೆ ಫ್ಯಾನ್ಸ್ ಉತ್ತರ!

ಆರ್‌ಸಿಬಿ ಸೋಲಿನ ನೋವು ಅಭಿಮಾನಿಗಳಿಗೆ ಕಾಡುತ್ತಲೇ ಇದೆ. ಸೋಲಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಇಲ್ಲಿ ಅಂಪೈರ್ ಎಡವಟ್ಟುಗಳು ಇವೆ. ಇದರ ನಡುವೆ ಮುಂಬೈ-ಆರ್‌ಸಿಬಿ ನಡುವಿನ ಟಾಸ್ ವಿಡಿಯೋ ಒಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಟಾಸ್ ಗೆದ್ದರೂ ನಾಣ್ಯ ಉಲ್ಟಾ ಮಾಡಿ ಮುಂಬೈ ಗೆದ್ದಿದೆ ಎಂದು ಹೇಳಲಾಗಿತ್ತಾ? ವೈರಲ್ ವಿಡಿಯೋಗೆ ಮುಂಬೈ ಫ್ಯಾನ್ಸ್ ಉತ್ತರವೇನು?
 

Social Media video claims Toss during MI vs RCB Match Fans react on referee flipped toss coin allegation ckm
Author
First Published Apr 13, 2024, 3:53 PM IST

ಮುಂಬೈ(ಏ.13)  ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿಗೆ ಗೆಲುವು ಮರೀಚಿಕೆಯಾಗಿದೆ. ಒಂದು ಗೆಲುವನ್ನು ಹಬ್ಬದ ರೀತಿ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಪ್ರತಿ ಪಂದ್ಯದ ಬಳಿಕ ಸೋಲಿನ ಕಾರಣಗಳನ್ನು ಪಟ್ಟಿ ಮಾಡುವುದೇ ಆಯಿತು. ಮುಂಬೈ ವಿರುದ್ಧ ಆರ್‌ಸಿಬಿ ಸೋಲು ಅಭಿಮಾನಿಗಳಿಗೆ ತೀವ್ರ ನೋವು ತರಿಸಿದೆ. ಈ ಸೋಲಿಗೆ ಅಂಪೈರ್ ಮಾಡಿದ ಕೆಲ ಎಡವಟ್ಟುಗಳು ಕೂಡ ಕಾರಣವಾಗಿದೆ ಅನ್ನೋದು ಅಭಿಮಾನಿಗಳ ಆರೋಪ. ಇದರ ನಡುವೆ ಟಾಸ್ ವಿಡಿಯೋ ಒಂದು ವೈರಲ್ ಆಗಿದೆ. ಟಾಸ್ ಆರ್‌ಸಿಬಿ ಗೆದ್ದರೂ ನಾಣ್ಯವನ್ನು ಉಲ್ಟಾ ಮಾಡಿ ಮುಂಬೈ ಇಂಡಿಯನ್ಸ್ ಗೆದ್ದಿದೆ ಎಂದು ಘೋಷಣೆ ಮಾಡಲಾಗಿದೆ ಅನ್ನೋದು ಈ ವಿಡಿಯೋದಲ್ಲಿನ ಆರೋಪವಾಗಿದೆ. ಈ ವಿಡಿಯೋ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮುಂಬೈ ಫ್ಯಾನ್ಸ್ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿ ಉತ್ತರ ನೀಡಿದ್ದಾರೆ.

ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ನಾಣ್ಯ ಚಿಮ್ಮಿಸಿದ್ದರು. ಆರ್‌ಸಿಬಿ ನಾಯಕ ಫಾಫ್ ಡುಪ್ಲಸಿಸ್ ಟೇಲ್ಸ್ ಎಂದಿದ್ದಾರೆ . ನಾಣ್ಯ ಬಿದ್ದ ಬಳಿಕ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ನಾಣ್ಯದ ಬಳಿ ಬಂದು ಹೆಡ್, ಮುಂಬೈ ಟಾಸ್ ಎಂದಿದ್ದಾರೆ.  ಆದರೆ ಕಿಡಿಗೇಡಿಗಳು ಈ ವಿಡಿಯೋದ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಲೋ ಮೋಶನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಮ್ಯಾಚ್ ರೆಫ್ರಿ ನಾಣ್ಯ ತೆಗೆಯುವಾಗ ಉಲ್ಟಾ ಮಾಡಿದ್ದಾರೆ. ಆರ್‍‌ಸಿಬಿ ಟಾಸ್ ಗೆದ್ದರೂ ಮುಂಬೈ ಇಂಡಿಯನ್ಸ್ ಎಂದು ಘೋಷಣೆ ಮಾಡಿದ್ದಾರೆ ಅನ್ನೋ ಆರೋಪವನ್ನು ಈ ವಿಡಿಯೋ ಮಾಡುತ್ತಿದೆ.

 

 

RCB ಎದುರು ಮೋಸ ಮಾಡಿ ಪಂದ್ಯ ಗೆದ್ರಾ ಮುಂಬೈ ಇಂಡಿಯನ್ಸ್‌..? ಇಲ್ಲಿವೆ ನೋಡಿ 4 ಸಾಕ್ಷಿ..!

ಈ ವಿಡಿಯೋದಲ್ಲಿ ನಾಣ್ಯವನ್ನು ಉಲ್ಟಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ತುಣುಕನ್ನು ಹಾಕಿದ್ದಾರೆ. ಈ ವಿವಾದ ಜೋರಾಗುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಟಾಸ್ ವಿಡಿಯೋವನ್ನು ಪೋಸ್ಟ್ ಮಾಡಿ ಉತ್ತರ ನೀಡಿದ್ದಾರೆ. ಟಾಸ್ ಪ್ರಕ್ರಿಯೆ ಕ್ಲಿಯರ್ ವಿಡಿಯೋ ಇಲ್ಲಿದೆ. ಈ ವಿಡಿಯೋ ನೋಡಿದ ಬಳಿಕವೂ ಅನುಮಾನವಿದ್ದರೆ ಕಣ್ಣಿನ ಆಸ್ಪತ್ರೆ ಹೋಗಿ ಪರೀಶಿಲಿಸಿ ಎಂದು ನಕಲಿ ವಿಡಿಯೋಗೆ ತಿರುಗೇಟು ನೀಡಿದ್ದಾರೆ.

 

 

ಅಸಲಿಗೆ ಟಾಸ್ ಪ್ರಕ್ರಿಯೆಯಲ್ಲಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ನಾಣ್ಯವನ್ನು ಉಲ್ಟಾ ಮಾಡಿಲ್ಲ. ನೇರವಾಗಿ ನಾಣ್ಯ ಎತ್ತಿ ಪರಿಶೀಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದು ಘೋಷಿಸಿದ್ದಾರೆ. ಇಲ್ಲಿ ಯಾವುದೇ ರೀತಿಯ ಮೋಸವಾಗಿಲ್ಲ ಅನ್ನೋದು ವಿಡಿಯೋ ಸ್ಪಷ್ಟವಾಗಿ ಹೇಳುತ್ತಿದೆ. ಇತ್ತ ಆರ್‌ಸಿಬಿ ಅಭಿಮಾನಿಗಳು ಅಂಪೈರ್ ಕೆಲ ತೀರ್ಪುಗಳನ್ನು ಪ್ರಶ್ನಿಸಿದ್ದಾರೆ. ಆದರೆ ಟಾಸ್ ಪ್ರಕ್ರಿಯೆ ಕುರಿತು ಯಾವುದೇ ಆರೋಪ ಮಾಡಿಲ್ಲ. ಇದರ ನಡುವೆ ಕೆಲ ನಕಲಿ ಖಾತೆಗಳಲ್ಲಿ ಈ ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಮುಂಬೈ ವಿರುದ್ಧ ಸೋತ್ರೂ, ಫ್ಯಾನ್ಸ್ ಮನಗೆದ್ದ ಕೊಹ್ಲಿ..! ಕೊಹ್ಲಿಯ ಒಂದೇ ಮಾತಿನಿಂದ ಮುಂಬೈ ಫ್ಯಾನ್ಸ್ ಸೈಲೆಂಟ್..!
 

Follow Us:
Download App:
  • android
  • ios